A- A A+
  • 6363308040
  • 1926
ಕರ್ನಾಟಕ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ಘಟಕದ ವತಿಯಿಂದ ಹಲವೆಡೆ ಶ್ರೀಗಂಧ ಕುರಿತ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

• ಚಿಕ್ಕಮಗಳೂರು ಮತ್ತು ಹಾಸನ ವಿಭಾಗಗಳಲ್ಲಿ 23.01.2020 ರಂದು • ರಾಮನಗರದಲ್ಲಿ 16.01.2020 ರಂದು. • ತುಮಕೂರಿನಲ್ಲಿ 17.01.2020 ರಂದು. • ಚಿತ್ರದುರ್ಗದಲ್ಲಿ 24.01.2020 ರಂದು. • ದಾವಣಗೆರೆಯಲ್ಲಿ 25.01.2020 ರಂದು.

Butterfly and Bee festival , 2019

The Karnataka Ecotourism Development Board in association with Karnataka Forest Department, National Centre for Biological Sciences, The Bengaluru Butterfly club and Indian Foundation for Butterflies organized Butterfly and Bee festival twice in the year 2019 to create awareness about the important ecological roles played by butterflies and bees. This festival involved a walk with nature and identification of different species of butterflies, sharing interesting facts about them, educating children about their life cycles through interesting talks and enacting plays. First Butterfly and Bee festival was conducted at the campus of Institute of Wood Science and Technology, Malleshwaram, Bengaluru on 15th July 2019. Around 70 members and school children attended the festival . The 2nd Butterfly and Bee festival was held at Forest Research Centre, Doresanipalya, J.P Nagar, Bengaluru on 23rd November 2019. School children from various schools and 120 members participated in this festival.

ಪ್ರಮಾಣೀಕೃತ ಪ್ರಕೃತಿ ಮಾರ್ಗದರ್ಶಿ (Certified Nature Guide ) ತರಬೇತಿ ಕಾರ್ಯಕ್ರಮ

ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ 2019 ಯು ನವೆಂಬರ್ 12, ೨೦೧೯ರಿಂದ ನವೆಂಬರ್‌ 16, ೨೦೧೯ ರವರೆಗೆ “ಪ್ರಮಾಣೀಕೃತ ಪ್ರಕೃತಿ ಮಾರ್ಗದರ್ಶಿ” ತರಬೇತಿ ಕಾರ್ಯಕ್ರಮವನ್ನು ಬನ್ನೇರುಘಟ್ಟ ಪ್ರಕೃತಿ ಶಿಬಿರದಲ್ಲಿ ಆಯೋಜಿಸಿತ್ತು. ತರಬೇತಿ ಕಾರ್ಯಕ್ರಮದಲ್ಲಿ 36 ಮಂದಿ ಭಾಗವಹಿಸಿದ್ದರು. ಪ್ರಕೃತಿ ಮಾರ್ಗದರ್ಶಿ ತರಬೇತಿ ಕಾರ್ಯಕ್ರಮದ ಉದ್ದೇಶಗಳು ಈ ಕೆಳಗಿನಂತಿರುತ್ತದೆ: • ಸ್ಥಳೀಯ ಯುವಕರಿಗೆ ಪ್ರಕೃತಿ, ವನ್ಯಜೀವಿಗಳು ಮತ್ತು ಕೌಶಲ್ಯಗಳ ವಿಷಯಗಳಲ್ಲಿ ಮೂಲಭೂತ ತರಬೇತಿಯನ್ನು ನೀಡುವುದು, • ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಕುರಿತು ತರಬೇತಿ ಪಡೆದ ನಂತರ ಹೀಗೆ ತರಬೇತಿ ಪಡೆದವರನ್ನು ಪ್ರಮಾಣೀಕರಿಸುವುದು. ಈ ರೀತಿಯ ಪ್ರಮಾಣಿಕೃತ ವ್ಯಕ್ತಿಗಳು ಕರ್ನಾಟಕ ಅರಣ್ಯ ಇಲಾಖೆಯು ಜವಾಬ್ದಾರಿಯುತ ಮತ್ತು ನಿಯಂತ್ರಿತ ರೀತಿಯಲ್ಲಿ ನಡೆಸುವ ಪರಿಸರ ಹಾದಿಗಳಲ್ಲಿ ಪ್ರಕೃತಿ ಮಾರ್ಗದರ್ಶಿಗಳಾಗಿ ಉದ್ಯೋಗ ಪಡೆಯಬಹುದಾಗಿರುತ್ತದೆ.ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಇದುವರೆಗೆ 253 ಕ್ಕೂ ಹೆಚ್ಚು ಪ್ರಮಾಣೀಕೃತ ನೇಚರ್ ಗೈಡ್‌ಗಳಿಗಾಗಿ ಇಂತಹ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿರುತ್ತದೆ. ಸಾಮಾನ್ಯವಾಗಿ, ಈ ನೇಚರ್ ಗೈಡ್ ತರಬೇತಿ ಕಾರ್ಯಕ್ರಮವು 5 ದಿನಗಳ ಅವಧಿಯದ್ದಾಗಿರುತ್ತದೆ ಸದರಿ ತರಬೇತಿಗಳಲ್ಲಿ ಭಾಗವಹಿಸುವವರನ್ನು / ಪ್ರಶಿಕ್ಷಣಾರ್ಥಿಗಳನ್ನು ಆಯಾ ಕ್ಷೇತ್ರದ ವ್ಯಾಪ್ತಿಯ ಅಧಿಕಾರಿಗಳು ಆಯ್ಕೆಮಾಡುತ್ತಾರೆ. ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಮಾನ್ಯವಾಗಿ ಅರಣ್ಯ ವೀಕ್ಷಕರು ಮತ್ತು ಈಗಾಗಲೇ ಚಾರಣ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿರುವವರನ್ನು , ಪರಿಸರ/ ಪ್ರಕೃತಿ ವ್ಯಾಖ್ಯಾನ ಕೇಂದ್ರಗಳನ್ನು ನಿರ್ವಹಿಸುವವರನ್ನು ಮತ್ತು ಈ ರೀತಿಯ ವಿವಿಧ ಹಿನ್ನಲೆಗಳನ್ನು ಹೊಂದಿರುವವರನ್ನು ಆಯ್ಕೆಮಾಡಿಕೊಳ್ಳಲಾಗುತ್ತದೆ. ತರಬೇತಿ ಕಾರ್ಯಕ್ರಮದಲ್ಲಿ ನಿಗದಿಪಡಿಸಿದಂತೆ ತರಗತಿಯ ಅವಧಿಗಳಲ್ಲಿ ಮತ್ತು ಎಲ್ಲಾ ಕ್ಷೇತ್ರ ಚಟುವಟಿಕೆಗಳಲ್ಲಿ ತರಬೇತಾರ್ಥಿಗಳು ಭಾಗವಹಿಸುತ್ತಾರೆ. ಪ್ರಕೃತಿ ಚಾರಣದ ಸಂದರ್ಭದಲ್ಲಿ ಒದಗಬಹುದಾದ ಅಪಾಯದ ಮೌಲ್ಯಮಾಪನ, ಅಪಾಯ ನಿರ್ವಹಣೆ, ತುರ್ತು ಕಾರ್ಯವಿಧಾನಗಳು, ಭೂವಿಜ್ಞಾನದ ಮೂಲಕ ನೈಸರ್ಗಿಕ ಇತಿಹಾಸ, ಪಕ್ಷಿಗಳ ಮೂಲ ಮಾಹಿತಿ, ಉಭಯಚರಗಳು, ಸಸ್ತನಿಗಳು, ಪ್ರಮುಖ ಮರ ಪ್ರಭೇದಗಳು, ಆರೋಹಿಗಳು ಮುಂತಾದ ವಿವಿಧ ವಿಷಯಗಳ ಬಗ್ಗೆ ಸಂಪನ್ಮೂಲ ಸಿಬ್ಬಂದಿಗಳು ತರಬೇತಿ ನೀಡುತ್ತಾರೆ.

03ಮತ್ತು04-01-2020 ರಂದು ಶ್ರೀಗಂಧ ಬೇಸಾಯ ಕುರಿತ ಸೆಮಿನಾರ್ ಆಯೋಜಿಸಲಾಗಿತ್ತು

ಶ್ರೀಗಂಧ ಬೆಳೆಗಾರರ ಸಂಘದ ಸಹಯೋಗದೊಂದಿಗೆ 2020 ರ ಜನವರಿ 3 ಮತ್ತು 4 ರಂದು ಬೆಂಗಳೂರಿನ ಅರಣ್ಯ ಭವನದಲ್ಲಿ ಸಾಮಾಜಿಕ ಅರಣ್ಯ ವಿಭಾಗದಿಂದ ಶ್ರೀಗಂಧವನ್ನು ಕೃಷಿ-ಅರಣ್ಯದಲ್ಲಿ ಬೆಳೆಸುವ ಬಗ್ಗೆ ಎರಡು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಹಿರಿಯ ಅರಣ್ಯ ಅಧಿಕಾರಿಗಳು, ಮತ್ತು ಬೆಂಗಳೂರು ವೃತ್ತದ ಕ್ಷೇತ್ರ ಅಧಿಕಾರಿಗಳು ಭಾಗವಹಿಸಿದ್ದರು.

6 ನೇ ಕರ್ನಾಟಕ ರಾಜ್ಯ ಪಕ್ಷಿ ಉತ್ಸವ, 2020

Karnataka Ecotourism Development Board, in collaboration with Karnataka Forest Department is organizing 6th Karnataka State Bird festival 2020 in the foot hills of Nandi Hills from 17th – 19th of Jan 2020. Located about 60 km north of Bengaluru, Nandi Hills is part of a conspicuous range of hills consisting of four other hillocks – the Brahmagiri, Channagiri, Dibbagiri and Skandagiri. Nandi Hills is one of the most sought-after bird-watching destinations of Bangalore. It is known to harbor over 200 species of birds. Some of the important birds that can be seen at Nandi Hills include, Blue-headed Rock Thrush, White-throated Ground-thrush, Eurasian Blackbird, Pied Thrush, Indian Blue Robin, Olive-backed (Tree) Pipit, Ultramarine Flycatcher, Verditer Flycatcher, Spotted Babbler, Indian Scimitar-Babbler. The theme for the festival is Conservation of Vultures. Though Long Billed Vultures are not locally present in Nandi Hills, this species is endangered and awareness is required for its conservation. During this festival technical sessions by experts have been arranged along with birding visits. Interested birders may register at https://bit.ly/2ZA2Eko or www.myecotrip.com

2018 ಹುಲಿ ಗಣತಿ ವರದಿ ಬಿಡುಗಡೆಯಾದ ಸಂಬ್ರಮದ ಕ್ಷಣ

ಜಾಗತಿಕ ಹುಲಿ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ಹುಲಿ ಗಣತಿ ಪಟ್ಟಿಯನ್ನು ಬಿಡುಗಡೆ ಮಾಡಲಾಯ್ತು. ಈ ವೇಳೆ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಹಾಗೂ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾದ ಶ್ರೀ ಪ್ರಕಾಶ್ ಜಾವ್ಡೇಕರ್ ಅವರನ್ನು ವಿವಿಧ ರಾಜ್ಯಗಳ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಮುಖ್ಯಸ್ಥರು ಭೇಟಿ ಮಾಡಿದರು.