A- A A+
  • 6363308040
  • 1926
Tree Park is an area having predominantly tree growth, both natural and planted, along with herbs, shrubs, climbers etc. The purpose of creating Tree Parks in or near urban locations is to provide urban dwellers an opportunity to experience nature at accessible distance. Further basic public amenities such as walking path, nature trails, drinking water facilities, children’s play area, toilets etc., are developed for the benefit of general public in Tree Parks. Tree Park scheme aims to provide natural environment to the urban dwellers at accessible distance to enhance appreciation about nature among them. Tree Parks have been established near cities/ towns so that urban dwellers can experience nature as well as engage in activities such as walking, jogging, cycling, Yoga, meditation etc., which will help improve their health and general well being. In most of the Tree Parks Children’s play areas have been developed for their enjoyment and physical activities.

ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ) ನೋಡಿ

  • ಮರ ಉದ್ಯಾನ ಎಂದರೇನು

    ಮರ ಉದ್ಯಾನ ಎಂದರೆ, ಗಿಡಮೂಲಿಕ, ಕುರುಚಲು ಗಿಡ, ಬಳ್ಳಿಗಳ ಜೊತೆಗೆ ನೈಸರ್ಗಿಕ ಮತ್ತು ನೆಟ್ಟ ಮರಗಳಿರುವ ಪ್ರದೇಶ. ನಗರ ಪ್ರದೇಶಗಳಲ್ಲಿ ಅಥವಾ ಸಮೀಪ ಮರ ಉದ್ಯಾನಗಳನ್ನು ಬೆಳೆಸುವ ಉದ್ದೇಶ ಏನೆಂದರೆ ಸಮೀಪದ ಪ್ರದೇಶದಲ್ಲಿ ನಗರವಾಸಿಗಳಿಗೆ ನಿಸರ್ಗದ ಅನುಭವ ಪಡೆಯಲು ಅವಕಾಶ ಕಲ್ಪಿಸುವುದು. ಇದರ ಜೊತೆಗೆ ನಡೆದಾಡುವ ಹಾದಿ, ನಿಸರ್ಗ ಹಾದಿ, ಕುಡಿಯುವ ನೀರಿನ ಸೌಕರ್ಯ, ಮಕ್ಕಳ ಆಟದ ಸ್ಥಳ, ಶೌಚಾಲಯಗಳು ಮುಂತಾದ ಸಾರ್ವಜನಿಕ ಮೂಲಸೌಕರ್ಯಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಮರ ಉದ್ಯಾನಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ.

  • ಮರ ಉದ್ಯಾನ ಸ್ಕೀಮ್‌ ಅನ್ನು ಕರ್ನಾಟಕ ಸರ್ಕಾರ ಯಾವ ವರ್ಷ ಆರಂಭಿಸಿತು

    ಕರ್ನಾಟಕ ಸರ್ಕಾರ ಮರ ಉದ್ಯಾನ ಸ್ಕೀಮ್‌ ಅನ್ನು 2011-12ನೇ ಆರ್ಥಿಕ ವರ್ಷದಲ್ಲಿ ಆರಂಭಿಸಿತು.

  • ಮರ ಉದ್ಯಾನ ಸ್ಕೀಮ್‌ನ ಉದ್ದೇಶಗಳು ಏನು

    ಮರ ಉದ್ಯಾನ ನಗರವಾಸಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಹೆಚ್ಚಿಸಲು ಅವರ ಸಮೀಪದ ಸ್ಥಳದಲ್ಲಿ ನೈಸರ್ಗಿಕ ವಾತಾವಾರಣ ಒದಗಿಸಲು ಉದ್ದೇಶ ಹೊಂದಿದೆ. ಮರ ಉದ್ಯಾನಗಳನ್ನು ನಗರಗಳು/ ಪಟ್ಟಣಗಳ ಸಮೀಪ ನಿರ್ಮಿಸಲಾಗಿದೆ ಇದರಿಂದ ಅವರು ನಡೆದಾಡುವುದು, ಜಾಗಿಂಗ್‌ ಮಾಡುವುದು, ಸೈಕ್ಲಿಂಗ್‌, ಯೋಗ, ಧ್ಯಾನ ಮುಂತಾದ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತದೆ ಹಾಗೂ ಇದರಿಂದ ಅವರ ಆರೋಗ್ಯ ಮತ್ತು ಯೋಗಕ್ಷೇಮ ಸುಧಾರಿಸುತ್ತದೆ. ಹೆಚ್ಚಿನ ಮರ ಉದ್ಯಾನಗಳಲ್ಲಿ ಮಕ್ಕಳ ಮನರಂಜನೆ ಮತ್ತು ದೈಹಿಕ ಚಟುವಟಿಕೆಗಳಿಗಾಗಿ ಮಕ್ಕಳ ಆಟದ ಸ್ಥಳವನ್ನು ನಿರ್ಮಿಸಲಾಗಿದೆ.

  • ಮರ ಉದ್ಯಾನ ಸ್ಕೀಮ್‌ ಅನುಷ್ಠಾನಕ್ಕೆ ಇರುವ ಮಾರ್ಗಸೂತ್ರಗಳು ಯಾವುವು

    ಮರ ಉದ್ಯಾನ ಸ್ಕೀಮ್‌ ವಿಶಿಷ್ಟ ಸ್ಕೀಮ್‌ ಆಗಿದ್ದು ಕರ್ನಾಟಕದಲ್ಲಿ ಮೊದಲ ಬಾರಿಗೆ ಆರಂಭಿಸಲಾಗಿದೆ. ಈ ಸ್ಕೀಮ್‌ ಇದರ ಆರಂಭದ ನಂತರ ವಿಕಸಿತಗೊಂಡಿದೆ ಮತ್ತು ಕಾಲಕಾಲಕ್ಕೆ ಮಾರ್ಗಸೂತ್ರಗಳನ್ನು ಜಾರಿ ಮಾಡಲಾಗಿದೆ. ಮಾರ್ಗಸೂತ್ರಗಳ ಅನುಸಾರ, ಎಲ್ಲ ಮರ ಉದ್ಯಾನಗಳು ಪ್ರಸ್ತುತ ನಡೆಯುತ್ತಿರುವ ಕೆಲಸಗಳು ಹಾಗೂ ಪ್ರಸ್ತಾವಿತ ಕಾರ್ಯಗಳ ಪಟ್ಟಿಯ ಜೊತೆಗೆ ಮರ ಉದ್ಯಾನದ ಸರ್ವೇ ಸ್ಕೆಚ್‌ನೊಂದಿಗೆ ವಿವರವಾದ ಯೋಜನಾ ವರದಿ(ಡಿಪಿಆರ್‌) ಹೊಂದಿರಬೇಕು. ಎಲ್ಲ ಚಟುವಟಿಕೆಗಳು ಡಿಪಿಆರ್ ಅನುಮೋದನೆಯ ಅನುಸಾರ ಇರಬೇಕು. ಪ್ರದೇಶದ ನಿರ್ದಿಷ್ಟ ಅಗತ್ಯಗಳನ್ನು ಪರಿಗಣಿಸುವುದರೊಂದಿಗೆ ಪ್ರದೇಶದ ನೈಸರ್ಗಿಕ ರಚನೆಯನ್ನು ಕಾಯ್ದುಕೊಳ್ಳುತ್ತಲೇ ಸಾರ್ವಜನಿಕರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಉದ್ದೇಶವನ್ನು ಮರ ಉದ್ಯಾನ ಸ್ಕೀಮ್‌ ಹೊಂದಿದೆ. ಮಾರ್ಗಸೂತ್ರಗಳನ್ನು ಡೌನ್‌ಲೋಡ್ ಮಾಡಿ.

  • ಕರ್ನಾಟಕದಲ್ಲಿ ಎಷ್ಟು ಮರ ಉದ್ಯಾನಗಳನ್ನು ನಿರ್ಮಿಸಲಾಗಿದೆ

    2011-12ರಲ್ಲಿ ಮರ ಉದ್ಯಾನ ಸ್ಕೀಮ್‌ ಆರಂಭವಾದಾಗಿನಿಂದ, ಒಟ್ಟು 132 ಮರ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.

  • ಮರ ಉದ್ಯಾನಗಳಿಂದ ಸಾರ್ವಜನಿಕರಿಗೆ ಸಿಗುವ ಪ್ರಯೋಜನಗಳೇನು

    ಮನರಂಜನೆ ಮತ್ತು ವಿರಾಮಕ್ಕೆ ಸ್ಥಳ ಒದಗಿಸುವುದರೊಂದಿಗೆ ಸಾರ್ವಜನಿಕರಲ್ಲಿ, ವಿಶೇಷವಾಗಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಪ್ರಾಥಮಿಕ ಉದ್ದೇಶದಿಂದ ಮರ ಉದ್ಯಾನಗಳನ್ನು ನಿರ್ಮಿಸಲಾಗಿದೆ. ಮರಗಳನ್ನು ಬೆಳೆಸುವುದರಿಂದ ಸ್ವಚ್ಛ ಗಾಳಿ, ನೀರು, ಸುಧಾರಿತ ಅಂತರ್ಜಲ ಮುಂತಾದ ಪರಿಸರ ಪ್ರಯೋಜನಗಳು ಸಿಗುತ್ತವೆ.

  • ಕರ್ನಾಟಕ ಸರ್ಕಾರಕ್ಕೆ ಹೊಸ ಮರ ಉದ್ಯಾನಗಳನ್ನು ರಚಿಸುವ ಯೋಜನೆ ಇದೆಯೇ

    ಅನುದಾನದ ಲಭ್ಯತೆ ಮತ್ತು ಸಂಬಂಧಿತ ಪ್ರಾಧಿಕಾರದ ಅನುಮೋದನೆಗೆ ಒಳಪಟ್ಟು, ಇಲ್ಲಿಯವರೆಗೆ ಮರ ಉದ್ಯಾನದಡಿ ಬಳಸದ ಸೂಕ್ತ ಪ್ರದೇಶ ನಗರದ ಸಮೀಪ ಇದ್ದಲ್ಲಿ ಹೊಸ ಮರ ಉದ್ಯಾನಗಳನ್ನು ರಚಿಸಬಹುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಟ ಒಂದು ಮರ ಉದ್ಯಾನವನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ.

  • ಮರ ಉದ್ಯಾನಗಳ ನಿರ್ವಹಣೆಗೆ ಸಂಬಂಧಿಸಿ ಯಾವ ಕಾರ್ಯವಿಧಾನಗಳು ಜಾರಿಯಲ್ಲಿವೆ

    ಮರ ಉದ್ಯಾನಗಳ ನಿರ್ವಹಣೆಗಾಗಿ, ಸಂಬಂಧಿತ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ಇತರ ಇಲಾಖೆಗಳ ಪ್ರತಿನಿಧಿಗಳು, ಪ್ರದೇಶದ ಜನಪ್ರತಿನಿಧಿಗಳು, ಸ್ಥಳೀಯ ತಜ್ಞರು ಮುಂತಾದವರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತದೆ. ಕೆಲವೊಮ್ಮೆ ಮರ ಉದ್ಯಾನಗಳ ನಿರ್ವಹಣೆಗೆ ಆರ್ಥಿಕ ನೆರವನ್ನೂ ನೀಡಲಾಗುತ್ತದೆ.

  • ಮರ ಉದ್ಯಾನಗಳ ನಿರ್ವಹಣೆಯಲ್ಲಿ ಸಾರ್ವಜನಿಕರ ಜವಾಬ್ದಾರಿಗಳು ಏನು

    ಮರ ಉದ್ಯಾನ ಸಾರ್ವಜನಿಕರಿಗಾಗಿ ಸೃಷ್ಟಿಸಿದ ಸೊತ್ತಾಗಿರುವುದರಿಂದ, ಅದನ್ನು ಸ್ವಚ್ಛವಾಗಿಸಿರಿಕೊಳ್ಳುವುದು ಮತ್ತು ಪ್ರದೇಶದಲ್ಲಿ ಕಸ ಎಸೆಯದೆ ಇರುವುದು ಅವರ ಜವಾಬ್ದಾರಿಯಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ಅಕ್ರಮ ಚಟುವಟಿಕೆ ಕಂಡುಬಂದರೆ ಅವರು ಸಂಬಂಧಿತ ಅರಣ್ಯ ಅಧಿಕಾರಿಗೆ ವರದಿ ಮಾಡಬೇಕು. ಬೆಂಕಿ ಆಕಸ್ಮಿಕಗಳು ಆದಲ್ಲಿ ಕೂಡ ಅವರು ಸಂಬಂಧಿತ ಅಧಿಕಾರಿಗಳಿಗೆ ಸಹಕರಿಸಬೇಕು.

  • ಮರ ಉದ್ಯಾನಗಳ ಸುಧಾರಣೆ ಮತ್ತು ನಿರ್ವಹಣೆಗೆ ಕಾರ್ಪೊರೆಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ನಿಧಿಗಳ ಬಳಕೆ ಮಾಡಬಹುದೇ

    ಸರ್ಕಾರದ ಅನುದಾನ ಸೀಮಿತವಾಗಿರುವುದರಿಂದ, ಮರ ಉದ್ಯಾನಗಳಿಗೆ ಸಿಎಸ್‌ಆರ್‌ ನಿಧಿ ಬಳಸಬಹುದಾಗಿದೆ. ಆದರೆ, ಸಂಬಂಧಿತ ಮರ ಉದ್ಯಾನಕ್ಕೆ ಅನುಮೋದಿತವಾಗಿರುವ ವಿವರವಾದ ಯೋಜನಾ ವರದಿಯ ಅನುಸಾರ ಯಾವುದೇ ಚಟುವಟಿಕೆಯನ್ನು ಕೈಗೊಳ್ಳಬೇಕು.