ಸಂರಕ್ಷಣಾ ಮೀಸಲು

ರಾಷ್ಟ್ರೀಯಉದ್ಯಾನವನ, ಅಭಯಾರಣ್ಯ ಅಥವಾ ಸಂರಕ್ಷಣಾ ಮೀಸಲು ಪ್ರದೇಶವನ್ನು ಒಳಗೊಂಡಿರದ ಯಾವುದೇ ಖಾಸಗಿ ಅಥವಾ ಸಮುದಾಯ ಭೂಮಿಯನ್ನು ಸಮುದಾಯ ಅಥವಾ ವ್ಯಕ್ತಿಯು ವನ್ಯಜೀವಿಗಳನ್ನು ಸಂರಕ್ಷಿಸಲು ಸ್ವಯಂಪ್ರೇರಿತರಾಗಿದಲ್ಲಿ ಅಂಥ ಆವಾಸಸ್ಥಾನವನ್ನು ರಾಜ್ಯ ಸರ್ಕಾರವು ಸಮುದಾಯ ಮೀಸಲು ಎಂದು ವನ್ಯಜೀವಿ (ಸಂರಕ್ಷಣಾ) ಕಾಯ್ದೆ ೧೯೭೨ ರಕಲಂ36 ಸಿ ಯ ಅಡಿಯಲ್ಲಿ ಅಧಿಸೂಚಿಸಬಹುದಾಗಿರುತ್ತದೆ. ಅಂತಹ ಸಮುದಾಯ ಮೀಸಲುಗಳನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ೧೯೭೨ ರ ಕಲಂ ೩೬ಡಿ ರಡಿ ನಿರ್ವಹಣೆಮಾಡಲಾಗುತ್ತದೆ.

ನಮ್ಮ ಸಂರಕ್ಷಣಾ ಮೀಸಲುಗಳನ್ನು ಅನ್ವೇಷಿಸಿ

ಪರಿಚಯ
ಸ್ಥಳ ಮತ್ತು ವಿಸ್ತಾರ
ಮಹತ್ವ
ಭೂದೃಶ್ಯ
ಅಂಕಸಮುದ್ರ ಪಕ್ಷಿ ವನ್ಯಧಾಮ

a. ಅಂಕ ಸಮುದ್ರ ಪಕ್ಷಿಧಾಮ ಮೀಸಲು (ಅಂ.ಪ.ಮೀ) ಉತ್ತರ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದ ಮೊದಲ ಪಕ್ಷಿ ಸಂರಕ್ಷಣಾ ಧಾಮವಾಗಿದೆ. b. ಇದನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಉಪವಿಭಾಗ 36-ಎ ಯಡಿ ಸ್ಥಳೀಯ ಮತ್ತು ವಲಸಿಗ ನೀರಿನ ಹಕ್ಕಿಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಘೋಷಣೆ ಮಾಡಲಾಗಿದೆ. c. ಇದು ತಾತ್ಕಾಲಿಕ ನೀರಿನ ಮೂಲವಾಗಿದ್ದು (ಟ್ಯಾಂಕ್ ಬೆಡ್) ಸಾಕಷ್ಟು ಕರಿಜಾಲಿ ಮರ (ಅಕೇಸಿಯಾ ನಿಲೊಟಿಕಾ)ಗಳೊಂದಿಗೆ 244.04 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ನೀರಿನ ಹಕ್ಕಿಗಳಿಗೆ ಸಂತಾನೋತ್ಪತ್ತಿ ಮತ್ತು ಮರಿಗಳ ಪಾಲನೆಯ ಕೇಂದ್ರವಾಗಿದೆ. d. ಕರ್ನಾಟಕ ಅರಣ್ಯ ಇಲಾಖೆಯ ಪ್ರಯತ್ನದಿಂದ “ಹಿಂದೊಮ್ಮೆ ಒಣಗಿದ ಕೆರೆಯಾಗಿದ್ದ ಪ್ರದೇಶ ಹೇಗೆ ಗೂಡುಕಟ್ಟುವ ಪಕ್ಷಿಗಳಿಗೆ ಆಶ್ರಯತಾಣವಾಯಿತು” ಎನ್ನುವುದಕ್ಕೆ ಅಂಕಸಮುದ್ರ ಪಕ್ಷಿಧಾಮ ಮೀಸಲು (ಅಂ.ಪ.ಮೀ) ಯಶೋಗಾಥೆಯಾಗಿದೆ.

ಸ್ಥಳ ಮತ್ತು ವಿಸ್ತಾರ

a. ಅಂಕಸಮುದ್ರ ಪಕ್ಷಿಧಾಮ ಮೀಸಲು ಪ್ರದೇಶವನ್ನು ದಿನಾಂಕ 31.01.2015ರ ಸರ್ಕಾರಿ ಅಧಿಸೂಚನೆ ಸಂಖ್ಯೆ FEE 04 FWL 2017ರ ಮೂಲಕ ಅಧಿಸೂಚಿತಗೊಳಿಸಲಾಗಿದೆ. b. ಇದು ತುಂಗಭದ್ರಾ ಅಣೆಕಟ್ಟಿನ ಹಿನ್ನೀರು ಪ್ರದೇಶ (ಸುಮಾರು ಒಂದು ಕಿಮೀ ದೂರ)ದಲ್ಲಿ ಇದೆ. c. ಇದು ಬಳ್ಳಾರಿ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲೂಕು, ಅಂಕಸಮುದ್ರ ಹಳ್ಳಿಯ ಸರ್ವೇ ನಂಬರ್ 203ರ ಸುಮಾರು 244.04 ಎಕರೆ (98.76 ಹೆಕ್ಟೇರ್ ಅಥವಾ 0.988 ಸ.ಕಿ.ಮೀ.) ಪ್ರದೇಶದಲ್ಲಿ ಹರಡಿಕೊಂಡಿದೆ.

ಮಹತ್ವ

a. ಅಂಕಸಮುದ್ರ ಪಕ್ಷಿಧಾಮ ಮೀಸಲು ಒಂದು ಪ್ರಮುಖ ಸಂರಕ್ಷಿತ ಪ್ರದೇಶ ಮತ್ತು ಒಣ ವಲಯದ (ಉತ್ತರ ಕರ್ನಾಟಕ) ಏಕೈಕ ಪಕ್ಷಿ ಧಾಮವಾಗಿದ್ದು, ಸ್ಥಳೀಯ ಮತ್ತು ವಲಸಿಗ ಪಕ್ಷಿ ಪ್ರಭೇದ ಎರಡಕ್ಕೂ ಆಶ್ರಯ ಒದಗಿಸುತ್ತದೆ. b. ಮುಖ್ಯವಾಗಿ ಸುಮಾರು 200 ವಿಧದ ಪಕ್ಷಿ ಪ್ರಭೇದಗಳು ಗರಿಷ್ಟ ಮಟ್ಟಕ್ಕೆ ಸಂತಾನೋತ್ಪತ್ತಿ ಮಾಡಲು ಅವಕಾಶ ಕಲ್ಪಿಸುವುದಕ್ಕೆ ಮತ್ತು ಅಳಿವಿನಂಚಿನಿಂದ ಅವುಗಳನ್ನ ಸಂರಕ್ಷಿಸುವುದಕ್ಕೆ ಈ ಪ್ರದೇಶವನ್ನು ಪಕ್ಷಿಧಾಮ ಮೀಸಲು ಎಂದು ಘೋಷಣೆ ಮಾಡಲಾಯಿತು. c. ಪಕ್ಷಿಧಾಮ ಮೀಸಲು ಪ್ರದೇಶಕ್ಕೆ ಭೇಟಿ ನೀಡುವ ಅಳಿವಿನಂಚಿನಲ್ಲಿರುವ ಪಕ್ಷಿಗಳಲ್ಲಿ ಗ್ರೇಟರ್ ಫ್ಲೆಮಿಂಗೊ, ಬಣ್ಣದ ಕೊಕ್ಕರೆ, ಚುಕ್ಕೆಯ ಪೆಲಿಕನ್, ಕಾಂಬ್ ಡಕ್, ಇಗ್ರೆಟ್ಸ್, ಕಾರ್ಮೊರಂಟ್, ಇಬಿಸ್, ಓರಿಯಂಟಲ್ ಡಾರ್ಟರ್, ಗ್ರೆನಿಸ್, ಸ್ಪಾಟ್ ಬಿಲ್ಡ್ ಡಕ್ ಮತ್ತು ವ್ಹಿಸ್ಲಿಂಗ್ ಡಕ್ ಮುಂತಾದವು ಸೇರಿವೆ. ಕೆಲವು ಹಕ್ಕಿಗಳು ಸಂತಾನೋತ್ಪತ್ತಿ ಋತುವಿನಲ್ಲಿ ಯುರೋಪಿನ ದೇಶಗಳಿಂದ ವಲಸೆ ಬರುತ್ತದೆ ಮತ್ತು ಇಲ್ಲಿ ಕಂಡುಬರುವ ಸುಮಾರು 11 ಪ್ರಭೇದಗಳ ಪಕ್ಷಿಗಳು ಐಯುಸಿಎನ್ ಕೆಂಪು ಪಟ್ಟಿಯಲ್ಲಿವೆ. d. ಅಂಕಸಮುದ್ರ ಪಕ್ಷಿಧಾಮ ಮೀಸಲು ಪ್ರದೇಶ ಈ ಭೂಪರಿಸರದ ಜೀವವೈವಿಧ್ಯತೆಯನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಅವಕಾಶ ಒದಗಿಸುತ್ತದೆ. e. ಮುಂದುವರಿದು, ಸ್ಥಳೀಯ ಜನರ ನೀರು ಮತ್ತು ಜೀವನ ಸುರಕ್ಷತೆ ಖಾತ್ರಿಪಡಿಸುವುದಕ್ಕೆ ಪಕ್ಷಿಧಾಮ ಮೀಸಲು ಭಾರೀ ಅವಕಾಶ ಒದಗಿಸುತ್ತದೆ.

ಭೂದೃಶ್ಯ

ಅಂಕಸಮುದ್ರ ಪಕ್ಷಿಧಾಮ ಮೀಸಲು, ಸುಮಾರು 37,800 ಹೆಕ್ಟೇರ್ನಷ್ಟಿರುವ ತುಂಗಭದ್ರಾ ಅಣೆಕಟ್ಟು ಹಿನ್ನೀರು ಪ್ರದೇಶದಲ್ಲಿದ್ದು, ವಲಸಿಗ ಪಕ್ಷಿಗಳಿಗೆ ಪ್ರಮುಖ ಆಕರ್ಷಣೆಯಾಗಿದೆ.ಇದು ತಾತ್ಕಾಲಿಕ ಜಲಾಶಯವಾಗಿರುವುದರಿಂದ, ಮಾನ್ಸೂನ್ ಋತುವಿನಲ್ಲಿ ತುಂಗಭದ್ರ ಅಣೆಕಟ್ಟು ಭರ್ತಿಯಾಗಿರುವಾಗ ಮಾತ್ರ ಕೆರೆ ತುಂಬಿರುತ್ತದೆ.ಬೇಸಿಗೆಯಲ್ಲಿ, ಕೆರೆ ಒಣಗಿರುತ್ತದೆ ಮತ್ತು ಇತ್ತೀಚೆಗೆ ತುಂಗಭದ್ರಾ ಹಿನ್ನೀರು ಪ್ರದೇಶದಿಂದ ನೀರನ್ನು ತುಂಬಿಸಲು ಏರ ನೀರಾವರಿ ವ್ಯವಸ್ಥೆ ಅಳವಡಿಸಲಾಗಿದೆ.ಈ ಅಂಕಸಮುದ್ರ ಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಒಂದು ಭಾಗದಲ್ಲಿ ಬೇಸಾಯದ ಗದ್ದೆಗಳು ಇದ್ದು ಇನ್ನೊಂದು ಕಡೆ ತುಂಗಭದ್ರಾ ಹಿನ್ನೀರು ಇದೆ.ಆದ್ದರಿಂದ, ಇಡೀ ಭೂಪರಿಸರ ಸ್ಥಳೀಯ ಮತ್ತು ವಲಸಿಗ ನೀರು ಹಕ್ಕಿಗಳಿಗೆ ಅತ್ಯುತ್ತಮ ಆವಾಸ ಸ್ಥಾನವಾಗುತ್ತದೆ.

ESZ.

--

ವಿಸಿಟರ್ ಕಾರ್ನರ್

ಮಾಡಬೇಕಾದ ಕೆಲಸಗಳುನೋಡಿ

ಪಕ್ಷಿ ವೀಕ್ಷಣೆ ಈ ಅಂಕಸಮುದ್ರ ಪಕ್ಷಿಧಾಮ ಮೀಸಲು ಪ್ರದೇಶದ ಪ್ರಮುಖ ಆಕರ್ಷಣೆಯಾಗಿದೆ.

ತಲುಪುವುದು ಹೇಗೆನೋಡಿ

a. ಹೊಸಪೇಟೆಯಿಂದ ರಸ್ತೆ ಮಾರ್ಗದಲ್ಲಿ ತಲುಪಬಹುದು b. ಬಳ್ಳಾರಿಯಿಂದ ಕೂಡ ರಸ್ತೆ ಮಾರ್ಗದಲ್ಲಿ ತಲುಪಬಹುದು

ಭೇಟಿ ಸಮಯನೋಡಿ

a. ಈ ಪಕ್ಷಿಧಾಮ ಮೀಸಲು ಪ್ರದೇಶಕ್ಕೆ ಭೇಟಿ ನೀಡಲು ಬೆಳಗ್ಗೆ ಮತ್ತು ಸಂಜೆ ಅತ್ಯುತ್ತಮ ಸಮಯವಾಗಿರುತ್ತದೆ. b. ಸಂತಾನೋತ್ಪತ್ತಿ/ ಮರಿಗಳ ಸಾಕಣೆ ಋತುವಿನಲ್ಲಿ ದಿನದ ಎಲ್ಲ ಸಮಯದಲ್ಲೂ ಇಲ್ಲಿಗೆ ಭೇಟಿ ನೀಡಬಹುದಾಗಿದೆ. c. ಪಕ್ಷಿಧಾಮ ಮೀಸಲು ಪ್ರದೇಶಕ್ಕೆ ಭೇಟಿ ನೀಡಲು ಅಕ್ಟೋಬರ್ ನಿಂದ ಮಾರ್ಚ್ ಅತ್ಯುತ್ತಮ ಸಮಯವಾಗಿದೆ.

ಶುಲ್ಕಗಳು ಮತ್ತು ಅನುಮತಿಗಳುನೋಡಿ

ಇಲ್ಲಿಯವರೆಗೆ ಯಾವುದೇ ಶುಲ್ಕಗಳನ್ನು ಸಂಗ್ರಹಿಸಲಾಗುತ್ತಿಲ್ಲ ಮತ್ತು ನಾವು ಪರಿಸರ ಅಭಿವೃದ್ಧಿ ಸಮಿತಿಗಳ ಮೂಲಕ ಸ್ಥಳೀಯ ಜನರ ಸಹಭಾಗಿತ್ವದೊಂದಿಗೆ ಮಾರ್ಗದರ್ಶನ ಸಹಿತ ಪಕ್ಷಿವೀಕ್ಷಣೆ ಆರಂಭಿಸಲು ಯೋಜನೆ ಮಾಡುತ್ತಿದ್ದೇವೆ.

ಬುಕಿಂಗ್ / ಕಾಯ್ದಿರಿಸುವಿಕೆನೋಡಿ

---

ಹವಾಮಾನನೋಡಿ

ಅಂಕಸಮುದ್ರ ಪಕ್ಷಿಧಾಮ ಮೀಸಲು ಪ್ರದೇಶ ಅರೆ-ಶುಷ್ಕ ಹವಾಮಾನ ಹೊಂದಿದೆ. ವರ್ಷದ ಬಹುತೇಕ ಸಮಯದಲ್ಲಿ ಒಣ ಮತ್ತು ಬಿಸಿಲ ಹವಾಮಾನ ಇರುತ್ತದೆ.ಈ ಪ್ರದೇಶ ಕರ್ನಾಟಕದ ಉತ್ತರ ಒಣ ಕೃಷಿ-ಹವಾಗುಣ ವಲಯದಲ್ಲಿ ಬರುತ್ತದೆ ಮತ್ತು ಬರಪೀಡಿತ ಎಂದು ವರ್ಗೀಕರಿಸಲಾಗಿದೆ.ಈ ಪ್ರದೇಶ ವಾರ್ಷಿಕ ಸರಾಸರಿ 26.7 ಡಿಗ್ರಿ ಸೆ. ತಾಪಮಾನ ಹೊಂದಿರುತ್ತದೆ ಮತ್ತು ವಾರ್ಷಿಕ ಸರಾಸರಿ 630 ಮಿ.ಮೀ. ಮಳೆ ಆಗುತ್ತದೆ.

ಇಂಟರ್ನೆಟ್ ಮತ್ತು ಮೊಬೈಲ್ ಸಂಪರ್ಕನೋಡಿ

ಅಂಕಸಮುದ್ರ ಪಕ್ಷಿಧಾಮ ಮೀಸಲು ಪ್ರದೇಶದೊಳಗೆ ಮೊಬೈಲ್ ಸಂಪರ್ಕ ಲಭ್ಯವಿರುತ್ತದೆ.

ಪದೇಪದೆ ಕೇಳಲಾಗುವ ಪ್ರಶ್ನೆಗಳು ನೋಡಿ

-

ಶಿಷ್ಟಾಚಾರ ಪಾಲನೆ ಮತ್ತು ನಿಷಿದ್ಧ ಚಟುವಟಿಕೆಗಳುನೋಡಿ

ಮಾಡಿರಿ

a. ಅಂಕಸಮುದ್ರ ಪಕ್ಷಿಧಾಮ ಮೀಸಲು ಪ್ರದೇಶಕ್ಕೆ ಯಾವಾಗಲೂ ಸಂಬಂಧಿತ ಅಧಿಕಾರಿಯ ಅನುಮತಿಯೊಂದಿಗೆ ಪ್ರವೇಶಿಸಿ. b. ಪಕ್ಷಿಧಾಮ ಮೀಸಲು ಪ್ರದೇಶದಲ್ಲಿರುವಾಗ ಮೌನವಾಗಿರಿ. c. ಎಲ್ಲ ತ್ಯಾಜ್ಯ, ಕಸ ಮತ್ತು ಇತರ ಅನಗತ್ಯ ವಸ್ತುಗಳನ್ನು ವಿವಿಧ ಸ್ಥಳಗಳಲ್ಲಿ ಇರಿಸಿರುವ ಕಸದ ಬುಟ್ಟಿಗೆ ಎಸೆಯಿರಿ. d. ಪಕ್ಷಿಧಾಮ ಮೀಸಲು ಪ್ರದೇಶದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಿ. e. ಪಕ್ಷಿಗಳು, ವನ್ಯಜೀವಿ ಅಥವಾ ಸಂರಕ್ಷಣಾ ಮೀಸಲು ಪ್ರದೇಶಕ್ಕೆ ಸಂಬಂಧಿಸಿ ಒಂದು ವೇಳೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ಸಂಬಂಧಿತ ಅಧಿಕಾರಿಗೆ ವರದಿ ಮಾಡಿ.

ಮಾಡಬೇಡಿರಿ

a. ಅಧಿಕಾರಿಯಿಂದ ಅನುಮತಿ ಪಡೆಯದೆ ಅಂಕಸಮುದ್ರ ಪಕ್ಷಿಧಾಮ ಮೀಸಲು ಪ್ರದೇಶಕ್ಕೆ ಪ್ರವೇಶಿಸಬೇಡಿ. b. ಪಕ್ಷಿಧಾಮ ಮೀಸಲು ಪ್ರದೇಶದೊಳಗೆ ಕಸ, ಪ್ಲ್ಯಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಎಸೆಯಬೇಡಿ c. ಪಕ್ಷಿಧಾಮ ಮೀಸಲು ಪ್ರದೇಶದೊಳಗೆ ಇರುವಾಗ ಗದ್ದಲ ಮಾಡಬೇಡಿ ಅಥವಾ ಕಿರುಚಾಡಬೇಡಿ. d. ಪಕ್ಷಿಧಾಮ ಮೀಸಲು ಪ್ರದೇಶದೊಳಗೆ ಮಲ ಮೂತ್ರ ವಿಸರ್ಜನೆ ಮಾಡಬೇಡಿ. e. ಯಾವುದೇ ಪಕ್ಷಿ ಅಥವಾ ಕಾಡು ಪ್ರಾಣಿಯನ್ನು ಅಣಕಿಸಬೇಡಿ. f. ಯಾವುದೇ ಪಕ್ಷಿ ಅಥವಾ ಕಾಡು ಪ್ರಾಣಿಗೆ ತಿನಿಸು ನೀಡಬೇಡಿ. g. ಪಕ್ಷಿಗಳತ್ತ ಕಲ್ಲು ಎಸೆಯಬೇಡಿ. h. ಅಂಕಸಮುದ್ರ ಪಕ್ಷಿಧಾಮ ಮೀಸಲು ಪ್ರದೇಶದೊಳಗೆ ಧೂಮಪಾನ ಅಥವಾ ಮದ್ಯಪಾನ ಮಾಡಬೇಡಿ.