ಅರಣ್ಯ ಪ್ರದೇಶಗಳ ಗಸ್ತು ನಡೆಸುವುದು ಕ್ಷೇತ್ರ ಮುಂಚೂಣಿ ಸಿಬ್ಬಂದಿಯ ಪ್ರಮುಖ ಕಾರ್ಯ.ಕ್ಷೇತ್ರ ಗಸ್ತು ನಿಗಾ ವಹಿಸಲು ಮತ್ತು ನೆಡುತೋಪು ಭೇಟಿಗಳು, ನರ್ಸರಿ ಚಟುವಟಿಕೆಗಳು ಮತ್ತು ಅರಣ್ಯ ಮುಂಚೂಣಿ ಸಿಬ್ಬಂದಿಗಳ ಇತರ ಕ್ಷೇತ್ರ ಮತ್ತು ಅಧಿಕೃತ ಚಟುವಟಿಕೆಗಳಿಗೆ ಸಲಕರಣೆ ಒದಗಿಸಲು, ಇಲಾಖೆ ಇ-ಪ್ರಹರಿ, ಆಂಡ್ರಾಯ್ಡ್ ಅಪ್ಲಿಕೇಷನ್ ಮತ್ತು ವೆಬ್‌ ಇಂಟರ್‌ಫೇಸ್‌ಗಳನ್ನು ಅನುಷ್ಠಾನಕ್ಕೆ ತಂದಿದೆ. ಮುಂಚೂಣಿ ಸಿಬ್ಬಂದಿ ತಮ್ಮ ಹಾಜರಾತಿ, ಗಸ್ತು ನಡೆಸುವ ವೇಳೆ ತೆಗೆದ ಕ್ಷೇತ್ರ ಗಸ್ತು ಫೊಟೋ ಮತ್ತು ಘಟನೆಗಳನ್ನು ದಾಖಲಿಸಲು ಈ ಆ್ಯಪ್ ಅನುವು ಮಾಡಿಕೊಡುತ್ತದೆ. ಅಪ್ಲಿಕೇಶನ್‌ ಬಳಸಿ ಕ್ಷೇತ್ರ ಸಿಬ್ಬಂದಿಯ ಸ್ವಯಂಚಾಲಿತ ಡೈರಿಗಳನ್ನು ಸೃಷ್ಟಿಸಬಹುದು. ಗಸ್ತು, ಕ್ಷೇತ್ರ ತಪಾಸಣೆ ಮುಂತಾದುವುಗಳಿಗೆ ಸಂಬಂಧಿಸಿದ ವಿವಿಧ ವರದಿಗಳನ್ನು ಡೇಟಾ ಆಧರಿತವಾಗಿ, ವಾರ ಮತ್ತು ತಿಂಗಳು ಆಧರಿತವಾಗಿ ತಯಾರಿಸಬಹುದು.


ಸಿಸ್ಟಮ್ ಅನ್ನು ಪ್ರವೇಶಿಸಲು ಮತ್ತು ಲಾಗಿನ್ ಮಾಡಲು, ಇನ್ನಷ್ಟು ತಿಳಿಯಿರಿ >>