ಸಾಮಾನ್ಯವಾಗಿ ಸಾಕು ಪ್ರಾಣಿಗಳಲ್ಲದ ಪ್ರಾಣಿ ಪಭೇದಗಳನ್ನು ವನ್ಯಜೀವಿಗಳೆಂದು ಕರೆಯಬಹುದು. ಅದಾಗ್ಯೂ ವಾಸ್ತವದಲ್ಲಿ ‘ವನ್ಯಜೀವಿ’ ಅಂದರೆ ಮನುಷ್ಯರಿಂದ ಸಾಕಲ್ಪಡದ ಒಂದು ಪ್ರದೇಶದಲ್ಲಿ ಬೆಳೆಯುವ ಅಥವಾ ಜೀವಿಸುವ ಎಲ್ಲ ಜೀವಿಗಳನ್ನು ಒಳಗೊಳ್ಳುತ್ತದೆ. ಅರಣ್ಯಗಳು, ಹುಲ್ಲುಗಾವಲುಗಳು, ಮರುಭೂಮಿಗಳು, ಜಲಮೂಲಗಳು, ಕೃಷಿ ಭೂಮಿಗಳು, ಅಥವಾ ಮಾನವರ ವಾಸಸ್ಥಳಗಳಂಥ ಎಲ್ಲ ಪರಿಸರ ವ್ಯವಸ್ಥೆಗಳು ವಿವಿಧ ಪ್ರಮಾಣದಲ್ಲಿ ವನ್ಯಜೀವಿಗಳನ್ನು ಹೊಂದಿರುತ್ತವೆ. ಕಾಡಿನಲ್ಲಿ ನೈಸರ್ಗಿಕವಾಗಿ ಬೆಳೆಯುವ ಸಸ್ಯ ಪ್ರಭೇದಗಳನ್ನೂ ಸಹ ಸೇರಿಸಿಕೊಂಡು ವನ್ಯಜೀವಿ ವ್ಯಾಖ್ಯಾನವನ್ನು ವಿಸ್ತೃತ ಪಡಿಸಲಾಗಿದೆ. ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಪ್ರಕಾರ, ‘ವನ್ಯಜೀವಿ’ ಅಂದರೆ ಯಾವುದೇ ಆವಾಸಸ್ಥಾನದ ಭಾಗವಾಗಿರುವ ಜಲ ಅಥವಾ ಭೂ ಸಸ್ಯರಾಶಿ ಯಾವುದೇ ಪ್ರಾಣಿಯನ್ನು ಒಳಗೊಳ್ಳುತ್ತದೆ.