ರಾಮನಗರ ವಿಭಾಗದ ವ್ಯಾಪ್ತಿಯ ಕನಕಪುರ ತಾಲೂಕಿನ ಸಾತನೂರು ವಲಯದ,ಸಾತನೂರು ಶಾಖೆಗೆ ಸೇರಿದ ಯಡಮಾರನಹಳ್ಳಿಅರಣ್ಯ ಪ್ರದೇಶದಲ್ಲಿ ದಿನಾಂಕ : 09-03-2018 ರಂದು ಎಂಟು ಆನೆಗಳನ್ನು ಕಾವೇರಿ ವನ್ಯಜೀವಿ ಧಾಮಕ್ಕೆ ಹಿಮ್ಮೆಟ್ಟಿಸುವ ಸಮಯದಲ್ಲಿ ಕಾಡಾನೆ ಹಿಂಡಿನಲ್ಲಿದ್ದ ಒಂದು ಆನೆಯು ಶ್ರೀ. ಚಿಕ್ಕೀರಯ್ಯ ಬಿನ್ ವೀರಭದ್ರಯ್ಯ,ಕ್ಷೇಮಾಭಿವೃದ್ಧಿ ನೌಕರನಿಗೆ ಮಾರಣಾಂತಿಕವಾಗಿ ಗಾಯಗೊಳಿಸಿರುತ್ತದೆ.ಮುಂದುವರೆದು ಸದರಿಯವರಿಗೆ ತಲೆಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿಯಿತು, ಆದರೆ 26-05-2018 ರಂದು ಇವರು ಮರಣ ಹೊಂದಿದರು.