ವಿಭಾಗದ ಬಗ್ಗೆ
ಅರಣ್ಯ ಸಂರಕ್ಷಣಾ ಘಟಕದಿಂದ ಅರಣ್ಯ (ಸಂರಕ್ಷಣಾ) ಕಾಯ್ದೆ, 1980ಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಕಾರ್ಯನಿರ್ವಹಿಸುತ್ತದೆ. ಅರಣ್ಯ ಭೂಮಿಗಳನ್ನು ಅರಣ್ಯೇತರ ಉದ್ದೇಶಗಳಿಗಾಗಿ ಬಳಸಲು ವಿವಿಧ ಬಳಕೆದಾರ ಏಜೆನ್ಸಿಗಳಿಂದ (ಕೇಂದ್ರ / ರಾಜ್ಯ ಸರ್ಕಾರಿ ಏಜೆನ್ಸಿಗಳು / ಇಲಾಖೆಗಳು, ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ಸೇರಿದಂತೆ ಕಂಪನಿಗಳು ಮತ್ತು ಇತರರು) ಸ್ವೀಕರಿಸಿದ ಪ್ರತೀಯೊಂದು ಪ್ರಸ್ತಾವನೆಯನ್ನು ಅರಣ್ಯ ಇಲಾಖೆಯ ಕ್ಷೇತ್ರ ಘಟಕಗಳ ಮೂಲಕ ಪರಿಶೀಲನೆ ನಡೆಸಿ ಅರಣ್ಯ (ಸಂರಕ್ಷಣಾ) ಕಾಯ್ದೆ ಕಲಂ-2 ರಡಿಯಲ್ಲಿ ಅನುಮೋದನೆ ಪಡೆಯಲು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.