ವಿಭಾಗದ ಮುಖ್ಯಸ್ಥರು

ಶ್ರೀ. ಜಿ.ಯು.ಶಂಕರ್ ಎಸ್.ಎಫ್.ಎಸ್

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ ವಿಭಾಗ, ಆರ್‌ಟಿಒ ಕಚೇರಿಯ ಹತ್ತಿರ ಶಿವಮೊಗ್ಗ, ಡಿ.ಸಿ. ಕಾಂಪೌಂಡ್ ಶಿವಮೊಗ್ಗ
08182272210
dcf.shivamogga@gmail.com

ವಿಭಾಗದ ಬಗ್ಗೆ

ಶಿವಮೊಗ್ಗ ಅರಣ್ಯ ವಿಭಾಗ ಕರ್ನಾಟಕ ರಾಜ್ಯದ ಪಶ್ಚಿಮ ಭಾಗದಲ್ಲಿದೆ. ಇದು ತೀರ್ಥಹಳ್ಳಿ ಮತ್ತು ಶಿವಮೊಗ್ಗ (ಭಾಗಶಃ) ಕಂದಾಯ ತಾಲೂಕುಗಳನ್ನು ಒಳಗೊಂಡಿದೆ. ಈ ಹಿಂದಿನ ಶಿವಮೊಗ್ಗ ಅರಣ್ಯ ವಿಭಾಗದ ಒಂದಿಷ್ಟು ಅರಣ್ಯ ಪ್ರದೇಶಗಳನ್ನು ಶಿವಮೊಗ್ಗ ವನ್ಯಜೀವಿ ಮತ್ತು ಕುದುರೆಮುಖ ವನ್ಯಜೀವಿ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ. ಎಂ.ಪಿ.ಎಂ., ವನ್ಯಜೀವಿ, ಕೆ.ಎಫ್‌.ಡಿ.ಸಿ. ಮುಂತಾದವುಗಳ ಅಡಿ ಬರುವ ಪ್ರದೇಶಗಳನ್ನು ಹೊರತುಪಡಿಸಿ ವಿಭಾಗದ ಪ್ರಸ್ತುತ ವಿಸ್ತೀರ್ಣ 53,071.77 ಹೆಕ್ಟೇರ್‌ಗಳಾಗಿದೆ. ವಿಭಾಗದಲ್ಲಿ ಎರಡು ಉಪ ವಿಭಾಗಗಳಿವೆ, ಅವು ತೀರ್ಥಹಳ್ಳಿ ಮತ್ತು ಆಯನೂರು, ಹಾಗೂ ಶಂಕರ್‌, ಮಂಡಗದ್ದೆ, ರಿಪ್ಪನ್‌ಪೇಟೆ, ಆಯನೂರು, ತೀರ್ಥಹಳ್ಳಿ ಮತ್ತು ಆಗುಂಬೆ ವಲಯ ಎನ್ನುವ ಆರು ವಲಯಗಳಿವೆ. ತೀರ್ಥಹಳ್ಳಿ ಮತ್ತು ಆಗುಂಬೆ ವಲಯಗಳ ಅರಣ್ಯಗಳು ಮುಖ್ಯವಾಗಿ ನಿತ್ಯಹಸಿರು ಮತ್ತು ಅರೆ ನಿತ್ಯಹಸಿರು ಮಾದರಿಯವು. ಶಂಕರ್‌, ರಿಪ್ಪನ್‌ಪೇಟೆ ಮತ್ತು ಮಂಡಗದ್ದೆ ವಲಯಗಳು ಪ್ರಾಥಮಿಕವಾಗಿ ಅರೆ ನಿತ್ಯಹಸಿರು ಮತ್ತು ತೇವಾಂಶಭರಿತ ಎಲೆಯುದುರುವ ಅರಣ್ಯಗಳಾಗಿವೆ. ಆಯನೂರು ವಲಯದಲ್ಲಿ ಒಣ ಎಲೆಯುದುರುವ ಕಾಡುಗಳ ಪ್ರಾಬಲ್ಯವಿದೆ. ಅರಣ್ಯಗಳ, ವಿಶೇಷವಾಗಿ ವಿಭಾಗದ ಪೂರ್ವ ಭಾಗ ಮತ್ತು ಜನ ವಸತಿ ಪ್ರದೇಶಗಳ ಸಮೀಪ ಇರುವ ಅರಣ್ಯಗಳ ಮೇಲೆ ಜೈವಿಕ ಒತ್ತಡ ಅತಿ ಹೆಚ್ಚಿದೆ.

ಶಿವಮೊಗ್ಗ ವಿಭಾಗದ ನಕ್ಷೆ

--%>

ಉಪ ವಿಭಾಗಗಳು

ಟೆಂಡರ್‌ಗಳು

ಸುದ್ದಿ ಮತ್ತು ನವೀಕರಣಗಳು