ವಿಭಾಗದ ಮುಖ್ಯಸ್ಥರು

ಶ್ರೀ. ಏಡುಕೊಂಡಲು .ವಿ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಮರಡಿಗುಡ್ಡ ಟ್ರೀ ಪಾರ್ಕ್ ಹಿ೦ಭಾಗ, ಕೊಳ್ಳೆಗಾಲ -571440, ಚಾಮರಾಜನಗರ ಜಿಲ್ಲೆ
08224252027
dcfkollegal@gmail.com

ವಿಭಾಗದ ಬಗ್ಗೆ

ಮಲೆ ಮಹದೇಶ್ವರಬೆಟ್ಟ (ಮ.ಮ. ಬೆಟ್ಟಗಳು) ವನ್ಯಜೀವಿ ವಿಭಾಗ 2013ರಲ್ಲಿ ಜಾರಿಗೆ ಬಂತು. ಅದೇ ವರ್ಷ ಮ.ಮ. ಬೆಟ್ಟ ವನ್ಯಜೀವಿ ಅಭಯಾರಣ್ಯ ಘೋಷಣೆಯಾಯಿತು. ಇದಕ್ಕೂ ಮುಂಚೆ, ಈ ವಿಭಾಗ ಕೊಳ್ಳೇಗಾಲ ಅರಣ್ಯ ವಿಭಾಗ ಎನ್ನುವ ಹೆಸರಿನಿಂದ ಪ್ರಾದೇಶಿಕ ಅರಣ್ಯ ವಿಭಾಗವಾಗಿತ್ತು. ಇದು ಸುಮಾರು 906 ಚ.ಕಿ.ಮೀ. ವ್ಯಾಪ್ತಿ ಹೊಂದಿದ್ದು, ಮ.ಮ. ಬೆಟ್ಟಗಳು (ಭಾಗಶಃ) ಯೆಡಿಯರಹಳ್ಳಿ ಮತ್ತು ಹನೂರು ರಾಜ್ಯ ಅರಣ್ಯಗಳನ್ನು ಒಳಗೊಂಡಿದೆ. ವನ್ಯಜೀವಿ ವಿಭಾಗ, ಕೊಳ್ಳೇಗಾಲ, ಹನೂರು ಮತ್ತು ಮಮ ಬೆಟ್ಟ ಎನ್ನುವ ಮೂರು ಉಪ ವಿಭಾಗಗಳನ್ನು ಹೊಂದಿದೆ, ಮತ್ತು ಕೊಳ್ಳೇಗಾಲ ಬಫರ್‌, ಪಿ.ಜಿ. ಪಾಳ್ಯ, ಹನೂರು, ಕೌದಳ್ಳಿ, ಹೂಗ್ಯಂ ‌, ಮ.ಮ ಬೆಟ್ಟ ವನ್ಯಜೀವಿ ಈ ಏಳು ವಲಯಗಳನ್ನು ಒಳಗೊಂಡಿದೆ. ಮ.ಮ. ಬೆಟ್ಟ ವನ್ಯಜೀವಿ ಅಭಯಾರಣ್ಯದ ಅರಣ್ಯಗಳು ಮೂಲತಃ ಒಣ ಎಲೆಯುದುರುವ ಮಾದರಿಯವಾಗಿದ್ದು, ಕೆಲವು ಪ್ರದೇಶಗಳಲ್ಲಿ ಕುರುಚಲು ಕಾಡುಗಳಾಗಿ ಅವನತಿ ಕಂಡಿದೆ, ಮತ್ತು ವಿಭಿನ್ನ ಎತ್ತರದ ಪ್ರದೇಶಗಳಲ್ಲಿ ಅಲ್ಲಲ್ಲಿ ತೇವಾಂಶ ಭರಿತ ಎಲೆಯುದುರುವ, ಅರೆ ನಿತ್ಯಹಸಿರು, ನಿತ್ಯ ಹಸಿರು ಮತ್ತು ಶೋಲಾ ಕಾಡುಗಳು ಕಂಡುಬರುತ್ತವೆ. ಹುಲಿ, ಆನೆ, ಚಿರತೆ, ಕಾಡುನಾಯಿ, ಕಾಡುಕೋಣ, ಸಾಂಬಾರ, ಚುಕ್ಕೆ ಜಿಂಕೆ, ಬೊಗಳುವ ಜಿಂಕೆ, ಜೇನು ಕರಡಿ, ಕಾಡು ಹಂದಿ, ನಾಲ್ಕು ಕೊಂಬಿನ ಜಿಂಕೆ, ಕಪ್ಪು ಕುತ್ತಿಗೆಪಟ್ಟೆಯ ಮೊಲ, ಲಂಗೂರ್‌, ಬಾನೆಟ್‌ ಕೋತಿ, ಹನಿ ಬ್ಯಾಡ್ಜರ್ (ರ್ಯಾಟೆಲ್), ವಿವಿಧ ಸರೀಸೃಪಗಳು, ಹಕ್ಕಿಗಳು ಮುಂತಾದ ಪ್ರಾಣಿಗಳು ವನ್ಯಜೀವಿ ಅಭಯಾರಣ್ಯದಲ್ಲಿ ಕಂಡುಬರುತ್ತವೆ.

ಮಲೆ ಮಹದೇಶ್ವರ ಬೆಟ್ಟ

--%>

ಉಪ ವಿಭಾಗಗಳು

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ

ಸುದ್ದಿ ಮತ್ತು ನವೀಕರಣಗಳು