A- A A+
2023-24 ನೇ ಸಾಲಿನಲ್ಲಿ ಗಸ್ತು ವನಪಾಲಕರ (ಅರಣ್ಯ ರಕ್ಷಕರ) ನೇಮಕಾತಿ ಕುರಿತು ಅಧಿಸೂಚನೆ ಗಸ್ತು ವನಪಾಲಕರ (ಅರಣ್ಯ ರಕ್ಷಕ) ಹುದ್ದೆಗೆ ನೇಮಕಾತಿ- ಆರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ. ರಾಜ್ಯ ಮಟ್ಟದ ಉಳಿಕೆ ಮೂಲ ವೃಂದದ ಪ್ರಥಮ ದರ್ಜೆ ಸಹಾಯಕರ (FDA) ಕರಡು ಜ್ಯೇಷ್ಟತಾ ಪಟ್ಟಿ. 2023-24 ನೇ ಸಾಲಿನಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ ಮತ್ತು ಅರಣ್ಯ ವೀಕ್ಷಕರ ಸಾಮಾನ್ಯ ವರ್ಗಾವಣೆಗಾಗಿ ಅಧಿಸೂಚನೆ. ದಿನಾಂಕ:19-05-2023 2023-24 ನೇ ಸಾಲಿನ ಮೊದಲನೇ ತ್ರೈಮಾಸಿಕ ಅವಧಿಗೆ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ, ಅರಣ್ಯ ವೀಕ್ಷಕರ ಕಂಟಿಂಜೆಂಟ್‌ ವರ್ಗಾವಣೆ/ ಸ್ಥಳ ನಿಯುಕ್ತಿಗಾಗಿ ಅಧಿಸೂಚನೆ. ದಿನಾಂಕ:19-05-2023 ದಿನಾಂಕ: 15-05-2023 ರಿಂದ ದಿನಾಂಕ: 18-05-2023 ರವೆರಗೆ ಜರುಗಿಸಲಾಗುತ್ತಿರುವ ಕಂಟಿಂಜೆಂಟ್‌ ಸ್ಥಳ ನಿಯುಕ್ತಿಯ ಸಮಾಲೋಚನೆಯ ದೈನಂದಿನ ವರದಿಗಳು. ಪೂರಕ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD, dated: 02-05-2023ಕ್ಕೆ ತಿದ್ದುಪಡಿ. ಸಮಾಲೋಚನಾ ಆದ್ಯತಾ ಪಟ್ಟಿ (ದಿನಾಂಕ, ಸಮಯ ಮತ್ತು ಸ್ಥಳದ ವಿವರದೊಂದಿಗೆ) ಯ ಕುರಿತು ಅಧಿಸೂಚನೆ 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 15-05-2023 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 12-05-2023

ವಿಭಾಗದ ಮುಖ್ಯಸ್ಥರು

ಶ್ರೀಮತಿ. ವಿ. ಗೀತಾಂಜಲಿ ಭಾ.ಅ.ಸೇ

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಸಾಮಾಜಿಕ ಅರಣ್ಯೀಕರಣ ಮತ್ತು ಯೋಜನೆಗಳು)
ಅಪ್ರಮುಅಸಂ (ಸಾಅ&ಯೋ) ರವರ ಕಛೇರಿ, 5ನೇ ಮಹಡಿ, ಅರಣ್ಯ ಭವನ, 18 ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು
apccfsf@gmail.com

ವಿಭಾಗದ ಬಗ್ಗೆ

ಕರ್ನಾಟಕ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ಮತ್ತು ಯೋಜನೆಗಳು ಘಟಕವು ಜಿಲ್ಲಾ ಪಂಚಾಯತ್ ಅಡಿಯಲ್ಲಿ ಕಾರ್ಯನಿರ್ವಹಿಸುವ 30 ಸಾಮಾಜಿಕ ಅರಣ್ಯ ವಿಭಾಗಗಳನ್ನು ಒಳಗೊಂಡಿದೆ. ಈ ವಿಭಾಗಗಳು ರಾಜ್ಯದಾದ್ಯಂತ ಅರಣ್ಯೇತರ ಭೂಮಿಯನ್ನು ಹಸಿರಾಗಿಸುವ ಗುರಿಯನ್ನು ಹೊಂದಿರುವ ಅರಣ್ಯೀಕರಣ ಕಾರ್ಯಗಳನ್ನು ಕೈಗೊಳ್ಳುತ್ತವೆ. ನಾಲಾ-ಬಂಡ್.ಗಳು, ನದಿ ಪಾತ್ರಗಳು, ಶಾಲೆ / ಕಾಲೇಜು ಕಾಂಪೌಂಡ್.ಗಳು, ಸಾಂಸ್ಥಿಕ ಭೂಮಿಗಳು, ಗೋಮಾಳ ಭೂಮಿಗಳು ಮುಂತಾದ ಖಾಲಿ ಭೂಮಿಗಳಲ್ಲಿ ನೆಡುತೋಪುಗಳನ್ನು ಸಾಮಾನ್ಯವಾಗಿ ಬೆಳೆಸಲಾಗುತ್ತದೆ. ಅಂತಹ ಕೆಲಸಗಳ ಮೂಲಕ, ಸಾಮಾಜಿಕ ಅರಣ್ಯ ಘಟಕವು ನಿರುದ್ಯೋಗಿಗಳಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಘಟಕವು ರಾಜ್ಯದ ಎಲ್ಲಾ ಪ್ರಾದೇಶಿಕ ವಿಭಾಗಗಳಲ್ಲಿ ಹಲವಾರು ಅರಣ್ಯೀಕರಣ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಸಹ ಹೊಂದಿದೆ. ಇವುಗಳಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನ (ಮರ ಉದ್ಯಾನ), ದೈವಿವನ (ದೇವರಕಾಡು), ಔಷಧೀಯ ಸಸ್ಯ ಸಂರಕ್ಷಣಾ ಪ್ರದೇಶಗಳು ಮತ್ತು ಔಷಧೀಯ ಸಸ್ಯ ಅಭಿವೃದ್ಧಿ ಪ್ರದೇಶಗಳು (ಎಂಪಿಸಿಎ ಮತ್ತು ಎಂಪಿಡಿಎ), ಸಮೃದ್ಧ ಹಸಿರು ಗ್ರಾಮ ಯೋಜನೆ (SHGY), ತಾಲೂಕಿಗೊಂಡು ಹಸಿರು ಗ್ರಾಮ ಯೋಜನೆ (THGY), ಗ್ರಾಮ ಅರಣ್ಯ ಸಮಿತಿ ಯೋಜನೆಯ ಪುನರುಜ್ಜೀವನ (VFC) ಮತ್ತು ಕೇಂದ್ರ ಪ್ರಾಯೋಜಿತ ಯೋಜನೆ (CSS) ಸೇರಿವೆ. ಇದು ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಎನ್.ಟಿಪಿಸಿ) ರವರು ಒದಗಿಸುವ ಹಣದಿಂದ ಮರ ನೆಡುವ ಯೋಜನೆಯನ್ನು ಸಹ ಜಾರಿಗೊಳಿಸುತ್ತಿದೆ.

ಕಾರ್ಯಕ್ರಮಗಳು & ಚಟುವಟಿಕೆಗಳು

ಸಾಮಾಜಿಕ ಅರಣ್ಯ ಚಟುವಟಿಕೆ

ಇನ್ನಷ್ಟು ನೋಡಿ

ಬೆಂಗಾರೆ ಟ್ರೀ ಪಾರ್ಕ್, ಮಂಗಳೂರು

ಇನ್ನಷ್ಟು ನೋಡಿ

ಸಂಜೀವಿನಿ ವನ ಟ್ರೀ ಪಾರ್ಕ್, ಧಾರವಾಡ

ಇನ್ನಷ್ಟು ನೋಡಿ

ಚಾಮುಂಡೇಶ್ವರಿ ದೈವಿ ವನ, ಮೈಸೂರು

ಇನ್ನಷ್ಟು ನೋಡಿ

ಕಾಗಿನೆಲೆ ದೈವಿವನ, ಹಾವೇರಿ

ಇನ್ನಷ್ಟು ನೋಡಿ

ನರೇಗಾ, ಹಾಸನ

ಇನ್ನಷ್ಟು ನೋಡಿ

ನರೇಗಾ, ಮುಧೋಳ್‌ ಸಾಮಾಜಿಕ ಅರಣ್ಯ

ಇನ್ನಷ್ಟು ನೋಡಿ

ಕೃಷಿ ಅರಣ್ಯ ಉಪ ಯೋಜನೆ, ಗದಗ

ಇನ್ನಷ್ಟು ನೋಡಿ

ಕೃಷಿ ಅರಣ್ಯ ಉಪ ಯೋಜನೆ, ರಾಮನಗರ

ಇನ್ನಷ್ಟು ನೋಡಿ

ಕೃಷಿ ಅರಣ್ಯ ಉಪ ಯೋಜನೆ, ಹಾಸನ

ಇನ್ನಷ್ಟು ನೋಡಿ

ಕೃಷಿ ಅರಣ್ಯ , ಚಿತ್ರದುರ್ಗ

ಇನ್ನಷ್ಟು ನೋಡಿ