A- A A+
ಮೈಸೂರಿನ ಶ್ರೀ ಶಮಂತ್ ಗೊರೂರು ಅವರನ್ನು ೨೦೨೩ ನೇ ಸಾಲಿನ ಜನವರಿ ಮಾಹೆಯಲ್ಲಿ ಹಮ್ಮಿಕೊಂಡ ಲೋಗೋ ಸ್ಪರ್ಧೆಯ ವಿಜೇತರೆಂದು ಘೋಷಿಸಲಾಗಿದೆ. ಅಭಿನಂದನೆಗಳು! 2022-23 ನೇ ಸಾಲಿನಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರರು, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ವೃಂದದ ಸಿಬ್ಬಂದಿಗಳ ಕಂಟಿಂಜೆಂಟ್‌ ಸ್ಥಳ ನಿಯುಕ್ತಿಗಾಗಿ ಅಧಿಸೂಚನೆ, ದಿನಾಂಕ: 21-03-2023. ಅರಣ್ಯ ಇಲಾಖೆಯಲ್ಲಿ 2022-23 ನೇ ಸಾಲಿನ ನೇರ ನೇಮಕಾತಿ ಮೂಲಕ ಆನೆ ಕಾವಾಡಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಕುರಿತು ಅಧಿಸೂಚನೆ, ವೇಳಾಪಟ್ಟಿ ಮತ್ತು ಅರ್ಜಿ ನಮೂನೆ. 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 18-03-2023 ಅರಣ್ಯ ವ್ಯವಸ್ಥಾಪನಾಧಿಕಾರಿ (Forest Settlement Officer) ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಗರಿಷ್ಠ ಎರಡು ವರ್ಷಗಳ ಅವಧಿಗೆ ನೇಮಕಾತಿಯ ಕುರಿತು
ಸರ್ಕಾರದ ಆದೇಶ ಸಂಖ್ಯೆ. ಅ.ಪ.ಜೀ. 88 ಎಫ್.ಎ.ಪಿ. 2015 ದಿನಾಂಕ: 15-07-2015 ರಲ್ಲಿ ಚಿಣ್ಣರ ವನದರ್ಶನ ಎಂಬ ಹೊಸ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದ್ದು ರಾಜ್ಯದ ಎಲ್ಲ ಹೈಸ್ಕೂಲ್ ಶಾಲಾ ವಿದ್ಯಾರ್ಥಿಗಳನ್ನು ( 9ನೇ ತರಗತಿ ವಿಧ್ಯಾರ್ಥಿಗಳು) ಪರಿಸರ ಜಾಗೃತರನ್ನಾಗಿ ಮಾಡುವುದು ಮತ್ತು ಅರಣ್ಯಗಳ / ವನ್ಯಜೀವಿ ಸಂಕುಲಗಳ ಸಂರಕ್ಷಣೆ ಕುರಿತು ಅವರ ದೃಷ್ಟಿಕೋನ ಸಂವೇದನೆ ಜಾಗೃತಗೊಳಿಸಿ, ಅರಣ್ಯಗಳ ಉಳಿವು ಮತ್ತು ಅಭಿವೃದ್ಧಿಯಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಆದೇಶ ಸಂಖ್ಯೆ ಅ.ಪ.ಜೀ 33 ಎಫ್.ಎ.ಪಿ. 2017 ದಿನಾಂಕ: 22-02-2017ರಲ್ಲಿ ಆರು, ಏಳು ಹಾಗೂ ಎಂಟನೇ ತರಗತಿ ಪ್ರೌಡ ಶಾಲಾ ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಲು ಸರ್ಕಾರದ ಅನುಮೋದನೆ ನೀಡಲಾಗಿದೆ.

ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ) ನೋಡಿ

  • ಚಿಣ್ಣರ ವನದರ್ಶನ ಯೋಜನೆಯ ಉದ್ದೇಶಗಳು ಏನು?

    ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಯೋಜನೆ ಹೊಂದಿದೆ, ಇದರಿಂದ ಅವರು ನಿಸರ್ಗ ಸ್ನೇಹಿ ನಾಗರಿಕರಾಗುತ್ತಾರೆ.

  • ಕರ್ನಾಟಕ ಸರ್ಕಾರ ಯಾವ ವರ್ಷದಿಂದ ಚಿಣ್ಣರ ವನದರ್ಶನ ಸ್ಕೀಮ್ ಅನ್ನು ಆರಂಭಿಸಿತು?

    2015- 16ನೇ ಆರ್ಥಿಕ ವರ್ಷದಲ್ಲಿ ಸ್ಕೀಮ್ ಆರಂಭಿಸಲಾಯಿತು.

  • ಯೋಜನೆಯ ಅನುಷ್ಠಾನಕ್ಕಾಗಿ ಯಾವ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಯಿತು

    ಕರ್ನಾಟಕದಲ್ಲಿ 14472 ಸರ್ಕಾರಿ ಪ್ರೌಢ ಶಾಲೆಗಳಿವೆ. 6ನೇ, 7ನೇ ,8ನೇ, 9ನೇ ತರಗತಿ ಮಕ್ಕಳನ್ನು ಸಮೀಪದ ಮೀಸಲು ಅರಣ್ಯ ಪ್ರದೇಶ/ ಅಭಯಾರಣ್ಯ ರಾಷ್ಟ್ರೀಯ ಉದ್ಯಾನಕ್ಕೆ ಕರೆದೊಯ್ಯುವ ಮೂಲಕ ನಿಸರ್ಗದ ಬಗ್ಗೆ ತಿಳುವಳಿಕೆ ಹೆಚ್ಚಿಸುವ ಉದ್ದೇಶವನ್ನು ಯೋಜನೆ ಹೊಂದಿದೆ. ಅರಣ್ಯಾಧಿಕಾರಿಗಳು / ನಿಸರ್ಗ ಮಾರ್ಗದರ್ಶಿಗಳು ಶಾಲಾ ಮಕ್ಕಳಿಗೆ ಅರಣ್ಯಗಳ ಪರಿಸರ ಪಾತ್ರದ ಬಗ್ಗೆ ವಿವರಿಸುತ್ತಾರೆ. ಅರಣ್ಯ ಇಲಾಖೆಯ ವಿವಿಧ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ಅವರು ವಲಯ ಅರಣ್ಯ ಕಚೇರಿಗಳು, ನರ್ಸರಿಗಳು, ಟಿಂಬರ್ ಡಿಪೊಗಳು, ದೈವೀವನ, ಮರ ಉದ್ಯಾನ ಮುಂತಾದ ಪ್ರದೇಶಗಳಿಗೂ ಭೇಟಿ ನೀಡುತ್ತಾರೆ.

  • ಒಂದು ವೇಳೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಾವುದಾದರೂ ಶಾಲೆ ಆಸಕ್ತಿ ಹೊಂದಿದ್ದಲ್ಲಿ ಅವರು ಯಾವಾಗ ಸಂಪರ್ಕಿಸಬೇಕು?

    ಒಂದು ವೇಳೆ ಇಂಥ ಕಾರ್ಯಕ್ರಮಕ್ಕೆ ತಮ್ಮ ವಿದ್ಯಾರ್ಥಿಗಳನ್ನು ಕಳುಹಿಸಲು ಯಾವುದಾದರೂ ಶಾಲೆ ಆಸಕ್ತಿ ಹೊಂದಿದ್ದಲ್ಲಿ, ಅವರು ಸಮೀಪದ ಪ್ರಾದೇಶಿಕ/ ವನ್ಯಜೀವಿ ವಿಭಾಗವನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬೇಕು.