ವಿಭಾಗದ ಬಗ್ಗೆ
ಕರ್ನಾಟಕ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ಘಟಕವು 30 ಸಾಮಾಜಿಕ ಅರಣ್ಯ ವಿಭಾಗಗಳನ್ನು ಹೊಂದಿದ್ದು, ಇವು ಜಿಲ್ಲಾ ಪಂಚಾಯ್ತಿಯಡಿ ಬರುವ ಜಿಲ್ಲಾ ವಲಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಾಲಾ ಬದಿ, ಗೋಮಾಳ, ರೈಲ್ವೆ ಬದಿ, ನದಿ ಅಂಚಿನಲ್ಲಿ, ಶಾಲಾ-ಕಾಲೇಜು ಆವರಣಗಳಲ್ಲಿ, ಸಂಸ್ಥೆಗಳ ಆವರಣಗಳಲ್ಲಿ ಮತ್ತು ಇತರ ಅರಣ್ಯೇತರ ಪ್ರದೇಶಗಳಲ್ಲಿ ಅರಣ್ಯೀಕರಣವನ್ನು ಕೈಗೊಂಡು ಹಸರೀಕರಣ ಮಾಡುವುದು ಸಾಮಾಜಿಕ ಅರಣ್ಯ ವಿಭಾಗಗಳ ಮುಖ್ಯ ಉದ್ದೇಶವಾಗಿರುತ್ತದೆ. ಈ ಕೆಲಸಗಳ ಮೂಲಕ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ