ವಿಭಾಗದ ಮುಖ್ಯಸ್ಥರು

ಶ್ರೀ. ಎನ್.‌ ಇ.‌ ಕ್ರಾಂತಿ ರಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು
ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ,ಚಿಕ್ಕಮಗಳೂರು ವಿಭಾಗ,ಬೋಳರಾಮೇಶ್ವರ ದೇವಸ್ತಾನದ ಹತ್ತಿರ, ಚಿಕ್ಕಮಗಳೂರು.
08262238800
dcf_ckm@yahoo.co.in

ವಿಭಾಗದ ಬಗ್ಗೆ

ಚಿಕ್ಕಮಗಳೂರು ಅರಣ್ಯ ವಿಭಾಗ ಕರ್ನಾಟಕ ರಾಜ್ಯದ ನೈರುತ್ಯ ಭಾಗದಲ್ಲಿದೆ. ಈ ವಿಭಾಗ ಚಿಕ್ಕಮಗಳೂರು ಜಿಲ್ಲೆಯ ಒಂದು ಭಾಗವನ್ನು ಆವರಿಸಿಕೊಂಡಿದೆ, ಉಳಿದ ಭಾಗ ಕೊಪ್ಪ ಅರಣ್ಯ ವಿಭಾಗಕ್ಕೆ ಸೇರುತ್ತದೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 71,863 ಹೆಕ್ಟೇರ್‌ಗಳಾಗಿದೆ. ಈ ವಿಭಾಗದಲ್ಲಿ ಚಿಕ್ಕಮಗಳೂರು ಮತ್ತು ಮೂಡಿಗೆರೆ ಈ ಎರಡು ಉಪ ವಿಭಾಗಗಳಿವೆ, ಮತ್ತು ಚಿಕ್ಕಮಗಳೂರು, ಮುತ್ತೋಡಿ, ಕಡೂರು, ಮೂಡಿಗೆರೆ ಮತ್ತು ಆಲ್ದೂರು ಈ ಐದು ವಲಯಗಳನ್ನು ಒಳಗೊಂಡಿದೆ. ಚಿಕ್ಕಮಗಳೂರು ವಿಭಾಗದ ಅರಣ್ಯಗಳು ಮೂಡಿಗೆರೆ ವಲಯದ ಬಾಳೂರು ರಾಜ್ಯ ಅರಣ್ಯದಲ್ಲಿ ಒದ್ದೆ ನಿತ್ಯ ಹಸಿರು ಕಾಡುಗಳಿಂದ ಕಡೂರು ವಲಯದಲ್ಲಿ ಮುಳ್ಳುಪೊದೆ ಕಾಡುಗಳವರೆಗೆ ವ್ಯಾಪಕವಾದ ವೈವಿಧ್ಯತೆ ಹೊಂದಿವೆ. ಈ ಎರಡು ವೈಪರೀತ್ಯಗಳ ನಡುವೆ, ಮೂಡಿಗೆರೆ, ಆಲ್ದೂರು, ಮುತ್ತೋಡಿ ಮತ್ತು ಚಿಕ್ಕಮಗಳೂರು ವಲಯಗಳಲ್ಲಿ ಅರೆ ನಿತ್ಯಹಸಿರು ಮತ್ತು ತೇವಾಂಶ ಹಾಗೂ ಒಣ ಎಲೆಯುದುರುವ ಕಾಡುಗಳನ್ನು ಕಾಣಬಹುದು.

ಚಿಕ್ಕಮಗಳೂರು ವಿಭಾಗದ ನಕ್ಷೆ

--%>

ಉಪ ವಿಭಾಗಗಳು