ವಿಭಾಗದ ಮುಖ್ಯಸ್ಥರು

ಡಾ. ಮಾಲತಿ ಪ್ರಿಯ ಎಂ

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ಗ್ರಾಮೀಣ ವಿಭಾಗ, ದೇವನಹಳ್ಳಿ.
08029787088
dcfrural@gmail.com

ವಿಭಾಗದ ಬಗ್ಗೆ

ಬೆಂಗಳೂರು ಗ್ರಾಮಾಂತರ ವಿಭಾಗ ಕರ್ನಾಟಕದ ದಕ್ಷಿಣ ಭಾಗದಲ್ಲಿದೆ. ಇದರ ಗಡಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಗಳೇ ಆಗಿವೆ. ಬೆಂಗಳೂರು ಗ್ರಾಮೀಣ ಭಾಗದ ಭೌಗೋಳಿಕ ವಿಸ್ತಾರ 2,26,000 ಹೆಕ್ಟೇರ್‌ ಆಗಿದೆ. ಈ ವಿಭಾಗದಲ್ಲಿ ಸುಮಾರು 20,427.49 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಇದರಲ್ಲಿ ದೊಡ್ಡಬಳ್ಳಾಪುರ ಎನ್ನುವ ಒಂದು ಉಪ ವಿಭಾಗ, ಮತ್ತು ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಮತ್ತು ನೆಲಮಂಗಲ ಎನ್ನುವ ನಾಲ್ಕು ವಲಯಗಳಿವೆ. ಬೆಂಗಳೂರು ಗ್ರಾಮಾಂತರ ವಿಭಾಗದ ಮುಖ್ಯ ಕಚೇರಿ ದೇವನಹಳ್ಳಿ ತಾಲೂಕಿನ ಸವಕನಹಳ್ಳಿ ಅರಣ್ಯಗಳಲ್ಲಿದೆ. ಬೆಂಗಳೂರು ಗ್ರಾಮಾಂತರ ವಿಭಾಗದ ಕಾಡುಗಳು ಒಣ ಎಲೆಯುದುರುವ ಮತ್ತು ಕುರುಚಲು ಕಾಡು ವಿಧದವು. ದೇವನಹಳ್ಳಿ ಮತ್ತು ಹೊಸಕೋಟೆ ವಲಯಗಳ ಬಹುತೇಕ ಅರಣ್ಯ ಭಾಗಗಳಲ್ಲಿ ಮುಖ್ಯವಾಗಿ ನೀಲಗಿರಿ ನೆಡುತೋಪುಗಳನ್ನು ಬೆಳೆಸಲಾಗಿದೆ. ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ವಲಯದಲ್ಲಿ ಚಿಗರೆ, ಪಚಾಲಿ, ಬೆಕ್ಕೆ, ಕಕ್ಕೆ, ಕಗ್ಗಲಿ, ಲಂಟಾನಾ, ಬಂದರಿಕೆ, ಜಾಲರಿ ಮುಂತಾದ ಒಂದಿಷ್ಟು ವೈವಿಧ್ಯಮಯ ಪ್ರಭೇದಗಳು ಕಂಡುಬರುತ್ತವೆ.

ಬೆಂಗಳೂರು ಗ್ರಾಮಾಂತರ ವಿಭಾಗ

--%>

ಉಪ ವಿಭಾಗಗಳು