ವಿಭಾಗದ ಮುಖ್ಯಸ್ಥರು

ಶ್ರೀ. ಆಶೀಶ್ ರೆಡ್ಡಿ.ಎಂ.ವಿ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಕುಂದಾಪುರ ವಿಭಾಗ, ಫೆರ್ರಿರಸ್ತೆ ,ಕುಂದಾಪುರ
08254230349
kpurforest@yahoo.com

ವಿಭಾಗದ ಬಗ್ಗೆ

ಕುಂದಾಪುರ ಅರಣ್ಯ ವಿಭಾಗ ಉಡುಪಿ ಜಿಲ್ಲೆಯ ಬಹುತೇಕ ಭಾಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳನ್ನು ಒಳಗೊಂಡಿದೆ. ಈ ವಿಭಾಗದಲ್ಲಿ ಕುಂದಾಪುರ ಮತ್ತು ಮೂಡಬಿದ್ರಿ ಈ ಎರಡು ಉಪ ವಿಭಾಗಗಳಿವೆ, ಹಾಗೂ ಬೈಂದೂರು, ಕುಂದಾಪುರ, ಶಂಕರನಾರಾಯಣ, ಉಡುಪಿ, ಹೆಬ್ರಿ, ಕಾರ್ಕಳ, ಮೂಡಬಿದ್ರಿ ಮತ್ತು ವೇಣೂರು ಈ ಎಂಟು ವಲಯಗಳಿವೆ. ಈ ವಿಭಾಗ 38 ಸೆಕ್ಷನ್‌ಗಳು ಮತ್ತು 84 ಬೀಟ್‌ಗಳನ್ನು ಹೊಂದಿದೆ. ವಿಭಾಗದಲ್ಲಿರುವ ಅರಣ್ಯಗಳು ಮುಖ್ಯವಾಗಿ ಅರೆ ನಿತ್ಯಹಸಿರು ಮತ್ತು ಉಪ ತೇವಾಂಶ ಭರಿತ ಎಲೆಯುದುರುವ ಕಾಡುಗಳಾಗಿವೆ. ಪೂರ್ವದಲ್ಲಿ ಪಶ್ಚಿಮ ಘಟ್ಟಗಳ ಎತ್ತರದ ಪ್ರದೇಶಗಳಲ್ಲಿ ಒದ್ದೆ ನಿತ್ಯಹಸಿರು ಕಾಡುಗಳು ಕಂಡುಬರುತ್ತವೆ. ಕರಾವಳಿ ಪ್ರದೇಶಗಳಲ್ಲಿ ಕುರುಚಲು ಕಾಡುಗಳಿವೆ. ಅರಬ್ಬಿ ಸಮುದ್ರಕ್ಕೆ ಸೇರುವ ಕೆಲವು ನದಿಗಳ ನದೀಮುಖಗಳಲ್ಲಿ ಒಂದಿಷ್ಟು ಕಾಂಡ್ಲಾ ವನಗಳು ಕಂಡುಬರುತ್ತವೆ

ಕುಂದಾಪುರ ವಿಭಾಗದ ನಕ್ಷೆ

--%>

ಉಪ ವಿಭಾಗಗಳು