ಈ ಘಟಕವು ಕೇಂದ್ರೀಯ ಪ್ರಾಯೋಜಿತ ಅರಣ್ಯ ಬೆಂಕಿ ತಡೆ ಮತ್ತು ನಿರ್ವಹಣೆ ಯೋಜನೆಯಾಗಿದ್ದು,60 ಕೇಂದ್ರ ಪಾಲು ಹಾಗೂ 40 ರಾಜ್ಯ ಪಾಲನ್ನು ಹೊಂದಿದೆ. ಇದು ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ಈ ಹಿಂದೆ ತೀವ್ರ ಅರಣ್ಯ ನಿರ್ವಹಣಾ ಯೋಜನೆ ಎಂದು ಕರೆಯಲಾಗುತ್ತಿತ್ತು ಮತ್ತು ಇದನ್ನು 2017-18ರಲ್ಲಿ ಮರುನಾಮಕರಣ ಮಾಡಲಾಯಿತು. ಯೋಜನೆಯಡಿಯಲ್ಲಿ ಕೈಗೊಳ್ಳುವ ಕಾರ್ಯಗಳು ಬೆಂಕಿಯಿಂದ ಅರಣ್ಯವನ್ನು ರಕ್ಷಿಸುವುದು, ಅಗ್ನಿಶಾಮಕ ರೇಖೆಗಳ ರಚನೆ, ಅಸ್ತಿತ್ವದಲ್ಲಿರುವ ಅಗ್ನಿಶಾಮಕ ರೇಖೆಗಳ ನಿರ್ವಹಣೆ, ನೀರಿನ ಸಂಗ್ರಹ ರಚನೆಗಳ ನಿರ್ಮಾಣ, ಆಧುನಿಕ ಅಗ್ನಿಶಾಮಕ ಉಪಕರಣಗಳ ಖರೀದಿ,ಕಾಡಿನ ಬೆಂಕಿಯನ್ನು ನಿಯಂತ್ರಿಸುವ ಬಗ್ಗೆ ಜಾಗೃತಿ ಅಭಿಯಾನ, ಇತ್ಯಾದಿ. ಇದಲ್ಲದೆ, ಅರಣ್ಯ ಸಂಪನ್ಮೂಲ ನಿರ್ವಹಣೆ ಘಟಕವು ಈ ಕೆಳಗಿನ ರಾಜ್ಯ ವಲಯದ ಯೋಜನೇತರ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ: ಅರಣ್ಯ ಸಂರಕ್ಷಣೆ, ಪುನರುತ್ಪಾದನೆ ಮತ್ತು ಪೋಷಣೆ ಚಟುವಟಿಕೆಗಳು. ಸರ್ಕಾರಿ ಏಜನ್ಸಿಯು ಕಟಾವಣೆ ಮಾಡಿದ ನಾಟಾ ಮತ್ತುಇತರೆ ಅರಣ್ಯ ಉತ್ಪನ್ನಗಳು. ಈ ಎರಡು ಯೋಜನೆಗಳ ನಡುವೆ, ಮೊದಲನೆಯದು ವಿವಿಧ ವಿಧಾನಗಳ ಮೂಲಕ ಅರಣ್ಯದ ಸಾಮಾನ್ಯ ಸುಧಾರಣೆಗೆ ಸಸ್ಯಕ್ಷೇತ್ರ ಮತ್ತು ನೆಡುತೋಪು ವಿರಳೀಕರಣ ಚಟುವಟಿಕೆಗಳು ಸೇರಿದಂತೆ ರಕ್ಷಣೆ, ಪುನರುತ್ಪಾದನೆ ಮತ್ತು ಪೋಷಣೆ ಚಟುವಟಿಕೆಗಳನ್ನು ಪೂರೈಸಿದರೆ, ಎರಡನೆಯ ಯೋಜನೆ ಮುಖ್ಯವಾಗಿ ಅರಣ್ಯ ಉತ್ಪನ್ನಗಳ ಸಂಗ್ರಹಣ ಮತ್ತು ಸಾಗಾಣಿಕೆಗೆ ಸಂಬಂಧಿಸಿದ ವೆಚ್ಚಗಳನ್ನು ಪೂರೈಸುವುದು.