ವಿಭಾಗದ ಮುಖ್ಯಸ್ಥರು

ಡಾ .ಪ್ರಶಾಂತ್ ಕುಮಾರ್ ಕೆ ಸಿ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಫಾರೆಸ್ಟ್ ಕ್ಯಾಂಪಸ್, ಹುಣಸೂರು
08222252064
dcfhunsur@gmail.com

ವಿಭಾಗದ ಬಗ್ಗೆ

ಹುಣಸೂರು ಅರಣ್ಯ ವಿಭಾಗ ಮೈಸೂರು ಜಿಲ್ಲೆಯ ಪಶ್ಚಿಮ ಭಾಗದಲ್ಲಿದೆ. ವಿಭಾಗದ ಉತ್ತರಕ್ಕೆ ಹಾಸನ ಅರಣ್ಯ ವಿಭಾಗ, ಪೂರ್ವದಲ್ಲಿ ಮೈಸೂರು ಅರಣ್ಯ ವಿಭಾಗ, ದಕ್ಷಿಣದಲ್ಲಿ ನಾಗರಹೊಳೆ ಹುಲಿ ಮೀಸಲು ಪ್ರದೇಶ ಮತ್ತು ಪಶ್ಚಿಮದಲ್ಲಿ ಮಡಿಕೇರಿ ಮತ್ತು ವಿರಾಜಪೇಟೆ ವಿಭಾಗಗಳಿವೆ. ವಿಭಾಗದ ಒಟ್ಟು ಅನುಸೂಚಿತ ಅರಣ್ಯ ಪ್ರದೇಶದ ವಿಸ್ತಾರ 13,636.95 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ವಿಸ್ತಾರದ (2,432.91 ಚಕಿಮೀ) ಸುಮಾರು 5.6 ರಷ್ಟಿದೆ. ಈ ವಿಭಾಗ ಹುಣಸೂರು ಉಪ ವಿಭಾಗ ಎನ್ನುವ ಒಂದು ಉಪ ವಿಭಾಗ ಹೊಂದಿದೆ ಮತ್ತು ಹುಣಸೂರು, ಪಿರಿಯಾಪಟ್ನ ಮತ್ತು ಕೆ.ಆರ್‌. ನಗರ ಈ ಮೂರು ವಲಯಗಳನ್ನು ಹೊಂದಿದೆ. ಹಾಸನ ಮತ್ತು ಮಂಡ್ಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕೆ.ಆರ್‌.ನಗರ ವಲಯದ ಮಠದಕಲ್‌ ರಾಜ್ಯ ಅರಣ್ಯದ ಒಂದಿಷ್ಟು ಭಾಗವನ್ನು ಹೊರತುಪಡಿಸಿ ಈ ಎಲ್ಲ ವಲಯಗಳು ಮೈಸೂರು ಜಿಲ್ಲೆಗೆ ಸೇರುತ್ತವೆ. ಹುಣಸೂರು ವಿಭಾಗದ ಕಾಡುಗಳು ಪಶ್ಚಿಮ ಘಟ್ಟದ ಅರೆಬರೆ ಕಾಡುಗಳಾಗಿದ್ದು, ಇವುಗಳ ಬಹುತೇಕ ಜೀವವೈವಿಧ್ಯ ಅಂಶಗಳು ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಕಾಡುಗಳ ರೀತಿಯಲ್ಲೇ ಇವೆ. ಈ ಅರಣ್ಯಗಳು ಮತ್ತು ಪುಷ್ಪ ಮತ್ತು ಸಸ್ಯ ವೈವಿಧ್ಯತೆಯಲ್ಲಿ ಸಾಕಷ್ಟು ಸಮೃದ್ಧವಾಗಿವೆ ಮತ್ತು ನಿತ್ಯಹಸಿರು, ತೇವಾಂಶ ಭರಿತ ಎಲೆಯುದುರುವ, ಒಣ ಎಲೆಯುದುರುವ, ಕುರುಚಲು ಮತ್ತು ಜೊಂಡುಗಳಂಥ ವಿವಿಧ ಸಸ್ಯವಿಧಗಳೊಂದಿಗೆ ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಯ ವೈವಿಧ್ಯತೆಯನ್ನು ಹೊಂದಿವೆ. ಹುಣಸೂರು ಅರಣ್ಯ ವಿಭಾಗ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನ (ನಾಗರಹೊಳೆ ಹುಲಿ ಮೀಸಲು ಪ್ರದೇಶ)ದ ಪಕ್ಕದಲ್ಲಿ ಇರುವುದರಿಂದ, ಉದ್ಯಾನದಲ್ಲಿ ಕಂಡುಬರುವ ಬಹುತೇಕ ಪ್ರಾಣಿಗಳು ಹುಣಸೂರು ವಿಭಾಗದಲ್ಲೂ, ವಿಶೇಷವಾಗಿ ದೊಡ್ಡಹರವೆ, ಆನೆಚೌಕೂರು ಮತ್ತು ಮುದ್ದನಹಳ್ಳಿ ರಾಜ್ಯ ಅರಣ್ಯಗಳಲ್ಲಿ ಕಂಡುಬರುತ್ತವೆ.

ಹುಣಸೂರು ವಿಭಾಗದ ನಕ್ಷೆ

--%>

ಉಪ ವಿಭಾಗಗಳು

ಟೆಂಡರ್‌ಗಳು

ಸುದ್ದಿ ಮತ್ತು ನವೀಕರಣಗಳು