ಇಲಾಖೆ ಅನುಷ್ಠಾನಗೊಳಿಸಿದ ಕಾರ್ಯಗಳ ಮೌಲ್ಯಮಾಪನಕ್ಕಾಗಿ ಕರ್ನಾಟಕ ಅರಣ್ಯ ಇಲಾಖೆ ಮೊಬೈಲ್ ಆ್ಯಪ್ ಆಧರಿತ ಮೌಲ್ಯಮಾಪನವನ್ನು ಅಳವಡಿಸಿಕೊಂಡಿದೆ.ಆಂತರಿಕ ಮೌಲ್ಯಮಾಪನ (ಇಲಾಖೆಯಿಂದ ಆಂತರಿಕವಾಗಿ ರಚಿಸಿದ ಆಂತರಿಕ ತಂಡಗಳು ಮಾಡಿದ) ಮತ್ತು ಬಾಹ್ಯ ಮೌಲ್ಯಮಾಪನ (ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಮೂಲಕ ಮೂರನೇ ಪಕ್ಷದ ಏಜೆನ್ಸಿಗಳ ಮೂಲಕ ನಡೆಸಿದ) ಎರಡನ್ನೂ ಆ್ಯಪ್ ಬಳಸಿ ಮಾಡಲಾಗುತ್ತಿದೆ. ಮೌಲ್ಯಮಾಪನ ಮಾಡಬೇಕಾದ ಕೆಲಸಗಳ ವಿವರಗಳ ಪ್ರಾಥಮಿಕ ದಾಖಲಿಸಲು ಮತ್ತು ಮೌಲ್ಯಮಾಪನ ಮಾಡಿದ ಕೆಲಸಗಳನ್ನು ಚಿತ್ರಣ ಮಾಡಲು ಮತ್ತು ವ್ಯಾಖ್ಯಾನಿಸಲು ಅಪ್ಲಿಕೇಶನ್‌, ವೆಬ್‌ ಇಂಟರ್‌ಫೇಸ್‌ ಹೊಂದಿದೆ. ಕೆಲಸಗಳ ಭೂ-ನಿರ್ದೇಶಾಂಕಗಳು ಮತ್ತು ಫೊಟೋಗಳನ್ನು ತೆಗೆಯುವ ಮೂಲಕ ಸ್ಥಳದಲ್ಲಿ ನಡೆಯುತ್ತಿರುವ ಕೆಲಸದ ಪರಿಸ್ಥಿತಿಗಳನ್ನು ಮೌಲ್ಯಮಾಪನ ಮಾಡಲು ಈ ಮೊಬೈಲ್‌ ಆ್ಯಪ್ ಅನುವು ಮಾಡಿಕೊಡುತ್ತದೆ. ನಡೆಸಿದ ತಿರುಗಾಟವನ್ನು ಆಧರಿಸಿ ಆ್ಯಪ್ ತನ್ನಿಂದ ತಾನೇ ಮಾದರಿ ಪ್ಲಾಟ್‌ಗಳನ್ನು ರಚಿಸುತ್ತದೆ, ಈ ಮೂಲಕ ಮಾನವರಿಂದ ಉಂಟಾಗಬಹುದಾದ ಪಕ್ಷಪಾತವನ್ನು ನಿವಾರಿಸುತ್ತದೆ. ವೆಬ್‌ ಇಂಟರ್‌ಫೇಸ್‌ ಪ್ರಶ್ನೆ ಆಧರಿತ ವರದಿ ಸೃಷ್ಟಿಯನ್ನು ಹೊಂದಿದ್ದು, ಇದು ಸ್ಕೀಮ್‌, ಪ್ರಭೇದಗಳು, ಸಂರಕ್ಷಣಾ ತಂತ್ರಗಳು, ಮಾದರಿಗಳು ಮುಂತಾದ ಎಲ್ಲ ಅಂಶಗಳ ಪರಿಗಣನೆಯಲ್ಲಿ ಕೆಲಸಗಳು/ ನೆಡುತೋಪುಗಳ ಕಾರ್ಯನಿರ್ವಹಣೆಯನ್ನು ವಿಶ್ಲೇಷಿಸುತ್ತದೆ.


ಸಿಸ್ಟಮ್ ಅನ್ನು ಪ್ರವೇಶಿಸಲು ಮತ್ತು ಲಾಗಿನ್ ಮಾಡಲು, ಇನ್ನಷ್ಟು ತಿಳಿಯಿರಿ >>