ಸರ್ಕಾರದ ಆಯವ್ಯಯ, ಅನುದಾನ, ಬಿಡುಗಡೆ ಮತ್ತು ವೆಚ್ಚಳನ್ನು ಖಜಾನೆ-೨ ತಂತ್ರಾಂಶದ ಮೂಲಕ ನಿರ್ವಹಿಸಲಾಗುತ್ತಿರುತ್ತದೆ. ವಿವಿಧ ಲೆಕ್ಕಶೀರ್ಷಿಕೆಗಳಡಿ ಅನುಮೋದಿತ ಅನುದಾನಗಳನ್ನು ಖಜಾನೆಯಿಂದ ಇಲಾಖೆಯ ಡಿ.ಡಿ.ಓ ಗಳಿಗೆ ತ್ರೈಮಾಸಿಕವಾಗಿ ಬಿಡುಗಡೆಗೊಳಿಸಲಾಗುತಿದ್ದು, ಹೀಗೆ ಇಲಾಖೆಯ ವಿವಿಧ ಲೆಕ್ಕಶೀರ್ಷಿಕೆಗಳಡಿ ಬಿಡುಗಡೆಗೊಳಿಸಲಾದ ಅನುದಾನಗಳಡಿ ವೆಚ್ಚಗಳನ್ನು ಸಮರ್ಪಕವಾಗಿ ಭರಿಸಿ ಆರ್ಥಿಕ ಪ್ರಗತಿ ಸಾಧಿಸುವುದನ್ನು ನಿರ್ವಹಣೆ ಮಾಡುವುದು ಹಾಗೂ ನಿಗಾ ವರಹಿಸುವುದು ಜವಾಬ್ದಾರಿಯುತವಾದ ಕಾರ್ಯಗಳಲ್ಲೊಂದಾಗಿರುತ್ತದೆ. ಸದರಿ ಕಾರ್ಯಕ್ಕೆ ಪೂರಕವಾಗುವಂತೆ ಇಲಾಖೆಯ ನಿಯಂತ್ರಣಾಧಿಕಾರಿಗಳು/ ಡಿಡಿಓ ಗಳು ವಿವಿಧ ಲೆಕ್ಕಶೀರ್ಷಿಕೆಗಳಡಿ ಭರಿಸಿದ ವೆಚ್ಚಗಳು ಮತ್ತು ಆ ಮೂಲಕ ಸಾಧಿಸಿದ ಆರ್ಥಿಕ ಪ್ರಗತಿಯನ್ನು ಅವಲೋಕಿಸಲು ವಿವಿಧ ನಿಯತಾಂಕಗಳ ಮೇಲೆ ಪ್ರಗತಿಯನ್ನು ಪರಾಮರ್ಶಿಸುವ ಸೌಲಭ್ಯವುಳ್ಳ ಆಯವ್ಯಯ ನಿಗಾ ವ್ಯವಸ್ಥೆ ತಂತ್ರಾಂಶವನ್ನು ಇಲಾಖೆಯು ಅಭಿವೃದ್ಧಿ ಪಡಿಸಿ ನಿಯೋಜಿಸಿರುತ್ತದೆ. ಸದರಿ ತಂತ್ರಾಂಶವು ಒಳಗೊಂಡಿರುವ ಕೆಲವು ವೈಶಿಷ್ಟ್ಯತೆಗಳು ಈ ಕೆಳಕಂಡಂತಿರುತ್ತದೆ. • ವೃತ್ತವಾರು ಸಾಧಿಸಲಾದ ವೆಚ್ಚಗಳ ಪ್ರಗತಿ ವಿವರ • ವಿಭಾಗವಾರು ಸಾಧಿಸಲಾದ ವೆಚ್ಚಗಳ ಪ್ರಗತಿ ವಿವರ • ನಿಯಂತ್ರಣಾಧಿಕಾರಿವಾರು ಸಾಧಿಸಲಾದ ವೆಚ್ಚಗಳ ಪ್ರಗತಿ ವಿವರ • ಲೆಕ್ಕಶೀರ್ಷಿಕೆವಾರು ಪ್ರಗತಿಯ ಅವಲೋಕನ • ಘಟಕಾಧಿಕಾರಿಗಳು ಮೇಲ್ವಿಚಾರಣೆ ಮಾಡುವ ಲೆಕ್ಕಶೀರ್ಷಿಕೆಗಳ ಪ್ರಗತಿ ಅವಲೋಕನ, ಇತ್ಯಾದಿ. ಸದರಿ ತಂತ್ರಾಂಶದ ಮೂಲಕ ದೈನಂದಿನ ಮಟ್ಟದಲ್ಲಿ ಇಲಾಖೆಯ ಲೆಕ್ಕಶೀರ್ಷಿಕೆಗಳ ಪ್ರಗತಿ ಪರಿಶೀಲನೆಯು ಸಾಧ್ಯವಾಗಲಿದ್ದು, ಈ ಮೂಲಕ ಅನಾವಶ್ಯಕವಾಗಿ ಸರ್ಕಾರದ ಅನುದಾನಗಳು ಕೊನೆ ಗಳಿಗೆಯಲ್ಲಿ ಆದ್ಯರ್ಪಣೆಯಾಗುವುದನ್ನು ಅಥವಾ ಬಳಕೆಯಾಗದಿರುವುದನ್ನು ತಡೆಯುವ ನಿಟ್ಟಿನಲ್ಲಿ ನಿಗಾ ವಹಿಸಬಹುದಾಗಿರುತ್ತದೆ.


ಸಿಸ್ಟಮ್ ಅನ್ನು ಪ್ರವೇಶಿಸಲು ಮತ್ತು ಲಾಗಿನ್ ಮಾಡಲು, ಇನ್ನಷ್ಟು ತಿಳಿಯಿರಿ >>