ವಿಭಾಗದ ಮುಖ್ಯಸ್ಥರು

ಶ್ರೀ. ಚಂದ್ರಣ್ಣ. ಎ ರಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಕೋರ್ಟ್ ರಸ್ತೆ, ರಾಯಚೂರು -584101.
08532230029
dcf.trcr@gmail.com

ವಿಭಾಗದ ಬಗ್ಗೆ

ರಾಯಚೂರು ಅರಣ್ಯ ವಿಭಾಗ ಕರ್ನಾಟಕದ ಈಶಾನ್ಯ ವಲಯದಲ್ಲಿದೆ. ಈ ವಿಭಾಗದ ಗಡಿಗಳು ರಾಯಚೂರು ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 32,747 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಸುಮಾರು 3.90 ಭೌಗೋಳಿಕ ಪ್ರದೇಶದ ವಿಸ್ತಾರವಾಗಿದೆ (8,386 ಚ.ಕಿ.ಮೀ). ರಾಯಚೂರು ವಿಭಾಗ ರಾಯಚೂರು ಉಪ ವಿಭಾಗ ಎನ್ನುವ ಒಂದು ಉಪ ವಿಭಾಗ ಹೊಂದಿದೆ ಮತ್ತು ರಾಯಚೂರು, ಲಿಂಗಸಗೂರು, ದೇವದುರ್ಗ ಮತ್ತು ಮಾನ್ವಿ ಈ ನಾಲ್ಕು ವಲಯಗಳನ್ನು ಹೊಂದಿದೆ. ಸಾಕಷ್ಟು ಅನುಕೂಲಕರ ಪ್ರದೇಶಗಳಲ್ಲಿ ಅಲ್ಲಲ್ಲಿ ಒಣ ಮಿಶ್ರ ಎಲೆಯುದುರುವ ಕಾಡುಗಳ ಜೊತೆಗೆ ರಾಯಚೂರು ವಿಭಾಗದ ಅರಣ್ಯಗಳು ಮುಖ್ಯವಾಗಿ ಕುರುಚಲು ಕಾಡುಗಳಾಗಿವೆ. ಸಾಕಷ್ಟು ಉತ್ತಮವಾದ ಮಿಶ್ರ ಒಣ ಎಲೆಯುದುರುವ ಕಾಡುಗಳನ್ನು ಬಂಕಲದೊಡ್ಡಿ, ಜಾಲಹಳ್ಳಿ, ಕವಿತಾಳ, ಕುಮಾರಖೇಡ, ದೇವದುರ್ಗ ಮುಂತಾದೆಡೆ ಕಾಣಬಹುದು.

ರಾಯಚೂರು ವಿಭಾಗದ ನಕ್ಷೆ

--%>

ಉಪ ವಿಭಾಗಗಳು