ಇಲಾಖೆಯ ಇತರ ಘಟಕಗಳಿಂದ ನಿರ್ವಹಿಸಲ್ಪಡುವ ಕಾರ್ಯಕ್ರಮಗಳು/ಯೋಜನೆಗಳನ್ನು ಹೊರತುಪಡಿಸಿ, ಇಲಾಖೆಯ ಅಭಿವೃದ್ಧಿ ಕೆಲಸಗಳ ಅನುಷ್ಠಾನ ಮತ್ತು ಮೇಲ್ವಚಾರಣೆ ಅರಣ್ಯ ಇಲಾಖೆಯ ಅಭಿವೃದ್ಧಿ ಘಟಕದ ಮುಖ್ಯ ಜವಾಬ್ದಾರಿಯಾಗಿರುತ್ತದೆ ಮತ್ತು ಇಲಾಖೆಯ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳು/ಯೋಜನೆಗಳ ಪ್ರಗತಿ ವರದಿಗಳನ್ನು ಪ್ರತಿ ತಿಂಗಳು ಸಿದ್ಧಪಡಿಸುತ್ತದೆ. ಅಭಿವೃದ್ಧಿ ಘಟಕ ನಿರ್ವಹಿಸುವ ಪ್ರಮುಖ ಯೋಜನೆಗಳು ಈ ಕೆಳಗಿನಂತಿವೆ: ಕ್ಷೀಣಿತ ಅರಣ್ಯಗಳ ಅಭಿವೃದ್ಧಿ, ನಗರ ಪ್ರದೇಶಗಳ ಹಸಿರೀಕರಣ, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳಸುವುದು, ಶ್ರೀಗಂಧ ನೆಡುತೋಪುಗಳನ್ನು ಬೆಳೆಸುವುದು, ಮಗುವಿಗೊಂದು ಮರ ಶಾಲೆಗೊಂದು ವನ, ರಸ್ತೆ ಬದಿ ನೆಡುತೋಪುಗಳು, ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆ, ಹಸಿರು ಕರ್ನಾಟಕ ಕಾರ್ಯಕ್ರಮ, ಇತರ ಪ್ರದೇಶಗಳಲ್ಲಿ ಅರಣ್ಯೀಕರಣ, ಇತ್ಯಾದಿ