ವಿಭಾಗದ ಮುಖ್ಯಸ್ಥರು

ಶ್ರೀ. ರವಿಶಂಕರ್. ಸಿ ರಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಡ್ಯ ವಿಭಾಗ, ಮಂಡ್ಯ
08232220630
dcfmandya@gmail.com

ವಿಭಾಗದ ಬಗ್ಗೆ

ಕರ್ನಾಟಕ ರಾಜ್ಯದ ದಕ್ಷಿಣ ಭಾಗದ ಕೇಂದ್ರ ವಲಯದಲ್ಲಿ ಮಂಡ್ಯ ಅರಣ್ಯ ವಿಭಾಗ ಇದೆ. ಈ ವಿಭಾಗ ಮಂಡ್ಯ ಕಂದಾಯ ಜಿಲ್ಲೆಯ ಎಲ್ಲ ಏಳು ತಾಲೂಕುಗಳನ್ನು ಒಳಗೊಂಡಿದ್ದು, ಪ್ರತಿ ತಾಲೂಕಿನಲ್ಲಿ ಒಂದು ವಲಯ ಕಚೇರಿ ಹೊಂದಿದೆ. ಮಂಡ್ಯ ವಿಭಾಗದ ಅಧಿಸೂಚಿತ ಅರಣ್ಯ ಪ್ರದೇಶದ ಒಟ್ಟು ವಿಸ್ತಾರ 17,331.99 ಹೆಕ್ಟೇರ್‌ಗಳು. (ಕಾವೇರಿ ವನ್ಯಜೀವಿ ವಿಭಾಗಕ್ಕೆ ಹಸ್ತಾಂತರಿಸಿದ ಸಂರಕ್ಷಿತ ಪ್ರದೇಶ ಸೇರಿದಂತೆ) ಮಂಡ್ಯ ಜಿಲ್ಲೆಯ ಅಧಿಸೂಚಿತ ಅರಣ್ಯ ಪ್ರದೇಶದ ಒಟ್ಟು ವಿಸ್ತಾರ 26,235.32 ಹೆಕ್ಟೇರ್‌ಗಳಾಗಿದ್ದು, ಇದು ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತಾರದ (4961 ಚಕಿಮೀ) ಸುಮಾರು 5.29 ಆಗಿದೆ. ಈ ವಿಭಾಗದಲ್ಲಿ ಕಾವೇರಿ, ಹೇಮಾವತಿ, ಲೋಕಪಾವನಿ ಮತ್ತು ಶಿಂಷಾ ಈ ನಾಲ್ಕು ನದಿಗಳು ಹರಿಯುತ್ತವೆ. ಮಂಡ್ಯ ವಿಭಾಗದಲ್ಲಿರುವ ಕಾಡುಗಳು ಮುಖ್ಯವಾಗಿ ಒಣ ಎಲೆಯುದುರುವ ಮತ್ತು ಕುರುಚಲು ಕಾಡುಗಳಾಗಿವೆ. ಮಂಡ್ಯ ಮತ್ತು ನಾಗಮಂಗಲದಲ್ಲಿ ಮುಖ್ಯ ಕಚೇರಿಯೊಂದಿಗೆ ಈ ವಿಭಾಗ ಎರಡು ಉಪ-ವಿಭಾಗಗಳನ್ನು ಹೊಂದಿದೆ. ಮಂಡ್ಯ ಉಪ ವಿಭಾಗ ನಾಲ್ಕು ವಲಯಗಳನ್ನು ಹೊಂದಿದೆ, ಅವು ಮಂಡ್ಯ, ಮದ್ದೂರು, ಮಳವಳ್ಳಿ ಮತ್ತು ಶ್ರೀರಂಗಪಟ್ಟಣ. ನಾಗಮಂಗಲ ಉಪ ವಿಭಾಗ ಮೂರು ವಲಯಗಳನ್ನು ಹೊಂದಿದ್ದು, ಅವು ನಾಗಮಂಗಲ, ಪಾಂಡವಪುರ ಮತ್ತು ಕೆ.ಆರ್‌. ಪೇಟೆಗಳಾಗಿವೆ. ಮಂಡ್ಯ ವಿಭಾಗ ಬಹುತೇಕ ಅರಣ್ಯೀಕರಣ ವಿಭಾಗವಾಗಿದೆ. ರಾಜ್ಯ ಅರಣ್ಯಗಳಲ್ಲಿ ಹಾಗೂ ಇತರ ಸರ್ಕಾರಿ ಭೂಮಿಗಳಲ್ಲಿ ಹಲವು ವರ್ಷಗಳಿಂದ ವಿಸ್ತಾರವಾದ ನೆಡುತೋಪುಗಳನ್ನು ಬೆಳೆಸಲಾಗಿದೆ.

ಮಂಡ್ಯ ವಿಭಾಗದ ನಕ್ಷೆ

--%>

ಉಪ ವಿಭಾಗಗಳು