ಸಸಿ ನರ್ಸರಿಗಳನ್ನು ಬೆಳೆಸುವುದು ಅರಣ್ಯ ಇಲಾಖೆಯ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಇಲಾಖೆಯ ನೆಡುತೋಪುಗಳು, ಸಾರ್ವಜನಿಕ ವಿತರಣೆಗಾಗಿ ಮತ್ತು ಕೃಷಿ ಅರಣ್ಯೀಕರಣ ಪದ್ಧತಿಗಳು ಮುಂತಾದವುಗಳಿಗಾಗಿ ಸಸಿಗಳನ್ನು ಬೆಳೆಸಲಾಗುತ್ತದೆ. ಅರಣ್ಯ ನರ್ಸರಿಗಳಲ್ಲಿ ಸಸಿಗಳ ದಾಸ್ತಾನಿನ ಮೇಲ್ವಿಚಾರಣೆ, ದಾಸ್ತಾನು ತಪಾಸಣೆ ಮತ್ತು ನೈಜ ಸಮಯದಲ್ಲಿ ಸಸಿಗಳ ವಿತರಣೆಗಳಿಗೆ ಈ ವ್ಯವಸ್ಥೆ ಅನುಕೂಲ ಕಲ್ಪಿಸುತ್ತದೆ. ರಾಜ್ಯದ ವಿವಿಧ ನರ್ಸರಿಗಳಲ್ಲಿ ಪ್ರಭೇದ ಆಧರಿತ ಸಸಿಗಳ ಲಭ್ಯತೆಗೆ ಸಂಬಂಧಿಸಿ ಈ ಅಪ್ಲಿಕೇಶನ್ ಸಾರ್ವಜನಿಕರಿಗೆ ಮಾಹಿತಿಯನ್ನೂ ಒದಗಿಸುತ್ತದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಮಾಡ್ಯೂಲ್ ಸಾಫ್ಟ್ವೇರ್ ರೂಪದಲ್ಲಿಯೂ ಲಭ್ಯವಿದ್ದು ರೈತರು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ(ಕೆಎಪಿವೈ) ಸ್ಕೀಮ್ನಲ್ಲಿ ನೋಂದಣಿ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಕೆಎಪಿವೈ ಒಂದು ಪ್ರೋತ್ಸಾಹಧನ ಆಧರಿತ ಕೃಷಿ ಅರಣ್ಯೀಕರಣ ಯೋಜನೆಯಾಗಿದ್ದು, ಮೂರು ಅನುಕ್ರಮ ವರ್ಷಗಳಲ್ಲಿ ಪ್ರತಿ ಬದುಕುಳಿದ ಸಸಿಗೆ ಫಲಾನುಭವಿಗೆ ₹30, ₹40 ಹಾಗೂ ₹40 ನೀಡಲಾಗುತ್ತದೆ. ಕೆಎಪಿವೈ ತಪಾಸಣೆ ಮತ್ತು ವರದಿಗಾರಿಕೆಯ ಆಂಡ್ರಾಯ್ಡ್ ಆ್ಯಪ್ ಇಲಾಖಾ ಬಳಕೆದಾರರು ಕೆಎಪಿವೈ ಯೋಜನೆಯಡಿ ನೆಟ್ಟ ಸಸಿಗಳ ಸ್ಥಿತಿಗತಿ ದಾಖಲಿಸಲು ಅನುವು ಮಾಡಿಕೊಡುತ್ತದೆ.


ಸಿಸ್ಟಮ್ ಅನ್ನು ಪ್ರವೇಶಿಸಲು ಮತ್ತು ಲಾಗಿನ್ ಮಾಡಲು, ಇನ್ನಷ್ಟು ತಿಳಿಯಿರಿ >>