ವಿಭಾಗದ ಮುಖ್ಯಸ್ಥರು

Shri.Arsalan,IFS

ಉಪ ಅರಣ್ಯ ಸಂರಕ್ಷಣಾಧಿಕಾರಿ
O/o Deputy Conservator of Forests, Chikkaballapura Division,Chikkaballapura
08155263198
dcfcbpur@yahoo.in

ವಿಭಾಗದ ಬಗ್ಗೆ

ಚಿಕ್ಕಬಳ್ಳಾಪುರ ಅರಣ್ಯ ವಿಭಾಗ ಕರ್ನಾಟಕದ ಆಗ್ನೇಯ ವಲಯದಲ್ಲಿದೆ. ಈ ವಿಭಾಗದ ಗಡಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಗಳೇ ಆಗಿವೆ. ಈ ವಿಭಾಗ 684.32 ಚ.ಕಿ.ಮೀ. ಅರಣ್ಯ ಪ್ರದೇಶವನ್ನು ಹೊಂದಿದ್ದು, ಭೌಗೋಳಿಕ ಪ್ರದೇಶದ ಒಟ್ಟು ವಿಸ್ತಾರದ (4,045 ಚ.ಕಿ.ಮೀ.) 16.91 ಭಾಗವಾಗುತ್ತದೆ. ಚಿಕ್ಕಬಳ್ಳಾಪುರ ವಿಭಾಗದಲ್ಲಿ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ಈ ಎರಡು ಉಪ ವಿಭಾಗಗಳಿವೆ ಮತ್ತು ಚಿಕ್ಕಬಳ್ಳಾಪುರ, ಗುಡಿಬಂಡೆ, ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಬಾಗೇಪಲ್ಲಿ ಈ ಆರು ವಲಯಗಳಿವೆ. ಚಿಕ್ಕಬಳ್ಳಾಪುರ ವಿಭಾಗ ಒಣ ಎಲೆಯುದುರುವ ಮತ್ತು ಕುರುಚಲು ಮಾದರಿಯ ಅರಣ್ಯಗಳನ್ನು ಹೊಂದಿದ್ದು, ಚಿಗರೆ, ಪಚಾಲಿ, ಬೆಕ್ಕೆ, ಕಕ್ಕೆ, ಕಗಳಿ, ಲಂಟಾನಾ, ಬಂದರಿಕೆ, ಜಾಲರಿ ಮುಂತಾದ ಪ್ರಭೇದಗಳಿವೆ. ಬಹಳ ಕಡಿಮೆ ಅರಣ್ಯವಿರುವ ಅವಿಭಜಿತ ಪ್ರದೇಶಗಳಲ್ಲಿ ಕೃಷ್ಣಮೃಗ ಮತ್ತು ಚುಕ್ಕೆ ಜಿಂಕೆಗಳು ಬಹಳಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ. ಬೆಟ್ಟಗಳ ಇಳಿಜಾರು ಮತ್ತು ಕಣಿವೆಗಳಲ್ಲಿ, ಚಿರತೆ, ಜೇನು ಕರಡಿ ಮತ್ತು ಅನೇಕ ಜಾತಿಯ ಸರೀಸೃಪಗಳು ಕಂಡುಬರುತ್ತವೆ, ಇಲ್ಲಿ ನಾಗರಹಾವು ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಯಾವುದೇ ವನ್ಯಜೀವಿ ಅಭಯಾರಣ್ಯ ಅಥವಾ ರಾಷ್ಟ್ರೀಯ ಉದ್ಯಾನ ಇಲ್ಲ.

ಚಿಕ್ಕಬಳ್ಳಾಪುರ ವಿಭಾಗದ ನಕ್ಷೆ

--%>

ಉಪ ವಿಭಾಗಗಳು

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ

ಸುದ್ದಿ ಮತ್ತು ನವೀಕರಣಗಳು