ವಿಭಾಗದ ಮುಖ್ಯಸ್ಥರು

ಡಾ. ಎಸ್.‌ ರಮೇಶ್‌

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ, ತುಮಕೂರು ವಿಭಾಗ, ತುಮಕೂರು
08162201196
rameshdcf@gmail.com

ವಿಭಾಗದ ಬಗ್ಗೆ

ತುಮಕೂರು ಅರಣ್ಯ ವಿಭಾಗ ಕರ್ನಾಟಕದ ಆಗ್ನೇಯ ವಲಯದಲ್ಲಿದೆ. ತುಮಕೂರ ವಿಭಾಗದ ಗಡಿಗಳು ತುಮಕೂರು ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 1,29,167 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ವಿಸ್ತಾರದ (10,597 ಚ.ಕಿ.ಮೀ.) ಸುಮಾರು 12.19 ರಷ್ಟಿದೆ. ಈ ವಿಭಾಗದಲ್ಲಿ ತುಮಕೂರು, ತಿಪಟೂರು ಮತ್ತು ಮಧುಗಿರಿ ಈ ಮೂರು ಉಪ ವಿಭಾಗಗಳಿವೆ, ಹಾಗೂ ಬುಕ್ಕಾಪಟ್ಟಣ, ಚಿಕ್ಕನಾಯಕನ ಹಳ್ಳಿ, ಗುಬ್ಬಿ, ಹುಲಿಯೂರುದುರ್ಗ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ತಿಪಟೂರು ಮತ್ತು ತುಮಕೂರು ಈ ಹತ್ತು ವಲಯಗಳಿವೆ. ಈ ವಿಭಾಗದ ಕಾಡುಗಳು ಒಣ ಮಿಶ್ರ ಎಲೆಯುದುರುವ ಕಾಡುಗಳಿಂದ ಮುಳ್ಳು ಪೊದೆಗಳವರೆಗೆ ವೈವಿಧ್ಯತೆ ಹೊಂದಿವೆ. ಬುಕ್ಕಾಪಟ್ನ, ಚಿಕ್ಕನಾಯಕನ ಹಳ್ಳಿ, ಗುಬ್ಬಿ, ಕೊರಟಗೆರೆ ಮತ್ತು ತುಮಕೂರು ವಲಯಗಳಲ್ಲಿ ವೈವಿಧ್ಯಮಯ ಪ್ರಭೇದಗಳೊಂದಿಗೆ ಸಾಕಷ್ಟು ಉತ್ತಮ ಸಸ್ಯಸಂಪತ್ತು ಕಂಡುಬರುತ್ತದೆ. ವಿಭಾಗದ ಪೂರ್ವ ಭಾಗದಲ್ಲಿ ಮಳೆ ಕೊರತೆಯಿಂದಾಗಿ ತೆಳುವಾದ ಅರಣ್ಯವಿದೆ, ಮತ್ತು ಅಲ್ಲಿ ಪ್ರಭೇದಗಳ ವೈವಿಧ್ಯತೆ ಕಡಿಮೆ ಇದೆ. ವಿಭಾಗದ ಪೂರ್ವದ ತುತ್ತತುದಿಯ ಭಾಗಗಳಲ್ಲಿ ಅರಣ್ಯಗಳು ಕುರುಚಲು ಕಾಡುಗಳಾಗಿವೆ ಹಾಗೂ ಹೆಚ್ಚಿನ ಕಡೆ ಮುಳ್ಳು ಕಂಟಿಗಳು ಹಾಗೂ ಬಂಡೆಗಲ್ಲುಗಳು ಕಂಡುಬರುತ್ತವೆ. ತುಮಕೂರು ವಿಭಾಗದಲ್ಲಿ ಕೆಲವು ಸಂರಕ್ಷಿತ ಪ್ರದೇಶಗಳಿವೆ: ಮ್ಯಾದನಹಳ್ಳಿ (ಜಯಮಂಗಲಿ) ಕೃಷ್ಣ ಮೃಗ ಸಂರಕ್ಷಣಾ ಮೀಸಲು (2007), ತಿಮ್ಲಾಪುರ ವನ್ಯಜೀವಿ ಅಭಯಾರಣ್ಯ (2016), ತಿಮ್ಲಾಪುರ ಸಂರಕ್ಷಿತ ಮೀಸಲು (2016) ಮತ್ತು ಬುಕ್ಕಾಪಟ್ನ ವನ್ಯಜೀವಿ ಅಭಯಾರಣ್ಯ (2019) ತುಮಕೂರು ವಿಭಾಗದ ಅರಣ್ಯಗಳು ಔಷಧೀಯ ಸಸ್ಯಗಳಿಗೂ ಪ್ರಸಿದ್ಧವಾಗಿವೆ. ದೇವರಾಯನದುರ್ಗ (ತುಮಕೂರು ವಲಯ) ಮತ್ತು ಸಿದ್ದರಬೆಟ್ಟ (ಕೊರಟಗೆರೆ ವಲಯ)ದ ಗಿರಿಶಿಖರಗಳು ಅನೇಕ ವಿಧದ ಗಿಡಮೂಲಿಕೆಗಳಿಗೆ ಹೆಸರುವಾಸಿಯಾಗಿವೆ.

ತುಮಕೂರು ವಿಭಾಗದ ನಕ್ಷೆ

--%>

ಉಪ ವಿಭಾಗಗಳು