ಕರ್ನಾಟಕ ಅರಣ್ಯ ಇಲಾಖೆಯ ಯೋಜನಾ ಘಟಕ ಬಾಹ್ಯ ನೆರವಿನ ಯೋಜನೆಗಳ ಅನುಷ್ಟಾನವನ್ನು ಮಾಡುತ್ತಿದ್ದು, ಪ್ರಸ್ತುತ ಬಾಹ್ಯ ನೆರವಿನ ಯೋಜನೆಗಳನ್ನು ಇಲಾಖೆಯು ಅನುಷ್ಟಾನಗೊಳಿಸುತ್ತಿಲ್ಲ. ಈ ಘಟಕದಿಂದ ಪ್ರಸ್ತುತ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ (ವೃಕ್ಷೋದ್ಯಾನ), ದೇವರಕಾಡು (ದೈವೀವನ), ಔಷಧೀಯ ಸಸ್ಯ ಸಂರಕ್ಷಿತ ಪ್ರದೇಶಗಳು ಮತ್ತು ಔಷಧೀಯ ಸಸ್ಯ ಅಭಿವೃದ್ಧಿ ಪ್ರದೇಶಗಳ ನಿವ೵ಹಣೆ, ಸಮೃದ್ಧ ಹಸಿರು ಗ್ರಾಮ ಯೋಜನೆ, ತಾಲ್ಲೂಕಿಗೊಂದು ಹಸಿರು ಗ್ರಾಮ ಯೋಜನೆ, ಗ್ರಾಮ ಅರಣ್ಯ ಸಮಿತಿಗಳ ಪುನಸ್ಚೇತನ ಯೋಜನೆ ಮುಂತಾದ ರಾಜ್ಯ ಸಕಾ೵ರದ ಯೋಜನೆಗಳಲ್ಲದೇ ಕೇಂದ್ರ ಪುರಸ್ಕೃತ ಯೋಜನೆಗಳಾದ ನಗರವನ ಉದ್ಯಾನ ಯೋಜನೆ, ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ ರವರ ಅನುದಾನಿತ ಅರಣ್ಯೀಕರಣ ಕಾಯ೵ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.