ವಿಭಾಗದ ಮುಖ್ಯಸ್ಥರು

ಶ್ರೀ. ಸಿದ್ದರಾಮಪ್ಪ ಎಂ.ಸಿ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ಪ್ರಾದೇಶಿಕ ವಿಭಾಗ, ಮೃಗಾಲಯದ ಕಾಂಪೌಂಡ್ ಹತ್ತಿರ, ರೇಡಿಯೋ ಪಾರ್ಕ್, ಬಳ್ಳಾರಿ
08392240797
dcfbellaryt@gmail.com

ವಿಭಾಗದ ಬಗ್ಗೆ

ಕರ್ನಾಟಕ ರಾಜ್ಯದ ಪೂರ್ವ ಭಾಗದ ಕೇಂದ್ರ ವಲಯದಲ್ಲಿ ಬಳ್ಳಾರಿ ಅರಣ್ಯ ವಿಭಾಗ ಇದೆ. ಬಳ್ಳಾರಿ ವಿಭಾಗದ ಗಡಿಗಳು ಬಳ್ಳಾರಿ ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದಲ್ಲಿ ದಾಖಲಿಸಿರುವ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 1,37,852 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಸುಮಾರು 16.31 ಭೌಗೋಳಿಕ ಪ್ರದೇಶದ ವಿಸ್ತಾರವಾಗಿದೆ (8,450 ಚ.ಕಿ.ಮೀ). ಈ ವಿಭಾಗ ಮೂರು ಉಪ ವಿಭಾಗಗಳನ್ನು ಹೊಂದಿದೆ, ಅವು ಬಳ್ಳಾರಿ, ಹೊಸಪೇಟೆ ಮತ್ತು ಕೂಡ್ಲಿಗಿ ಉಪ ವಿಭಾಗಗಳು, ಮತ್ತು ಬಳ್ಳಾರಿ, ಹೂವಿನಹಡಗಲಿ, ಹೊಸಪೇಟೆ, ಕೂಡ್ಲಿಗಿ, ಸಂಡೂರು ಉತ್ತರ, ಸಂಡೂರು ದಕ್ಷಿಣ, ಗುಡೇಕೋಟೆ ವನ್ಯಜೀವಿ ಮತ್ತು ದರೋಜಿ ವನ್ಯಜೀವಿ ವಲಯ ಎನ್ನುವ ಎಂಟು ವಲಯಗಳನ್ನು ಹೊಂದಿದೆ. ಬಳ್ಳಾರಿ ವಿಭಾಗದ ಅರಣ್ಯಗಳು ಒಣ ಮಿಶ್ರ ಎಲೆಯುದುರುವ ಕಾಡುಗಳಿಂದ ಹೂವಿನಹಡಗಲಿ, ಹೊಸಪೇಟೆ, ಕೂಡ್ಲಿಗಿ, ಸಂಡೂರು ಉತ್ತರ, ಸಂಡೂರು ದಕ್ಷಿಣ, ಗುಡೇಕೋಟೆ ವನ್ಯಜೀವಿ ಮತ್ತು ದರೋಜಿ ವನ್ಯಜೀವಿ ವಲಯಗಳನ್ನು ಹೊಂದಿದೆ. ಬಳ್ಳಾರಿ ವಿಭಾಗದ ಕಾಡುಗಳು ಒಣ ಮಿಶ್ರ ಎಲೆಯುದುರುವ ಕಾಡುಗಳಿಂದ ಮುಳ್ಳು ಪೊದೆಗಳವರೆಗೆ ವೈವಿಧ್ಯತೆ ಹೊಂದಿವೆ. ಸಂಡೂರು ಅರಣ್ಯ ಹಾಗೂ ಸಾಕಷ್ಟು ಉತ್ತಮ ಒಣ ಮಿಶ್ರ ಎಲೆಯುದುರುವ ಕಾಡುಗಳನ್ನು ಹೊಂದಿರುವ ಹೊಸಪೇಟೆ ಮತ್ತು ಕೂಡ್ಲಿಗಿ ವಲಯದ ಒಂದಿಷ್ಟು ಅರಣ್ಯ ಪ್ರದೇಶಗಳನ್ನು ಹೊರತುಪಡಿ, ಈ ವಿಭಾಗದಲ್ಲಿರುವ ಬಹುತೇಕ, ವಿಶೇಷವಾಗಿ ಪೂರ್ವಭಾಗದಲ್ಲಿರುವ, ಅರಣ್ಯ ಭಾಗಗಳು ಭಾರೀ ಪ್ರಮಾಣದ ಕುರುಚಲು ಕಾಡುಗಳನ್ನು ಹೊಂದಿವೆ, ಇವು ಅತ್ಯಂತ ಒಣ ಪ್ರದೇಶಗಳಲ್ಲಿ ಮುಳ್ಳುಕಂಟಿ ಗಿಡಗಳಾಗಿವೆ. ಈ ವಿಭಾಗ ಎರಡು ವನ್ಯಜೀವಿ ಅಭಯಾರಣ್ಯಗಳನ್ನು ಹೊಂದಿದೆ, ಅವು ದರೋಜಿ ಕರಡಿ ಅಭಯಾರಣ್ಯ (82.72 ಚ.ಕಿ.ಮೀ.) ಮತ್ತು ಗುಡೇಕೋಟೆ ವನ್ಯಜೀವಿ ಅಭಯಾರಣ್ಯ (47.61 ಚ.ಕಿ.ಮೀ.)

ಬಳ್ಳಾರಿ ವಿಭಾಗದ ನಕ್ಷೆ

--%>

ಉಪ ವಿಭಾಗಗಳು

ಟೆಂಡರ್‌ಗಳು

ಸುದ್ದಿ ಮತ್ತು ನವೀಕರಣಗಳು