ವಿಭಾಗದ ಮುಖ್ಯಸ್ಥರು

ವಿಭಾಗದ ಬಗ್ಗೆ

ಸಾಗರ ಅರಣ್ಯ ವಿಭಾಗ ಶಿವಮೊಗ್ಗ ಅರಣ್ಯ ವಿಭಾಗದ ಪಶ್ಚಿಮ ಭಾಗದಲ್ಲಿದೆ. ಇದು ಸಾಗರ, ಹೊಸನಗರ, ಶಿಕಾರಿಪುರ ಮತ್ತು ಸೊರಬ ಕಂದಾಯ ತಾಲೂಕುಗಳನ್ನು ಒಳಗೊಂಡಿದೆ. ಈ ಹಿಂದಿನ ಸಾಗರ ವಿಭಾಗದ ಗಮನಾರ್ಹ ಪ್ರಮಾಣದ ಅರಣ್ಯ ಪ್ರದೇಶಗಳನ್ನು ಶಿವಮೊಗ್ಗ ವನ್ಯಜೀವಿ ಮತ್ತು ಕುದುರೆಮುಖ ವನ್ಯಜೀವಿ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ. ಸಾಗರ ಅರಣ್ಯ ವಿಭಾಗದ ಪ್ರಸ್ತುತ ವಿಸ್ತಾರ (ವನ್ಯಜೀವಿ, ಎಂ.ಪಿ.ಎಂ., ಕೆ.ಎಫ್‌.ಡಿ.ಸಿ. ಮುಂತಾದವಕ್ಕೆ ಹಸ್ತಾಂತರಸಿದ ಪ್ರದೇಶಗಳನ್ನು ಹೊರತುಪಡಿಸಿ) ಸುಮಾರು 1,14,933.39 ಹೆಕ್ಟೇರ್‌ಗಳಾಗಿದೆ. ಈ ವಿಭಾಗ ನಾಲ್ಕು ಉಪ ವಿಭಾಗಗಳನ್ನು ಹೊಂದಿದೆ. ಅವು ಸಾಗರ, ಸೊರಬ, ಹೊಸನಗರ ಮತ್ತು ಶಿಕಾರಿಪುರ. ಹಾಗೂ ನಗರ, ಹೊಸನಗರ, ಅಂಬ್ಲಿಗೋಳ, ಶಿಕಾರಿಪುರ, ಶಿರಾಳಕೊಪ್ಪ, ಅನವತ್ತಿ, ಸೊರಬ, ಆನಂದಪುರ, ಕಾರ್ಗಲ್ ಮತ್ತು ಸಾಗರ ಈ ಹತ್ತು ವಲಯಗಳನ್ನು ಒಳಗೊಂಡಿದೆ. ಸಾಗರ ವಿಭಾಗದ ಪಶ್ಚಿಮ ಭಾಗದಲ್ಲಿರುವ ಕಾಡುಗಳು ನಿತ್ಯಹಸಿರು ಮತ್ತು ಅರೆ ನಿತ್ಯಹಸಿರು ವಿಧದವಾಗಿವೆ. ವಿಭಾಗದ ಕೇಂದ್ರ ಭಾಗದಲ್ಲಿ, ಅರೆ ನಿತ್ಯಹಸಿರು ಕಾಡುಗಳೊಂದಿಗೆ ತೇವಾಂಶ ಭರಿತ ಎಲೆಯುದುರುವ ಕಾಡುಗಳನ್ನು ಕಾಣಬಹುದು. ವೃತ್ತದ ಪೂರ್ವ ಭಾಗದಲ್ಲಿ ಒಣ ಎಲೆಯುದುರುವ ಕಾಡುಗಳಿದ್ದು, ತೀವ್ರ ಜೈವಿಕ ಒತ್ತಡದ ಕಾರಣದಿಂದ ಇವು ಕುರುಚಲು ಕಾಡುಗಳಾಗಿವೆ.

ಸಾಗರ ವಿಭಾಗದ ನಕ್ಷೆ

--%>

ಉಪ ವಿಭಾಗಗಳು