ವಿಭಾಗದ ಬಗ್ಗೆ
ಯೋಜನೆಗಳು ಅಥವಾ ಕಾರ್ಯಕ್ರಮಗಳ ವಿನ್ಯಾಸ ಮತ್ತು ಅನುಷ್ಠಾನದಲ್ಲಿ ಸುಧಾರಣೆ, ಕೆಲಸಗಳ ಗುಣಮಟ್ಟದ ಸುಧಾರಣೆ, ಇಲಾಖೆಯ ಸಾಮರ್ಥ್ಯ ವೃದ್ಧಿ ಇತ್ಯಾದಿಗಳಿಗಾಗಿ ಮೌಲ್ಯಮಾಪನವನ್ನು ಒಂದು ಸಾಧನವನ್ನಾಗಿ ರಾಜ್ಯದಲ್ಲಿ ಮುಂಚಿತವಾಗಿ ಜಾರಿಗೆ ತಂದ ಸರ್ಕಾರಿ ಇಲಾಖೆಗಳಲ್ಲಿ ಕರ್ನಾಟಕ ಅರಣ್ಯ ಇಲಾಖೆಯು ಒಂದಾಗಿದೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮಾರ್ಗಸೂತ್ರಗಳ ಅನುಸಾರ, ಇಲಾಖೆಯಲ್ಲಿನ ವಿವಿಧ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನಕ್ಕಾಗಿ ಪ್ರತಿ ಸರ್ಕಾರಿ ಇಲಾಖೆ ವಾರ್ಷಿಕ ಅನುದಾನದ ಶೇ. 1 ರಿಂದ 2 ರಷ್ಟನ್ನು ಕಾಯ್ದಿರಿಸುವುದು ಕಡ್ಡಾಯವಾಗಿದೆ. ಅರಣ್ಯ ಇಲಾಖೆಯ ಮೌಲ್ಯಮಾಪನ ಘಟಕಕ್ಕೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮೌಲ್ಯಮಾಪನ) ಇವರು ಮುಖ್ಯಸ್ಥರಾಗಿರುತ್ತಾರೆ. ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮೌಲ್ಯಮಾಪನ) ರವರಿಗೆ ಕೇಂದ್ರ ಸ್ಥಾನದಲ್ಲಿ ಸಹಾಯ/ಸಹಕಾರ ನೀಡುತ್ತಾರೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮಾರ್ಗಸೂತ್ರಗಳ ಅನುಸಾರ ಅರಣ್ಯ ಇಲಾಖೆ ಅನುಷ್ಠಾನಗೊಳಿಸಿರುವ ವಿವಿಧ ಕಾರ್ಯಕ್ರಮಗಳು/ಯೋಜನೆಗಳ ಮೌಲ್ಯಮಾಪನ ನಡೆಸುವುದನ್ನು ಮೌಲ್ಯಮಾಪನ ಘಟಕ ನಿರ್ವಹಿಸುತ್ತದೆ.