ಕಾಂಪಾ (CAMPA) ನಿಧಿಗಳನ್ನು ಬಳಸಿ ರಾಜ್ಯ ಅರಣ್ಯ ಇಲಾಖೆ ನಡೆಸಿದ ಕಾರ್ಯಗಳ ನಿರ್ವಹಣೆ ಮತ್ತು ಸಿಎ ಜಮೀನುಗಳಲ್ಲಿ ಬೆಳೆಸಿದ ನೆಡುತೋಪುಗಳ ಪ್ರಗತಿ ಪರಿಶೀಲನೆಗಾಗಿ ಭಾರತ ಸರ್ಕಾರವು ಗೌರವಾನ್ವಿತ ಸುಪ್ರೀಂಕೋರ್ಟ್ ಆದೇಶದ ಅನುಸಾರವಾಗಿ ಇ-ಗ್ರೀನ್ವಾಚ್ ಪೋರ್ಟಲ್ ಆರಂಭಿಸಿದೆ. ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಫಾರೆಸ್ಟ್ ಸರ್ವೇ ಆಫ್ ಇಂಡಿಯಾ ಜಂಟಿಯಾಗಿ ಮೇಲ್ವಿಚಾರಣೆ ನಡೆಸುವ ಈ ಪೋರ್ಟಲ್, ಎಫ್ಸಿಯಡಿ ಪರಿವರ್ತಿಸಲಾದ (ಡಿಎ ಜಮೀನುಗಳು) ಜಮೀನುಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿ, ನಷ್ಟಭರ್ತಿ ಅರಣ್ಯೀಕರಣಕ್ಕೆ ಸ್ವೀಕರಿಸಿದ ಜಮೀನು (ಸಿಎ ಜಮೀನುಗಳು), ನೆಡುತೋಪುಗಳು ಮತ್ತು ಕೆಲಸಗಳು, ಅವುಗಳ ಅಂದಾಜು ಮತ್ತು ಖರ್ಚುಗಳ ಮಾಹಿತಿ ಪಡೆಯಲು ಅನುಕೂಲ ಕಲ್ಪಿಸುತ್ತದೆ. ಈ ಪೋರ್ಟಲ್ ಮೂಲಕ ಉಪಗ್ರಹ ಚಿತ್ರಗಳನ್ನು ಬಳಸಿ ಡಿಎ ಜಮೀನುಗಳು, ಸಿಎ ಜಮೀನುಗಳು ಮತ್ತು ಕೆಲಸಗಳ ನಿಗಾ ಕೂಡ ವಹಿಸಲಾಗುತ್ತದೆ


ಸಿಸ್ಟಮ್ ಅನ್ನು ಪ್ರವೇಶಿಸಲು ಮತ್ತು ಲಾಗಿನ್ ಮಾಡಲು, ಇನ್ನಷ್ಟು ತಿಳಿಯಿರಿ >>