ಇಲಾಖೆಯ ವಿವಿಧ ಕಚೇರಿಗಳಲ್ಲಿ ಸ್ವೀಕರಿಸಿದ ಆರ್ಟಿಐ ಅರ್ಜಿಗಳನ್ನು ಪ್ರಕ್ರಿಯೆ ಮಾಡಲು ಆನ್ಲೈನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ರಾಜ್ಯಾದ್ಯಂತ ಅಳವಡಿಸಿಕೊಳ್ಳಲಾಗಿದೆ. ಸ್ವೀಕರಿಸಿದ/ ಫಾರ್ವರ್ಡ್ ಮಾಡಿದ ಎಲ್ಲ ಆರ್ಟಿಐ ಅರ್ಜಿಗಳು, ಅವುಗಳ ಸ್ಥಿತಿಗತಿ, ಒದಗಿಸಿದ ಪ್ರತಿಕ್ರಿಯೆ/ ಮಾಹಿತಿಗಳು ಮತ್ತು ಅಂಥ ಮಾಹಿತಿ ಒದಗಿಸುವಲ್ಲಿ ಯಾವುದಾದರೂ ವಿಳಂಬ ಆಗಿದ್ದಲ್ಲಿ ಅದನ್ನು ಟ್ರ್ಯಾಕ್ ಮಾಡಲು ಈ ವ್ಯವಸ್ಥೆ ಅನುಕೂಲ ಕಲ್ಪಿಸುತ್ತದೆ. ಬಾಕಿ ಇರುವ ಆರ್ಟಿಐ ಅರ್ಜಿಗಳ ಬಗ್ಗೆ ಅಧಿಕಾರಿಗಳಿಗೆ ಎಸ್ಎಂಎಸ್ ಆಧರಿತ ಜ್ಞಾಪನೆಗಳನ್ನು ಕಳುಹಿಸಲು ಈ ವ್ಯವಸ್ಥೆ ಎಸ್ಎಂಎಸ್ ಸೇವೆಯೊಂದಿಗೆ ಏಕೀಕೃತಗೊಂಡಿದೆ. ಪ್ರಮುಖ ಸುತ್ತೋಲೆ/ ಆದೇಶಗಳು/ ಮಾಹಿತಿಯನ್ನು ಸಿಸ್ಟಮ್ ಮೂಲಕ ಸಂವಹನ ಮಾಡಲು ಈ ವ್ಯವಸ್ಥೆ ಅಳವಡಿಸಲಾದ ವೈಶಿಷ್ಟ್ಯವನ್ನೂ ಒಳಗೊಂಡಿದೆ.


ಸಿಸ್ಟಮ್ ಅನ್ನು ಪ್ರವೇಶಿಸಲು ಮತ್ತು ಲಾಗಿನ್ ಮಾಡಲು, ಇನ್ನಷ್ಟು ತಿಳಿಯಿರಿ >>