ವಿಭಾಗದ ಮುಖ್ಯಸ್ಥರು

ಶ್ರೀ. ಎಂ.ವಿ.ಅಮರನಾಥ್ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಫಾರೆಸ್ಟ್ ಕಾಂಪೌಂಡ್, ಓಲ್ಡ್ ಪಿ.ಬಿ.ರೋಡ್, ಬೆಳಗವಿ -591616
08312467071
dcfbgm@gmail.com

ವಿಭಾಗದ ಬಗ್ಗೆ

ಬೆಳಗಾವಿ ಅರಣ್ಯ ವಿಭಾಗ ಕರ್ನಾಟಕ ರಾಜ್ಯದ ವಾಯುವ್ಯ ಭಾಗದಲ್ಲಿದ್ದು, ಗೋವಾ ಮತ್ತು ಮಹಾರಾಷ್ಟ್ರ ಜೊತೆ ಗಡಿ ಹಂಚಿಕೊಂಡಿದೆ. ಈ ವಿಭಾಗ ಬೆಳಗಾವಿ ಜಿಲ್ಲೆಯ ಒಂದು ಭಾಗವನ್ನು ಆವರಿಸಿಕೊಂಡಿದೆ, ಉಳಿದ ಭಾಗ ಘಟಪ್ರಭಾ (ಗೋಕಾಕ) ಅರಣ್ಯ ವಿಭಾಗಕ್ಕೆ ಸೇರುತ್ತದೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 1,23,047 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ವಿಸ್ತಾರದ (4,515.52 ಚ.ಕಿ.ಮೀ.) ಸುಮಾರು 27.25 ರಷ್ಟಿದೆ. ಈ ವಿಭಾಗ ನಾಗರಗಲಿ, ಖಾನಾಪುರ ಮತ್ತು ಬೆಳಗಾವಿ ಈ ಮೂರು ಉಪ ವಿಭಾಗಗಳನ್ನು ಹೊಂದಿದೆ, ಮತ್ತು ಬೆಳಗಾವಿ, ಗೋಲಿಹಳ್ಳಿ, ಗುಂಜನಾಳ, ಕಾಕತಿ, ಕಣಕುಂಬಿ, ಖಾನಾಪುರ, ಲೋಂಡಾ, ನಾಗರಗಲಿ, ನೇಸರ್ಗಿ ಮತ್ತು ಭೀಮಘಡ ವನ್ಯಜೀವಿ ಈ ಹತ್ತು ವಲಯಗಳನ್ನು ಒಳಗೊಂಡಿದೆ. ವಿಭಾಗದಲ್ಲಿ ಇರುವ ಒಂದು ವನ್ಯಜೀವಿ ಅಭಯಾರಣ್ಯ ಭೀಮಘಡ ವನ್ಯಜೀವಿ ಅಭಯಾರಣ್ಯವಾಗಿದೆ (19,042 ಹೆಕ್ಟೇರ್). ಇದು ಖಾನಾಪುರ ತಾಲೂಕಿನಲ್ಲಿದೆ, ಮತ್ತು ಹೆಮ್ಮಡಗ ಮತ್ತು ಜಂಬೋಟಿಯ ನಿತ್ಯಹಸಿರು ಮತ್ತು ಅರೆ ನಿತ್ಯಹಸಿರು ಕಾಡುಗಳನ್ನು ಒಳಗೊಂಡಿದೆ. ಈ ಅಭಯಾರಣ್ಯದಲ್ಲಿ ಕಂಡುಬರುವ ವನ್ಯಜೀವಿಗಳಲ್ಲಿ ಹುಲಿ, ಚಿರತೆ, ಕಾಡುನಾಯಿ, ಕಾಡುಕೋಣ, ಸಾಂಬಾರ, ಚುಕ್ಕೆ ಜಿಂಕೆ, ಕಾಳ ಸರ್ಪ ಮುಂತಾದವು ಸೇರಿವೆ. ಭೀಮಘಡ ಅರಣ್ಯ ರಾಗ್‌ಟನ್ಸ್‌ ಫ್ರೀ ಟೇಲ್ಡ್ ಬಾವಲಿಗಳ ಸಂತಾನೋತ್ಪತ್ತಿ ಸ್ಥಳವಾದ ಬಾರಾಪೇಡ್‌ ಗುಹೆಗಳಿಗೆ ಹೆಸರುವಾಸಿಯಾಗಿವೆ.

ಬೆಳಗಾವಿ ವಿಭಾಗದ ನಕ್ಷೆ

--%>

ಉಪ ವಿಭಾಗಗಳು