A- A A+
(ಇಲ್ಲಿ ಕ್ಲಿಕ್‌ ಮಾಡಿರಿ) ಮಾನವ - ಆನೆ ಸಂಘರ್ಷ ನಿರ್ವಹಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ- 2024 ಅಪೆಕ್ಸ್‌ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD dated: 06/07-06-2024 ಗೆ ಪೂರಕ ಅಧಿಸೂಚನೆ [II] ದಿನಾಂಕ: 08-07-2024 ಅಪೆಕ್ಸ್‌ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD dated: 06/07-06-2024 & ಪೂರಕ ಅಧಿಸೂಚನೆ ದಿನಾಂಕ: 02-07-2024 ರನ್ವಯ ಜರಗುವ ಸಾಮಾನ್ಯ ವರ್ಗಾವಣೆಯ ತಾತ್ಕಾಲಿಕ ವೇಳಾಪಟ್ಟಿ ಮತ್ತು ಇತರೆ ಪ್ರಮುಖ ಸೂಚನೆಗಳು.- ಪರಿಷ್ಕೃತ ಪಟ್ಟಿ- ದಿನಾಂಕ: 05-07-2024 ರಂತೆ 2024-25 ನೇ ಸಾಲಿನ ಸಾಮಾನ್ಯ ವರ್ಗಾವಣೆ/ಸ್ಥಳ ನಿಯುಕ್ತಿಗಾಗಿ ಜರುಗಿದ ಸಮಾಲೋಚನೆಯಲ್ಲಿ ಜಾರಿ ಮಾಡಲಾದ ಆದೇಶ/ಹಿಂಬರಹಗಳನ್ನು ವೀಕs್ಷಿಸಲು ಇಲ್ಲಿ ಕ್ಲಿಕ್‌ ಮಾಡಿರಿ
(ಇಲ್ಲಿ ಕ್ಲಿಕ್‌ ಮಾಡಿರಿ) ಮಾನವ - ಆನೆ ಸಂಘರ್ಷ ನಿರ್ವಹಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ- 2024

ಇತಿಹಾಸ

ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್‌ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್‌ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್‌ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು.

ಮೈಸೂರು ರಾಜ್ಯ 1864 - 1901

ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್‌ ಹಂಟರ್‌ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್‌ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್‌ ಸಾಮರ್ಸನ್‌, ಲೆ. ಇ.ಡಬ್ಲ್ಯೂ.ಸಿ.ಎಚ್‌. ಮಿಲ್ಲರ್‌, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್‌ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್‌ ಹಂಟರ್‌ ನಂತರ ಲೆ. ವ್ಯಾನ್‌ ಸಾಮರ್ಸನ್‌ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್‌. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್‌ಪೆಕ್ಟರ್ ಜನರಲ್‌ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್‌ಗಳು, ಫಾರೆಸ್ಟರ್‌ಗಳು ಮತ್ತು ವಾಚರ್‌ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್‌ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್‌ಬೆಲ್‌-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್‌ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.

1901 - 1935

1901ರಲ್ಲಿ ಶ್ರೀ ಪೈಗೊಟ್ ಅವರ ನಿವೃತ್ತಿಯ ಬಳಿಕ ಶ್ರೀ ಮುತ್ತಣ್ಣ ಇಲಾಖಾ ಮುಖ್ಯಸ್ಥರಾದರು ಮತ್ತು ಸುದೀರ್ಘ 12 ವರ್ಷಗಳ ಕಾಲ ಇಲಾಖೆಯನ್ನು ಮುನ್ನಡೆಸಿದರು. ಶ್ರೀ ಮುತ್ತಣ್ಣ 12 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯ ಚುಕ್ಕಾಣಿ ಹಿಡಿದಿದ್ದರು. ಶ್ರೀ ಮುತ್ತಣ್ಣ ಅವರ ಅವಧಿಯಲ್ಲಿ ಅರಣ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಸಂಘಟಿತಗೊಂಡಿತು. ಹೆಚ್ಚು ಹೆಚ್ಚು ಪ್ರದೇಶಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಲಾಯಿತು. ಸಮೃದ್ಧ ಅರಣ್ಯ ಪ್ರದೇಶಗಳಿಗೆ ವೈಜ್ಞಾನಿಕ ಅರಣ್ಯ ನಿರ್ವಹಣೆ ಮಾದರಿಯಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. 1913ರಲ್ಲಿ ಅವರ ನಿವೃತ್ತಿಯ ನಂತರ, ಶ್ರೀ ಎಂ.ಜಿ. ರಾಮರಾವ್‌ 1914ರಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಯಿತು, 1914-15ರಲ್ಲಿ 1,313 ಟನ್‌ಗಳಷ್ಟು ರಫ್ತಾಗುತ್ತಿದ್ದ ಶ್ರೀಗಂಧ 70 ಟನ್‌ಗಳಿಗಿಂತ ಕಡಿಮೆ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯ ಮೇಲೆ ಬಹುದೊಡ್ಡ ಆಘಾತವನ್ನು ನೀಡಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ಸು ಪಡೆಯಿತು. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921ರಲ್ಲಿ ರಾಮರಾವ್‌ ಸಂರಕ್ಷಣಾಧಿಕಾರಿಯಾಗಿದ್ದರು ಮತ್ತು ನಂತರ ಮುಖ್ಯ ಸಂರಕ್ಷಣಾಧಿಕಾರಿಯಾದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಸಂರಕ್ಷಣಾಧಿಕಾರಿ ಎಂಬ ದಾಖಲೆ ಹೊಂದಿದ್ದು, 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು.

1935 - 1956

1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ಕೆಲವು ವಾರಗಳ ಮೊದಲು ಮದ್ರಾಸ್‌ ಪ್ರೆಸಿಡೆನ್ಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಶ್ರೀ ಸಿ. ಅಬ್ದುಲ್‌ ಜಬ್ಬಾರ್ ಅವರು, ಶ್ರೀ ಮಾಚಯ್ಯನವರ ಆನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀ ಜಬ್ಬಾರ್ ಅವರ ಕಚೇರಿಯ ಅಧಿಕಾರಾವಧಿಯು ಪ್ರಾಯೋಗಿಕವಾಗಿ ಯುದ್ದದ ಜೊತೆ ಜೊತೆಯಲ್ಲೇ ಆಗಿತ್ತು, ಅವರು 1945 ರಲ್ಲಿ ನಿವೃತ್ತಿ ಹೊಂದಿದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪೂರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಮೊದಲಬಾರಿಗೆ ಒಬ್ಬ ಮರಬೇಸಾಯಗಾರನನ್ನು ನೇಮಿಸಿಕೊಳ್ಳಲಾಯಿತು. ರಾಜ್ಯ ಭೂಸಾರ ಸಂರಕ್ಷಣಾ ಮಂಡಳಿ ಸ್ಥಾಪನೆ ಮಾಡಲಾಯಿತು ಮತ್ತು ಶ್ರೀಗಂಧ ಸ್ಪೈಕ್‌ ಸಮಿತಿ ಮರುಸಂಘಟಿಸಲಾಯಿತು. ಹಾಗೂ, 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಿತು. ಹಳೆ ಮೈಸೂರು ಆರಂಭದಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳೆಂದರೆ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. 1939ರಲ್ಲಿ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ರಚನೆ ಮಾಡಲಾಯಿತು.

ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್‌ ಪ್ರೆಸಿಡೆನ್ಸಿ, ಹೈದರಾಬಾದ್‌ ರಾಜ್ಯ, ಕೊಡಗು ರಾಜ್ಯ

ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ವಿಜಾಪುರ ಜಿಲ್ಲೆಗಳನ್ನು ಒಳಗೊಂಡಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, 1847ರಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿ, ಡಾ. ಅಲೆಕ್ಸಾಂಡರ್‌ ಗಿಬ್ಸನ್‌ರನ್ನು ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು, ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಿದ್ದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ, 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪನೆ ಮಾಡಿ, ವೈದ್ಯರಾಗಿದ್ದ ಡಾ. ಹ್ಯೂ ಕ್ಲೆಗಾರ್ನ್‌ ಅವರನ್ನು ಅದರ ಮೊದಲ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಯಿತು. ಕೊಡಗು ರಾಜ್ಯದಲ್ಲಿ 1865ರಲ್ಲಿ ಅರಣ್ಯ ಸಂರಕ್ಷಣಾ ಇಲಾಖೆಯನ್ನು ಸ್ಥಾಪನೆ ಮಾಡಲಾಯಿತು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿಗಳು ಅದರ ಮುಖ್ಯಸ್ಥರಾಗಿದ್ದರು. ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದ್ದ ಹೈದರಾಬಾದ್‌ ರಾಜಾಡಳಿತದಲ್ಲಿ, 1867ರಲ್ಲಿ ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು. ಅದಾಗ್ಯೂ, 1887ರಲ್ಲಿ ತರಬೇತಿ ಪಡೆದ ಯುರೋಪಿಯನ್‌ ಇಂಪೀರಿಯಲ್‌ ಅರಣ್ಯ ಸೇವೆ ಅಧಿಕಾರಿ ಶ್ರೀ ಬ್ಯಾಲಂಟೈನ್‌ ಅವರ ನೇಮಕವಾಗುವವರೆಗೂ ವೃತ್ತಿ ಅನುಭವ ಇಲ್ಲದವರು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.