ವಿಭಾಗದ ಮುಖ್ಯಸ್ಥರು

ಶ್ರೀ. ಎಂ.ಸಿವರಾಮ್ ಬಾಬು ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿರವರ ಕಚೇರಿ. ಮಡಿಕೇರಿ ವನ್ಯಜೀವಿ ವಿಭಾಗ, ಅರಣ್ಯ ಭವನ, ಮೈಸೂರು ರಸ್ತೆ, ಮಡಿಕೇರಿ-571201
08272298038
wlmadikeri@gmail.com

ವಿಭಾಗದ ಬಗ್ಗೆ

ಮಡಿಕೇರಿ ವನ್ಯಜೀವಿ ವಿಭಾಗ ಮೂರು ವನ್ಯಜೀವಿ ಅಭಯಾರಣ್ಯಗಳನ್ನು ಒಳಗೊಂಡಿದೆ, ಅವು ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ (181.29 ಚ.ಕಿ.ಮೀ.), ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ (102.92 ಚ.ಕಿ.ಮೀ.) ಮತ್ತು ತಲಕಾವೇರಿ ವನ್ಯಜೀವಿ ಅಭಯಾರಣ್ಯ (102.59 ಚ.ಕಿ.ಮೀ.). ಮಡಿಕೇರಿ ವನ್ಯಜೀವಿ ವಿಭಾಗ ಒಂದು ಉಪ ವಿಭಾಗವನ್ನು ಹೊಂದಿದೆ, ಅದು ಮಡಿಕೇರಿ ವನ್ಯಜೀವಿ ಉಪವಿಭಾಗ, ಹಾಗೂ ಮಕುಟ್ಟಾ, ವಿರಾಜಪೇಟೆ, ಶ್ರೀಮಂಗಲ ಮತ್ತು ತಲಕಾವೇರಿ ವನ್ಯಜೀವಿ ಈ ನಾಲ್ಕು ವಲಯಗಳನ್ನು ಹೊಂದಿದೆ. ಬ್ರಹ್ಮಗಿರಿ ಅಭಯಾರಣ್ಯ ವಿರಾಜಪೇಟೆ ತಾಲೂಕಿನಲ್ಲಿದೆ. ಇದು ಕೇರಳ ರಾಜ್ಯದ ವಯನಾಡು ಜಿಲ್ಲೆಯ ಅರಣ್ಯಗಳ ಜೊತೆ ಗಡಿ ಹಂಚಿಕೊಂಡಿದೆ. ಇದು ಬ್ರಹ್ಮಗಿರಿ ಮತ್ತು ಉರ್ತಿ ಮೀಸಲು ಅರಣ್ಯಗಳನ್ನು ವ್ಯಾಪಿಸಿದೆ. ಈ ಅಭಯಾರಣ್ಯಕ್ಕೆ ಅತಿ ಎತ್ತರದ ಶಿಖರ ಬ್ರಹ್ಮಗಿರಿಯ (1,607 ಮೀ.) ಹೆಸರಿಡಲಾಗಿದೆ. ಪುಷ್ಪಗಿರಿ ಅಭಯಾರಣ್ಯ ಸೋಮವಾರಪೇಟೆ ತಾಲೂಕಿನಲ್ಲಿದೆ. ಈ ಅಭಯಾರಣ್ಯ ಕಡಮಕ್ಕಲ್‌ ಮೀಸಲು ಅರಣ್ಯದ ಒಂದಿಷ್ಟು ಭಾಗವನ್ನು ವ್ಯಾಪಿಸಿದೆ. ಈ ಅಭಯಾರಣ್ಯದ ಅತಿ ಎತ್ತರದ ಸ್ಥಳ ಪುಷ್ಪಗಿರಿ (ಕುಮಾರ ಪರ್ವತ) (1,172 ಮೀ.) ಈ ಅಭಯಾರಣ್ಯ ಹಾಸನ ವಿಭಾಗದ ಬಿಸಿಲೆ ಘಾಟ್‌ ಅರಣ್ಯ ಮತ್ತು ಮಂಗಳೂರು ವಿಭಾಗದ ಕುಕ್ಕೆ ಸುಬ್ರಹ್ಮಣ್ಯ ಅರಣ್ಯದೊಂದಿಗೆ ಗಡಿ ಹಂಚಿಕೊಂಡಿದೆ. ತಲಕಾವೇರಿ ಅಭಯಾರಣ್ಯ ಮಡಿಕೇರಿ ತಾಲೂಕಿನಲ್ಲಿದೆ. ಇದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಅರಣ್ಯಗಳ ಜೊತೆ ಗಡಿ ಹಂಚಿಕೊಂಡಿದೆ. ಈ ಅಭಯಾರಣ್ಯ ಪದಿನಲ್ಕನಾಡ್ ಮೀಸಲು ಅರಣ್ಯದ ಒಂದಿಷ್ಟು ಭಾಗವನ್ನು ವ್ಯಾಪಿಸಿದೆ. ಈ ಅಭಯಾರಣ್ಯಕ್ಕೆ ಕಾವೇರಿ ನದಿಯ ಉಗಮಸ್ಥಳ ತಲಕಾವೇರಿಯ ಹೆಸರಿಡಲಾಗಿದ್ದು, ಇದು ಅಭಯಾರಣ್ಯದ ಪೂರ್ವದ ಅಂಚಿನಲ್ಲಿದೆ. ಮಡಿಕೇರಿ ವನ್ಯಜೀವಿ ವಿಭಾಗದ ಎಲ್ಲ ಮೂರು ವನ್ಯಜೀವಿ ಅಭಯಾರಣ್ಯಗಳು ನಿತ್ಯ ಹಸಿರು ಅಥವಾ ಅರೆ ನಿತ್ಯಹಸಿರು ಕಾಡುಗಳಾಗಿವೆ. ಅಭಯಾರಣ್ಯದಲ್ಲಿ ಕಂಡುಬರುವ ಪ್ರಮುಖ ಪ್ರಾಣಿಗಳಲ್ಲಿ ಹುಲಿ, ಚಿರತೆ, ಕಾಡು ನಾಯಿ, ನೀಲಗಿರಿ ಮಾರ್ಟೆನ್, ಆನೆ, ಕಾಡೆಮ್ಮೆ, ಜೇನು ಕರಡಿ, ಸಿಂಹ ಬಾಲದ ಮುಂಗುಸಿ, ಲಂಗೂರ್‌, ಸಾಂಬಾರ್, ಚುಕ್ಕೆ ಚರ್ಮದ ಜಿಂಕೆ, ಬೊಗಳುವ ಜಿಂಕೆ, ಮಲಬಾರ್‌ ಬೃಹತ್ ಅಳಿಲು, ಬೃಹತ್ ಹಾರುವ ಅಳಿಲು, ಕಾಡು ಹಂದಿ, ವಿವಿಧ ಜಾತಿಯ ಸರೀಸೃಪಗಳು ಮತ್ತು ಹಕ್ಕಿಗಳು ಸೇರಿವೆ.

ಮಡಿಕೇರಿ ವನ್ಯ ಜೀವಿ ವಿಭಾಗದ ನಕ್ಷೆ