ದೈವೀವನ/ ದೇವರಕಾಡು ಸ್ಕೀಮ್ ಅನ್ನು ಕರ್ನಾಟಕ ಅರಣ್ಯ ಇಲಾಖೆ 2011-12ರಲ್ಲಿ ಚಾಲನೆಗೊಳಿಸಿತು. ರಾಜ್ಯ ವಲಯದ ಈ ಸ್ಕೀಮ್ ದೇಗುಲಗಳ ಸಮೀಪದ ಸ್ಥಳೀಯ ಜೀವವೈವಿಧ್ಯವನ್ನು ಸಂರಕ್ಷಿಸುವ ಉದ್ದೇಶಕ್ಕಾಗಿ ಅರಣ್ಯ ಬೆಳೆಸುವುದನ್ನು ಪ್ರೋತ್ಸಾಹಿಸುತ್ತದೆ. ಇದು ಹೂಬಿಡುವ ಮತ್ತು ಹಣ್ಣು ನೀಡುವ ಸ್ಥಳೀಯ ಪ್ರಭೇದಗಳ ಜೊತೆಗೆ ಧಾರ್ಮಿಕ ಮಹತ್ವವುಳ್ಳ ಆಲ, ಅರಳಿ, ಅತ್ತಿ, ಬೇವು, ಬನ್ನಿ, ತಾರೆ, ಬಿಲ್ವಪತ್ರೆ, ಗೋನಿ, ನೇರಳೆ, ನಾಗಸಂಪಿಗೆ, ಕಗ್ಗಲಿ, ಎಕ್ಕೆ ಮುಂತಾದ ಮರಗಳನ್ನು ನೆಡುವುದರೊಂದಿಗೆ ರಾಶಿವನ, ನಕ್ಷತ್ರವನ, ನವಗ್ರಹವನ, ಪಂಚಾಯತ ವನ, ಅಷ್ಟದಿಕ್ಪಾಲಕವನ ಮುಂತಾದವುಗಳ ರಚನೆಯನ್ನು ಒಳಗೊಂಡಿದೆ. ದೇಗುಲಕ್ಕೆ ಬರುವ ಸಂದರ್ಶಕರು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ತಿಳಿದುಕೊಳ್ಳುತ್ತಾರೆ. ದೈವೀವನ ಸ್ಕೀಮ್‌ನಡಿ, 100 ಹೆಕ್ಟೇರ್ ಪ್ರದೇಶದಲ್ಲಿ 3 ವರ್ಷಗಳ ಅವಧಿಯವರೆಗೆ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತದೆ ಮತ್ತು ಆ ನಂತರ ಮತ್ತೆ 2 ವರ್ಷಗಳ ಕಾಲ ಸಸಿಗಳ ನಿರ್ವಹಣೆ ಮಾಡಲಾಗುತ್ತದೆ. ಚೈನ್-ಲಿಂಕ್ ಮೆಷ್ ಬೇಲಿ ಮೂಲಕ ರಕ್ಷಣೆ ನೀಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಸುಮಾರು 300 ಎಕರೆ ವಿಸ್ತಾರರದ ದೈವೀವನ ಬೆಳೆಸಲು ಪ್ರಸ್ತಾವನೆ ಮಾಡಲಾಗಿದೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿ, ವಿಶೇಷವಾಗಿ ಮಕ್ಕಳಲ್ಲಿ, ಜಾಗೃತಿ ಮತ್ತು ಆಸಕ್ತಿ ಮೂಡಿಸಲು, ನಡೆದಾಡುವ ಹಾದಿ, ಪರಿಸರ ಹಾದಿ, ಮತ್ತು ಜೀವವರ್ಗೀಕರಣದ ಲೇಬಲ್ ಹಚ್ಚುವುದು ಮುಂತಾದ ನಾಗರಿಕ ಸೌಕರ್ಯಗಳನ್ನು ದೈವೀವನದೊಳಗಡೆ ಒದಗಿಸಲಾಗುತ್ತದೆ.