ವಿಭಾಗದ ಮುಖ್ಯಸ್ಥರು

ಶ್ರೀಮತಿ. ದೀಪಿಕಾ ಬಾಜ್ಪೈ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ, ಗದಗ ವಿಭಾಗ, ಗದಗ ಬಿಂಕದಕಟ್ಟಿ - 582103
9449863733
dyconservatorgadag@gmail.com

ವಿಭಾಗದ ಬಗ್ಗೆ

ಗದಗ ಅರಣ್ಯ ವಿಭಾಗ ಕರ್ನಾಟಕ ರಾಜ್ಯದ ಮಧ್ಯ ವಲಯದಲ್ಲಿದೆ. ಗದಗ ಅರಣ್ಯ ವಿಭಾಗದ ಗಡಿಗಳು ಗದಗ ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದ ದಾಖಲಿಸಿಕೊಂಡಿರುವ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 33,337 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ವಿಸ್ತಾರದ (4,656 ಚಕಿಮೀ). ಸುಮಾರು 7.16 ರಷ್ಟಿದೆ. ಈ ವಿಭಾಗ ಗದಗ ಉಪ ವಿಭಾಗ ಎನ್ನುವ ಒಂದು ಉಪ ವಿಭಾಗ ಹೊಂದಿದೆ ಮತ್ತು ಗದಗ, ಮುಂಡರಗಿ ಮತ್ತು ಶಿರಹಟ್ಟಿ ಈ ಮೂರು ವಲಯಗಳನ್ನು ಹೊಂದಿದೆ. ವಿಭಾಗದಲ್ಲಿರುವ ಬಹುತೇಕ ಅರಣ್ಯ ಪ್ರದೇಶಗಳು ಮುಳ್ಳು ಕಂಟಿ ಪ್ರಬೇಧಗಳೊಂದಿಗೆ ಬಹಳ ಅವನತಿ ಹೊಂದಿವೆ. ಒಂದಿಷ್ಟು ಸಸ್ಯಗಳಿರುವ ಕಾಡುಗಳು ಕಪ್ಪತಗುಡ್ಡ, ಶಿರಹಟ್ಟಿ ಮತ್ತು ಮುಂಡರಗಿಯ ಶಿಖರ ಸಾಲುಗಳಿಗೆ ಸೀಮಿತವಾಗಿವೆ. ಕಪ್ಪತ ಗುಡ್ಡ ಪ್ರದೇಶದಲ್ಲಿ ಹಿಂದೊಮ್ಮೆ ಬಹಳ ಉತ್ತಮವಾದ ಕಾಡುಗಳಿದ್ದವು. ಇದು ವಿವಿಧ ವೈದ್ಯಕೀಯ ಗಿಡಮೂಲಿಕೆಗಳಿಗೂ ಪ್ರಸಿದ್ಧವಾಗಿದೆ. 17,872 ಹೆಕ್ಟೇರ್‌ ಪ್ರದೇಶದ ವ್ಯಾಪ್ತಿಯಿರುವ ಕಪ್ಪತಗುಡ್ಡ ಅರಣ್ಯವನ್ನು 2019ರಲ್ಲಿ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲಾಗಿದೆ.

ಗದಗ ವಿಭಾಗದ ನಕ್ಷೆ

--%>

ಉಪ ವಿಭಾಗಗಳು