ವಿಭಾಗದ ಮುಖ್ಯಸ್ಥರು

ಶ್ರೀ. ಎ.ಟಿ.ಪೂವಯ್ಯ

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ ಮಡಿಕೇರಿ, 1 ನೇ ಮಹಡಿ, ಆರಣ್ಯ ಭವನ, ಮೈಸೂರು ರಸ್ತೆ, ಮಡಿಕೇರಿ
08272228305
dcfmadikerit@gmail.com

ವಿಭಾಗದ ಬಗ್ಗೆ

ಮಡಿಕೇರಿ ಅರಣ್ಯ ವಿಭಾಗ ಕೊಡಗು ವೃತ್ತದ ಉತ್ತರ ಭಾಗದಲ್ಲಿದೆ. ಮಡಿಕೇರಿ ವಿಭಾಗದ ಅರಣ್ಯ ಪ್ರದೇಶದ ಒಟ್ಟು ವಿಸ್ತಾರ 36,914.21 ಹೆಕ್ಟೇರ್‌ಗಳು. ಅದಾಗ್ಯೂ, ಮೀಸಲು ಅರಣ್ಯ ಪ್ರದೇಶಗಳ ಜೊತೆಗೆ, ಮಡಿಕೇರಿ ವಿಭಾಗದ ಕಾರ್ಯಯೋಜನೆ ವ್ಯಾಪ್ತಿಯಲ್ಲಿ ಮರಗಳಿಂದ ಆವೃತವಾಗಿರುವ ಇತರ ಪ್ರದೇಶಗಳು ಇವೆ, ಇವು ಸಂರಕ್ಷಿತ ಅರಣ್ಯಗಳು, ದೇವರ ಕಾಡುಗಳು, ಪೈಸಾರಿಗಳು, ಸೆಕ್ಷನ್‌-4ರ ಅಡಿ ಅಧಿಸೂಚಿತ ಪ್ರದೇಶಗಳು, ಋಣಮುಕ್ತವಾಗದ ಜಮೀನುಗಳು ಮತ್ತು ಬಾಣೆ ಭೂಮಿಗಳು ಇತ್ಯಾದಿಗಳಾಗಿವೆ. ವಿಭಾಗದ ಮೀಸಲು ಅರಣ್ಯಗಳು ಸೇರಿದಂತೆ ಇಂಥ ಭೂಮಿಯ ಒಟ್ಟು ವಿಸ್ತಾರ 1,15,673.72 ಹೆಕ್ಟೇರ್‌ಗಳಾಗಿವೆ. ಮಡಿಕೇರಿ ವಿಭಾಗ ಎರಡು ಉಪ ವಿಭಾಗಗಳನ್ನು ಹೊಂದಿದೆ, ಅವು ಮಡಿಕೇರಿ ಮತ್ತು ಸೋಮವಾರಪೇಟೆ ಉಪ ವಿಭಾಗಗಳು, ಮತ್ತು ಭಾಗಮಂಡಲ, ಮಡಿಕೇರಿ, ಸಂಪಾಜೆ, ಕುಶಾಲನಗರ, ಶನಿವಾರ ಸಂತೆ ಮತ್ತು ಸೋಮವಾರ ಪೇಟೆ ಈ ಆರು ವಲಯಗಳನ್ನು ಹೊಂದಿದೆ. ಈ ಪ್ರದೇಶಗಳು ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕು ವ್ಯಾಪ್ತಿಯೊಳಗೆ ಬರುತ್ತವೆ. ಮಡಿಕೇರಿ ವಿಭಾಗದಲ್ಲಿರುವ ಅರಣ್ಯಗಳು ಮುಖ್ಯವಾಗಿ ನಿತ್ಯ ಹಸಿರು, ಅರೆ ನಿತ್ಯಹಸಿರು ಮತ್ತು ತೇವಾಂಶ ಭರಿತ ಎಲೆಯುದುರುವ ಕಾಡುಗಳಾಗಿವೆ. ಭಾಗಮಂಡಲ ಮತ್ತು ಸಂಪಾಜೆ ವಲಯಗಳು ಪದಿನಲ್ಕನಾಡ್, ಪತ್ತಿಘಾಟ್ ಮತ್ತು ಕಡಮಕಲ್‌ ಮೀಸಲು ಅರಣ್ಯಗಳಲ್ಲಿ ಒಂದಿಷ್ಟು ಅದ್ಭುತವಾದ ನಿತ್ಯಹಸಿರು ಕಾಡುಗಳಿವೆ. ಮಡಿಕೇರಿ ವಲಯ ಒಂದಿಷ್ಟು ಉತ್ತಮ ನಿತ್ಯಹಸಿರು ಮತ್ತು ಅರೆ ನಿತ್ಯಹಸಿರು ಅರಣ್ಯಗಳನ್ನೂ ಹೊಂದಿದೆ. ಈ ವಿಭಾಗದಲ್ಲಿರುವ ಇತರ ವಲಯಗಳಾದ ಕುಶಾಲನಗರ, ಸೋಮವಾರಪೇಟೆ ಮತ್ತು ಶನಿವಾರಸಂತೆ ವಲಯಗಳಲ್ಲಿ ತೇವಾಂಶದ ಪ್ರದೇಶಗಳಲ್ಲಿ ಒಂದಿಷ್ಟು ಅರೆ ನಿತ್ಯಹಸಿರು ಅರಣ್ಯಗಳೊಂದಿಗೆ ತೇವಾಂಶ ಭರಿತ ಎಲೆಯುದುರುವ ಕಾಡುಗಳಿವೆ. ಈ ವಿಭಾಗದ ಬಹುದೊಡ್ಡ ಭಾಗದಲ್ಲಿ ಕಾಫಿ ಎಸ್ಟೇಟ್‌ಗಳಿದ್ದು, ಇವು ಹಸಿರು ಭೂಪರಿಸರದೊಂದಿಗೆ ಗಡಿ ಹೊಂದಿದ್ದು, ಇಡೀ ವಿಭಾಗವೇ ಅರಣ್ಯ ಎನ್ನುವಂಥ ಭಾವನೆಯನ್ನು ಮೂಡಿಸುತ್ತದೆ.

ಮಡಿಕೇರಿ ವಿಭಾಗದ ನಕ್ಷೆ

--%>

ಉಪ ವಿಭಾಗಗಳು