ವಿಭಾಗದ ಮುಖ್ಯಸ್ಥರು

ಶ್ರೀ. ದೇವರಾಜು ವಿ

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ರಾಮನಗರ ವಿಭಾಗ, ಯಂಗಯ್ಯನಕೆರೆ, ಬಿ.ಜಿ.ಎಸ್ ಕಾಲೇಜು ಎದುರು, ಬೆಂಗಳೂರು-ಮೈಸೂರು ರಸ್ತೆ, ರಾಮನಗರ-562159
08029710004
dcfrmngr@gmail.com

ವಿಭಾಗದ ಬಗ್ಗೆ

ರಾಮನಗರ ಅರಣ್ಯ ವಿಭಾಗ ಕರ್ನಾಟಕದ ಆಗ್ನೇಯ ವಲಯದಲ್ಲಿದೆ. ಈ ವಿಭಾಗದಲ್ಲಿ ಸುಮಾರು 414.54 ಚ.ಕಿ.ಮೀ. ಅರಣ್ಯ ಪ್ರದೇಶವಿದೆ. ರಾಮನಗರ ವಿಭಾಗವನ್ನು ರಾಮನಗರ ಮತ್ತು ಕನಕಪುರ ಉಪ ವಿಭಾಗಗಳಾಗಿ ವಿಂಗಡಿಸಲಾಗಿದೆ ಮತ್ತು ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಮತ್ತು ಸಾತನೂರು ಈ ಐದು ವಲಯಗಳನ್ನು ಹೊಂದಿದೆ. ರಾಮನಗರ ವಿಭಾಗ, ಶ್ರೀಗಂಧ, ಗುಲಗಂಜಿ, ಬನ್ನಿ, ಗೋಬಲಿ, ಕರಿಜಾಲಿ, ತಪಲ, ಕಗ್ಗಲಿ, ಕಾಚು, ಕಾಡುಸೀಗೆ, ಮುಲುವರ ಬಜಾಲಿ, ಸೀಗೆ, ನಾಯಿಗೊಬ್ಬಳಿ, ಆಡುಸೋಗೆ ಮುಂತಾದ ಪ್ರಭೇದಗಳೊಂದಿಗೆ ಒಣ ಎಲೆಯುದುರುವ ಮತ್ತು ಕುರುಚಲು ವಿಧದ ಕಾಡುಗಳನ್ನು ಹೊಂದಿದೆ. ಚಿರತೆ ಬೆಕ್ಕು, ಆನೆ, ಚುಕ್ಕೆ ಜಿಂಕೆ, ಸಾಂಬಾರ, ಬಾನೆಟ್‌ ಕೋತಿ, ಸ್ಲೆಂಡರ್ ಲಾರಿಸ್, ಕಾಡು ಬೆಕ್ಕು, ಮುಂಗುಸಿ, ಪಟ್ಟೆ ಕುತ್ತಿಗೆಯ ಮುಂಗುಸಿ, ಪಟ್ಟೆ ಚರ್ಮದ ಹೈನಾ, ನರಿ, ಕಾಡು ನಾಯಿ ಜೇನು ಕರಡಿ, ರಣಹದ್ದು ಮುಂತಾದ ಪ್ರಾಣಿಗಳು ಕಂಡುಬರುತ್ತವೆ. ಬಹಳ ಸಾಮಾನ್ಯವಾಗಿರುವ ನಾಗರಹಾವುಗಳ ಜೊತೆ, ಅನೇಕ ವಿಧದ ಸರೀಸೃಪಗಳೂ ಕಂಡುಬರುತ್ತವೆ. ಜಿಲ್ಲೆಯ ರಾಮನಗರ ವಲಯದಲ್ಲಿ ರಾಮದೇವರ ಬೆಟ್ಟ ರಣಹದ್ದು ಅಭಯಾರಣ್ಯವಿದೆ.

ರಾಮನಗರ ವಿಭಾಗದ ನಕ್ಷೆ

--%>

ಉಪ ವಿಭಾಗಗಳು