ವಿಭಾಗದ ಮುಖ್ಯಸ್ಥರು

ಶ್ರೀ. ಅಶೋಕ್‌ ಪಾಟೀಲ್ ರಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಗೋಕಾಕ್ವಿಭಾಗ, ಗೋಕಾಕ್ - 591307
08332225079
dfogokak@gmail.com

ವಿಭಾಗದ ಬಗ್ಗೆ

ಘಟಪ್ರಭಾ ಅರಣ್ಯ ವಿಭಾಗ ಕರ್ನಾಟಕ ರಾಜ್ಯದ ವಾಯುವ್ಯ ಭಾಗದಲ್ಲಿದ್ದು, ಮಹಾರಾಷ್ಟ್ರ ರಾಜ್ಯದ ಜೊತೆ ಗಡಿ ಹಂಚಿಕೊಂಡಿದೆ. ಈ ವಿಭಾಗ ಬೆಳಗಾವಿ ಜಿಲ್ಲೆಯ ಭಾಗವನ್ನು ಒಳಗೊಂಡಿದೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 50772.875 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ (8,900 ಚಕಿಮೀ) ಸುಮಾರು 18.73 ವಿಸ್ತಾರವಾಗಿದೆ. ಈ ವಿಭಾಗದಲ್ಲಿ ರಾಯಭಾಗ ಮತ್ತು ರಾಮದುರ್ಗ ಎನ್ನುವ ಎರಡು ಉಪ ವಿಭಾಗಗಳಿವೆ, ಮತ್ತು ಅಥಣಿ, ಚಿಕ್ಕೋಡಿ, ಗೋಕಾಕ, ರಾಯಭಾಗ, ರಾಮದುರ್ಗ ಮತ್ತು ಸೌಂದತ್ತಿ ಈ ಆರು ವಲಯಗಳಿವೆ. ವಿಭಾಗದಲ್ಲಿ ಇರುವ ಒಂದು ವನ್ಯಜೀವಿ ಅಭಯಾರಣ್ಯ ಘಟಪ್ರಭಾ ವನ್ಯಜೀವಿ ಪಕ್ಷಿಧಾಮವಾಗಿದೆ (29.78 ಹೆಕ್ಟೇರ್). ಇದು ಘಟಪ್ರಭಾ ನದಿಯಲ್ಲಿ ಇರುವ ಒಂದು ದ್ವೀಪವಾಗಿದೆ ಮತ್ತು ವಿವಿಧ ಜಲಚರಗಳನ್ನು ಹೊಂದಿದೆ.

ಗೋಕಾಕ್ ವಿಭಾಗದ ನಕ್ಷೆ

--%>

ಉಪ ವಿಭಾಗಗಳು