ಕರ್ನಾಟಕ ಅರಣ್ಯ ಇಲಾಖೆ ಈ ಕೆಳಕಂಡ ಸೇವೆಗಳನ್ನು ಸಾವಜನಿಕರಿಗೆ ಒದಗಿಸುತ್ತಿದ್ದು, ಇವುಗಳಿಗಾಗಿ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಹ ಸಲ್ಲಿಸಬಹುದು
ಅ) ಸಾರ್ವಜನಿಕರಿಗೆ ಸಸಿಗಳ ವಿತರಣೆ (ಸಕಾಲ)
ಬಿ) ವನ್ಯಪ್ರಾಣಿಗಳಿಂದ ಹಾನಿಗೊಳಗಾದ ಬೆಳೆಗಳಿಗೆ ದಯಾತ್ಮಕ ಧನ ಪಾವತಿ (ಸಕಾಲ)
ಸಿ) ವನ್ಯ ಪ್ರಾಣಿಗಳಿಂದ ಸಾವಿಗೀಡಾದ ಜಾನುವಾರುಗಳಿಗೆ ದಯಾತ್ಮಕ ಧನ ಪಾವತಿ (ಸಕಾಲ)
ಡಿ) ವನ್ಯಪ್ರಾಣಿಗಳಿಂದ ಮಾನವ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಸಂಭವಿಸಿದ್ದಲ್ಲಿ ದಯಾತ್ಮಕ ಧನ ಪಾವತಿ (ಸಕಾಲ)
ಇ) ಮರಗಳನ್ನು ಕಡಿಯಲು ಅನುಮತಿ (ಸಕಾಲ)
ಎಫ್) ಅರಣ್ಯ ಉತ್ಪನ್ನಗಳ ಸಾಗಾಟಕ್ಕೆ ಅನುಮತಿ (ಸಕಾಲ)