A- A A+
2022-23 ನೇ ಸಾಲಿನಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರರು, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ವೃಂದದ ಸಿಬ್ಬಂದಿಗಳ ಕಂಟಿಂಜೆಂಟ್‌ ಸ್ಥಳ ನಿಯುಕ್ತಿಗಾಗಿ ಅಧಿಸೂಚನೆ, ದಿನಾಂಕ: 21-03-2023. ಅರಣ್ಯ ಇಲಾಖೆಯಲ್ಲಿ 2022-23 ನೇ ಸಾಲಿನ ನೇರ ನೇಮಕಾತಿ ಮೂಲಕ ಆನೆ ಕಾವಾಡಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಕುರಿತು ಅಧಿಸೂಚನೆ, ವೇಳಾಪಟ್ಟಿ ಮತ್ತು ಅರ್ಜಿ ನಮೂನೆ. 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 18-03-2023 ಅರಣ್ಯ ವ್ಯವಸ್ಥಾಪನಾಧಿಕಾರಿ (Forest Settlement Officer) ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಗರಿಷ್ಠ ಎರಡು ವರ್ಷಗಳ ಅವಧಿಗೆ ನೇಮಕಾತಿಯ ಕುರಿತು

ವಿಭಾಗದ ಮುಖ್ಯಸ್ಥರು

ಶ್ರೀ. ಬ್ರಿಜೇಶ್ ಕುಮಾರ್ ದೀಕ್ಷಿತ್, ಭಾ.ಅ.ಸೇ

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅಭಿವೃದ್ಧಿ)
6ನೇ ಮಹಡಿ, "ಅರಣ್ಯ ಭವನ", ಮಲ್ಲೇಶ್ವರಂ, ಬೆಂಗಳೂರು - 560 0003
apccfdevelopment@gmail.com

ವಿಭಾಗದ ಬಗ್ಗೆ

ರಾಜ್ಯದಲ್ಲಿ ಅರಣ್ಯೀಕರಣ, ಮರು ಅರಣ್ಯೀಕರಣ ಮತ್ತು ಇತರ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ ಮಾಡುವುದು ಅಭಿವೃದ್ಧಿ ಘಟಕದ ಮುಖ್ಯ ಉದ್ದೇಶವಾಗಿದೆ. ಅರಣ್ಯ ಇಲಾಖೆಯ ನೇತೃತ್ವದಲ್ಲಿ ಇತರ ಇಲಾಖೆಗಳು ಅಥವಾ ಖಾಸಗಿ ಸಂಸ್ಥೆಗಳು/ ಸಂಘಟನೆಗಳ ಜೊತೆಗೆ ಇಲಾಖೆಯು ತೆಗೆದುಕೊಂಡ ಕಾರ್ಯಕ್ರಮಗಳು ಇದರಲ್ಲಿ ಒಳಗೊಂಡಿವೆ. ಈ ಘಟಕದ ಪ್ರಮುಖ ಕಾರ್ಯಗಳು ಹೀಗಿವೆ 1. ಕ್ಷೀಣಿತ ಅರಣ್ಯಗಳ ಅಭಿವೃದ್ಧಿ, ಸಿರಿಚಂದನವನ, ಸಾರ್ವಜನಿಕರಿಗೆ ವಿತರಣೆಗಾಗಿ ಸಸಿ ಬೆಳೆಸುವುದು, ವಿಶೇಷ ಘಟಕ ಯೋಜನ, ಗಿರಿಜನ ಉಪ ಯೋಜನೆ, ಮಗುವಿಗೊಂದು ಮರ ಶಾಲೆಗೊಂದು ವನ, ರಸ್ತೆ ಬದಿ ನೆಡುತೋಪು ಬೆಳೆಸುವುದು, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಇತ್ಯಾದಿ ರಾಜ್ಯ ವಲಯದ ಯೋಜನೆಗಳ ಮೇಲ್ವಿಚಾರಣೆ ಹಾಗು ಉಸ್ತುವಾರಿ 2. ಗಿಡ ನೆಡುವಿಕೆ ಮತ್ತು ಇತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಷ್ಠಾನಾಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಅನುದಾನ ಹಂಚಿಕೆ ಮಾಡುವುದು. 3. ನಿಗಧಿ ಪಡಿಸಿದ ಉದ್ದೇಶಗಳಿಗೆ ಸರ್ಕಾರಿ ಅನುದಾನ ಪರಿಣಾಮಕಾರಿ ಮತ್ತು ಸಮರ್ಥವಾಗಿ ಬಳಕೆಯಾಗುತ್ತಿದೆಯೇ ಎಂದು ಉಸ್ತುವಾರಿ ವಹಿಸುವುದು. 4. ವನಮಹೋತ್ಸವ – ಬೃಹತ್ ಗಿಡ ನೆಡುವಿಕೆ ಕಾರ್ಯಕ್ರಮದ ಅನುಷ್ಠಾನದ ಜವಾಬ್ದಾರಿ 5. ಅರಣ್ಯ ಹಾಗೂ ಅರಣ್ಯೇತರ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು, ಅರಣ್ಯೀಕರಣ ಚಟುವಟಿಕೆಗಳ ಬಗ್ಗೆ ಉಸ್ತುವಾರಿ ವಹಿಸುವುದು. 6. ವಿವಿಧ ಮಾದರಿ ಅರಣ್ಯೀಕರಣ ಉದ್ದೇಶಗಳಿಗೆ ಮಾದರಿ ಅಂದಾಜು ಪಟ್ಟಿಗಳನ್ನು ಸಿದ್ಧಪಡಿಸುವುದು. 7. ಅಭಿವೃದ್ಧಿ ಘಟಕದ ವತಿಯಿಂದ ನಿರ್ವಹಿಸಲಾಗುತ್ತಿದ್ದ ವಿವಿಧ ಅರಣ್ಯ ನೆಡುತೋಪುಗಳ, ಸಸ್ಯ ಕ್ಷೇತ್ರಗಳ ಗುಣಮಟ್ಟದ ಬಗ್ಗೆ ಉಸ್ತುವಾರಿ ವಹಿಸುವುದು. 8. ಕರ್ನಾಟಕ ಅರಣ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಭೌತಿಕ ಹಾಗೂ ಆರ್ಥಿಕ ಗುರಿಗಳ ಪ್ರಗತಿ ಪರಿಶೀಲನೆ ನಡೆಸುವುದು ಇತ್ಯಾದಿ.

ಕಾರ್ಯಕ್ರಮಗಳು & ಚಟುವಟಿಕೆಗಳು

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ

ಇನ್ನಷ್ಟು ನೋಡಿ

ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸಿರುವುದು

ಇನ್ನಷ್ಟು ನೋಡಿ

ಮಗುವಿಗೊಂದು ಮರ ಶಾಲೆಗೊಂದು ವನ

ಇನ್ನಷ್ಟು ನೋಡಿ

ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವ ಯೋಜನೆ, ಶಿವಮೊಗ್ಗ

ಇನ್ನಷ್ಟು ನೋಡಿ

ಮಗುವಿಗೊಂದು ಮರ ಶಾಲೆಗೊಂದು ವನ

ಇನ್ನಷ್ಟು ನೋಡಿ

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ

ಇನ್ನಷ್ಟು ನೋಡಿ