ವಿಭಾಗದ ಮುಖ್ಯಸ್ಥರು

ಗೋಪಾಲಕೃಷ್ಣ

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ಯಲ್ಲಾಪುರ ವಿಭಾಗ, ಯಲ್ಲಾಪುರ ತಾಲ್ಲೂಕು, ಯಲ್ಲಾಪುರ. ಪಿನ್ 581359
08419261273
dcfyellapur@gmail.com

ವಿಭಾಗದ ಬಗ್ಗೆ

ಯಲ್ಲಾಪುರ ಅರಣ್ಯ ವಿಭಾಗ ಉತ್ತರ ಕನ್ನಡ ಜಿಲ್ಲೆಯ ಪೂರ್ವ ಭಾಗದಲ್ಲಿದ್ದು, ಪೂರ್ವದಲ್ಲಿ ಧಾರವಾಡ ಮತ್ತು ಹಾವೇರಿ ಜಿಲ್ಲೆಯೊಂದಿಗೆ ಗಡಿ ಹೊಂದಿದೆ. ಈ ವಿಭಾಗ ಯಲ್ಲಾಪುರ ಮತ್ತು ಮುಂಡಗೋಡು ಎರಡು ತಾಲೂಕುಗಳಲ್ಲಿ ಹರಡಿಕೊಂಡಿದೆ. ಬೆಟ್ಟ ಜಮೀನುಗಳು (ಸಂರಕ್ಷಿತ ಅರಣ್ಯ) ಸೇರಿದಂತೆ ವಿಭಾಗದಲ್ಲಿರುವ ಅರಣ್ಯದ ಒಟ್ಟು ವಿಸ್ತಾರ 1,68,986.66 ಹೆಕ್ಟೇರ್‌ಗಳಾಗಿದ್ದು, ಇದು ವಿಭಾಗದ ಒಟ್ಟು ಭೌಗೋಳಿಕ ಪ್ರದೇಶದ (1902.28 ಚಕಿಮೀ) 86.97 ಪಾಲು ಹೊಂದಿದೆ. ಈ ವಿಭಾಗದಲ್ಲಿ ಕಾಳಿ, ಬೇಡ್ತಿ, ಧರ್ಮ, ತಟ್ಟಿಗಳ್ಳ ಮುಂತಾದ ಕೆಲವು ನದಿಗಳು ಹರಿಯುತ್ತವೆ. ಮೇಲಿನವುಗಳಲ್ಲಿ ಧರ್ಮ ಪೂರ್ವಕ್ಕೆ ಹರಿಯುತ್ತದೆ, ಉಳಿದವು ಪಶ್ಚಿಮಕ್ಕೆ ಹರಿಯುತ್ತವೆ. ಯಲ್ಲಾಪುರ ವಿಭಾಗ ಮೂರು ಉಪ-ವಿಭಾಗಗಳನ್ನು ಹೊಂದಿದೆ, ಅವು ಯಲ್ಲಾಪುರ, ಮಂಚಿಕೇರಿ ಮತ್ತು ಮುಂಡಗೋಡ. ಹಾಗೂ ಯಲ್ಲಾಪುರ, ಕಿರವತ್ತಿ, ಮಂಚಿಕೇರಿ, ಇಡಗುಂಜಿ, ಮುಂಡಗೋಡು ಮತ್ತು ಕತೂರು ಈ ಆರು ವಲಯಗಳನ್ನು ಹೊಂದಿದೆ. ಈ ವಿಭಾಗ 28 ಸೆಕ್ಷನ್‌ಗಳು ಮತ್ತು 76 ಬೀಟ್‌ಗಳನ್ನು ಹೊಂದಿದೆ. ಕಿರವತ್ತಿ ಮತ್ತು ಮುಂಡಗೋಡುಗಳಲ್ಲಿ ಎರಡು ಟಿಂಬರ್‌ ಡಿಪೋಗಳಿವೆ. ಯಲ್ಲಾಪುರ ವಿಭಾಗ ಪೂರ್ವ ಭಾಗದಲ್ಲಿ ಒಣ ಎಲೆಯುದುರುವ ಕಾಡುಗಳು, ಮಧ್ಯದಲ್ಲಿ ತೇವಾಂಶ ಭರಿತ ಎಲೆಯುದುರುವ ಕಾಡುಗಳು, ಪಶ್ಚಿಮದಲ್ಲಿ ಅರೆ ನಿತ್ಯಹಸಿರು ಕಾಡುಗಳು ಮತ್ತು ಅತ್ಯಂತ ಅನುಕೂಲಕರ ಪರಿಸ್ಥಿತಿ ಇರುವ ಸ್ಥಳಗಳಲ್ಲಿ ಒದ್ದೆ ನಿತ್ಯಹಸಿರು ಕಾಡುಗಳನ್ನು ಹೊಂದಿದೆ.

ಯಲ್ಲಾಪುರ ವಿಭಾಗದ ನಕ್ಷೆ

--%>

ಉಪ ವಿಭಾಗಗಳು

ಟೆಂಡರ್‌ಗಳು

ಸುದ್ದಿ ಮತ್ತು ನವೀಕರಣಗಳು