ವಿಭಾಗದ ಮುಖ್ಯಸ್ಥರು

ಶ್ರೀ. ಕೆ ಎಂ ಗಾಮನಗಟ್ಟಿ

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ, ಲೋಯರ್ ಹುತ್ತ, ಭದ್ರಾವತಿ 577301
08282266355
dcfbdvt@yahoo.in

ವಿಭಾಗದ ಬಗ್ಗೆ

ಭದ್ರಾವತಿ ಅರಣ್ಯ ವಿಭಾಗ ಶಿವಮೊತ್ತ ವೃತ್ತದ ಪೂರ್ವ ಭಾಗದಲ್ಲಿದೆ. ಇದು ಶಿವಮೊಗ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳನ್ನು ವ್ಯಾಪಿಸಿದೆ. ಸಂಬಂಧಪಟ್ಟ ತಾಲೂಕುಗಳು ಶಿವಮೊಗ್ಗ ಜಿಲ್ಲೆಯಿಂದ ಭದ್ರಾವತಿ ಮತ್ತು ಶಿವಮೊಗ್ಗ (ಭಾಗಶಃ), ದಾವಣಗೆರೆ ಜಿಲ್ಲೆಯಿಂದ ಚನ್ನಗಿರಿ ಮತ್ತು ಹೊನ್ನಾಳಿ (ಭಾಗಶಃ), ಚಿಕ್ಕಮಗಳೂರು ಜಿಲ್ಲೆಯಿಂದ ತರೀಕೆರೆ (ಭಾಗಶಃ) ಈ ವಿಭಾಗದ ಅಧಿಸೂಚಿತ ಅರಣ್ಯ ಪ್ರದೇಶದ ಒಟ್ಟು ವಿಸ್ತಾರ 89,131.03 ಹೆಕ್ಟೇರ್‌ಗಳು. ಇದು ಚನ್ನಗಿರಿ ಮತ್ತು ತರೀಕೆರೆ ಈ ಎರಡು ಉಪ ವಿಭಾಗಗಳನ್ನು ಹೊಂದಿದೆ, ಮತ್ತು ಭದ್ರಾವತಿ, ಉಂಬ್ಳೆಬೈಲು, ಲಕ್ಕವಳ್ಳಿ, ತರೀಕೆರೆ, ಅಜ್ಜಂಪುರ, ಚನ್ನಗಿರಿ ಮತ್ತು ಶಾಂತಿಸಾಗರ ಈ ಏಳು ವಲಯಗಳನ್ನು ಒಳಗೊಂಡಿದೆ. ಭದ್ರಾವತಿ ವಿಭಾಗದಲ್ಲಿರುವ ಕಾಡುಗಳು ಮುಖ್ಯವಾಗಿ ಒಣ ಎಲೆಯುದುರುವ ಮತ್ತು ಕುರುಚಲು ಕಾಡುಗಳಾಗಿವೆ. ಚನ್ನಗಿರಿ ವಲಯದ ಕುಕ್ವಾಡ ಉಬ್ರಾಣಿ ಮತ್ತು ಅಂತರಗಂಗೆ ಅರಣ್ಯಗಳು ಹಾಗೂ ಉಂಬ್ಳೆಬೈಲು ವಲಯದ ಚೊರ್ನದಹಳ್ಳಿ ಮತ್ತು ಕಾಕನಹೊಸುಡಿ ರಾಜ್ಯ ಅರಣ್ಯಗಳಲ್ಲಿ ಅಲ್ಲಲ್ಲಿ ತೇವಾಂಶ ಭರಿತ ಎಲೆಯುದುರುವ ಅರಣ್ಯಗಳು ಕಂಡುಬರುತ್ತವೆ. ಪೂರ್ವ ಭಾಗ ಮತ್ತು ಜನವಸತಿ ಪ್ರದೇಶದ ಸಮೀಪದ ವಿಭಾಗದ ಅರಣ್ಯಗಳು ಮುಳ್ಳು ಕುರುಚಲು ಕಾಡುಗಳಾಗಿದ್ದು ಬಹಳ ಅವನತಿಯಲ್ಲಿವೆ.

ಭದ್ರಾವತಿ ವಿಭಾಗದ ನಕ್ಷೆ

--%>

ಉಪ ವಿಭಾಗಗಳು

ಟೆಂಡರ್‌ಗಳು

ಸುದ್ದಿ ಮತ್ತು ನವೀಕರಣಗಳು