- ಸಾಮಾನ್ಯ ಹೆಸರು : ಕಿರಾಲಬೋಗಿ/ ಬೋಗಿ
- ವೈಜ್ಞಾನಿಕ ಹೆಸರು : ಹಾಪಿಯಾ ಪರ್ವಿಫ್ಲೋರಾ
- ಕೌಟುಂಬಿಕ ಹೆಸರು : ಡಿಪ್ತೆರೊಕಾರ್ಪೆಸಿ
- ಸ್ಥಳೀಯತೆ : ದಕ್ಷಿಣ ಭಾಗದ ಪಶ್ಚಿಮ ಘಟ್ಟಗಳು
• ಇದು ನಿತ್ಯಹಸಿರು ಮತ್ತು ಅರೆ ನಿತ್ಯಹಸಿರು ಕಾಡುಗಳಲ್ಲಿ ಬೆಳೆಯುವ ಸುಂದರ ಮರವಾಗಿದ್ದು ಸುಮಾರು 40 ಮೀ ವರೆಗೆ ಎತ್ತರ ಹಾಗೂ 1.5 ಮೀ ವರೆಗೆ ಸುತ್ತಳತೆ ಹೊಂದಿರುತ್ತದೆ.
• ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಉಪ ಅರಣ್ಯಗಳಲ್ಲಿ ಇದು ಪ್ರಬಲವಾಗಿ ಬೆಳೆಯುವ ಮರವಾಗಿದೆ.
• ಹೂವುಗಳು ಕೆನೆ ಹಳದಿ ಬಣ್ಣ, ಸುವಾಸನೆ ಹೊಂದಿರುತ್ತವೆ, ಸಣ್ಣಗಾತ್ರ ಮತ್ತು ಬಹಳಷ್ಟು ಇರುತ್ತವೆ, ಕದಿರು ಮಾದರಿಯಲ್ಲಿ ಹೂ ಬಿಡುತ್ತದೆ.
• ಕಿರಾಲಬೋಗಿಯ ಹಣ್ಣು ಕಾಯಿಯಂತಿರುತ್ತದೆ, ಸ್ಟ್ರಾ ಬಣ್ಣದ ಲೋಬ್ಗಳಂಥ ರಚನೆ ಹೊಂದಿರುತ್ತದೆ.
• ಇದರ ದಿಮ್ಮಿ ತಿಳಿ ಬೂದು-ಕಂದು ಅಥವಾ ಕೆಂಪು ಕಂದು ಬಣ್ಣದಲ್ಲಿರುತ್ತದೆ, ಕೆಲವೊಮ್ಮೆ ಹಳದಿ ನಸುಬಣ್ಣ ಹೊಂದಿರುತ್ತದೆ.ಇದು ಮಧ್ಯಮ ಭಾರದ, ಉತ್ತಮ ಮತ್ತು ಸಮನಾದ ವಿನ್ಯಾಸ ಹೊಂದಿದ, ಬಲಿಷ್ಟ, ಗಡುಸಾದ, ಬಾಳಿಕೆ ಬರುವ, ಬಹಳ ಗಟ್ಟಿಮುಟ್ಟಾದ ಉಪಯುಕ್ತ ದಿಮ್ಮಿಯಾಗಿರುತ್ತದೆ.ಬಿಳಿ ಇರುವೆ ದಾಳಿಗೆ ಇದು ಈಡಾಗುವುದಿಲ್ಲ.
• ನಿರ್ಮಾಣ, ಪೈಲ್ಗಳು, ದೋಣಿ ನಿರ್ಮಾಣ ಮುಂತಾದ ಹಲವು ಕಾರ್ಯಗಳಿಗೆ ಈ ಮರ ಬಳಕೆಯಾಗುತ್ತದೆ. ಕರಾವಳಿ ಪ್ರದೇಶದಲ್ಲಿ ಇದು ಅತ್ಯಂತ ಜನಪ್ರಿಯ ಮರಮಟ್ಟು.
• ಉನ್ನತ ಗುಣಮಟ್ಟದ ಚರ್ಮವನ್ನು ಹದಮಾಡುವುದಕ್ಕೆ ತೊಗಟೆಯನ್ನು ಬಳಸಲಾಗುತ್ತದೆ.