A- A A+
ವನ್ಯಜೀವಿ ಸಾಮಾಗ್ರಿಗಳ ಆದ್ಯರ್ಪಣೆ- ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿರಿ
ರಾಷ್ಟ್ರೀಯ ಅರಣ್ಯೀಕರಣ ಕಾರ್ಯಕ್ರಮ, ರಾಷ್ಟ್ರೀಯ ಅರಣ್ಯೀಕರಣ ಮತ್ತು ಪರಿಸರ ಅಭಿವೃದ್ಧಿ ಮಂಡಳಿ, ಅರಣ್ಯ ಮತ್ತು ಪರಿಸರ ಸಚಿವಾಲಯದ ಶೇ. 100 ರಷ್ಟು ಅನುದಾನದ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಈ ಕೇಂದ್ರ ಪುರಸ್ಕೃತ ಯೋಜನೆಯನ್ನು 10ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ 9ನೇ ಪಂಚ ವಾರ್ಷಿಕ ಯೋಜನೆಗಳಾದ (ಎ) ಪ್ರದೇಶ ಆಧಾರಿತ ಉರುವಲು ಮತ್ತು ಮೇವು ಯೋಜನೆ, (ಬಿ) ಸಮಗ್ರ ಅರಣ್ಯೀಕರಣ ಮತ್ತು ಪರಿಸರ ಅಭಿವೃದ್ಧಿ ಯೋಜನೆ, (ಸಿ) ಔಷಧೀಯ ಸಸ್ಯಗಳನ್ನೊಳಗೊಂಡ ನಾಟವಲ್ಲದ ಅರಣ್ಯ ಉತ್ಪನ್ನಗಳ ಅಭಿವೃದ್ಧಿ (ಡಿ) ಪರಿಶಿಷ್ಟ ಪಂಗಡಗಳು ಮತ್ತು ಗ್ರಾಮೀಣ ಬಡಜನರ ಸಹಯೋಗದೊಂದಿಗೆ ಕ್ಷೀಣಿತ ಅರಣ್ಯಗಳ ಪುನರ್ಉತ್ಪತ್ತಿ ಯೋಜನೆಗಳನ್ನು ಒಗ್ಗೂಡಿಸಿ ರೂಪಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ರಾಷ್ಟ್ರೀಯ ಅರಣ್ಯೀಕರಣ ಮತ್ತು ಪರಿಸರ ಅಭಿವೃದ್ಧಿ ಮಂಡಳಿ ಅರಣ್ಯ ಅಭಿವೃದ್ಧಿ ಸಂಸ್ಥೆ ಹಾಗೂ ಜಂಟೀ ಅರಣ್ಯ ಸಮಿತಿಗಳನ್ನು ಸಂಸ್ಥಾಪನೆಗೊಳಿಸಲು ಒತ್ತು ನೀಡುತ್ತಿದೆ. ಅರಣ್ಯ ವಿಭಾಗ ಮಟ್ಟದ ಎಲ್ಲಾ ಜಂಟಿ ಅರಣ್ಯ ಸಮಿತಿಗಳನ್ನು ಸೇರಿಸಿ ಜನರ ಪಾಲ್ಗೋಳ್ಳುವಿಕೆಯ ಮೂಲಕ ಸಮಗ್ರ ಅರಣ್ಯ ಅಭಿವೃದ್ದಿ ಗೋಸ್ಕರ ಅರಣ್ಯ ಅಭಿವೃದ್ಧಿ ಸಂಸ್ಥೆಗಳನ್ನು ರಚಿಸಲಾಗಿದೆ. ಕರ್ನಾಟಕ ಅರಣ್ಯ ಇಲಾಖೆ ರಾಷ್ಟ್ರೀಯ ಅರಣ್ಯೀಕರಣ ಕಾರ್ಯ ಕ್ರಮವನ್ನು 10 ಮತ್ತು 11ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ 2002-03 ರಿಂದ 45 ಅರಣ್ಯ ಅಭಿವೃದ್ಧಿ ಸಂಸ್ಥಗಳ ಮೂಲಕ ಈ ಕೆಳಕಂಡ ಉದ್ದೇಶಗಳನ್ನು ನೆರವೇರಿಸಲು ಅನುಷ್ಠಾನಗೊಳಿಸುತ್ತಿದೆ. • ಅರಣ್ಯ ಸಂಪನ್ಮೂಲಗಳ ಸುಸ್ತಿರ ಅಭಿವೃದ್ಧಿ ಹಾಗೂ ನಿರ್ವಹಣೆ • ವೃಕ್ಷ ಹೊದಿಕೆಯನ್ನು ಹೆಚ್ಚಿಸುವುದು ಹಾಗೂ ಸುಧಾರಿಸುವುದು • ಕ್ಷೀಣಿತ ಅರಣ್ಯ ಪ್ರದೇಶ ಹಾಗೂ ಇತರ ಪ್ರದೇಶಗಳನ್ನು ಗ್ರಾಮ ಅರಣ್ಯ ಸಮಿತಿ ಹಾಗೂ ಜನರ ಸಹಭಾಗಿತ್ವದಲ್ಲಿ ಪುನರ್ ನಿರ್ಮಾಣ ಮಾಡುವುದು.