ಈ ಕೇಂದ್ರವನ್ನು 1985-86ರಲ್ಲಿ ಕರ್ತವ್ಯ ನಿರತ ಅಧಿಕಾರಿಗಳು / ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಇರುವ ಅಧಿಕಾರಿಗಳ ತರಬೇತಿಗಾಗಿ “ಸಾಮಾಜಿಕ ಅರಣ್ಯೀಕರಣ ತರಬೇತಿ ಕೇಂದ್ರ”ವಾಗಿ ಆರಂಭಿಸಲಾಯಿತು. ಈ ಕೇಂದ್ರದ ನೇತೃತ್ವವನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ವಹಸಿಕೊಂಡಿರುತ್ತಾರೆ. 1992ರಲ್ಲಿ ಕಚೇರಿ ಮತ್ತು ಉಪನ್ಯಾಸ ಹಾಲ್ ಒಳಗೊಂಡ ಆಡಳಿತಾತ್ಮಕ ಬ್ಲಾಕ್ ಅನ್ನು ನಿರ್ಮಾಣ ಮಾಡಲಾಯಿತು. ಈ ತರಬೇತಿ ಕೇಂದ್ರಕ್ಕೆ 1995ರಲ್ಲಿ “ಅರಣ್ಯ ತಾಂತ್ರಿಕ ಮತ್ತು ಆಡಳಿತಾತ್ಮಕ ತರಬೇತಿ ಕೇಂದ್ರ” ಎಂದು ಮರುನಾಮಕರಣ ಮಾಡಲಾಯಿತು. 2005 ರಿಂದ 2009ರ ಸೆಪ್ಟೆಂಬರ್ ವರೆಗೆ ಕೇಂದ್ರದ ನೇತೃತ್ವವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ವಹಸಿಕೊಂಡಿದ್ದರು ಮತ್ತು ಸೆಪ್ಟೆಂಬರ್ 2009 ದಿಂದ ಈವರೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಇದರ ನೇತೃತ್ವ ವಹಿಸಿಕೊಂಡಿದ್ದಾರೆ. ಇದು ಬೆಂಗಳೂರು ಕೇಂದ್ರದಿಂದ ವೈಟ್ಫೀಲ್ಡ್ ಮುಖ್ಯರಸ್ತೆಯ ಪೂರ್ವದ ಕಡೆಗೆ ಸುಮಾರು 30 ಕಿ.ಮೀ. ದೂರದಲ್ಲಿದೆ. ಈ ಕೇಂದ್ರ 41.93 ಎಕರೆ ಅಥವಾ 16.70 ಹೆಕ್ಟೇರ್ ವಿಸ್ತಾರದ ಪ್ರದೇಶದಲ್ಲಿ ವ್ಯಾಪಿಸಿದೆ. ಕೇಂದ್ರದಲ್ಲಿ ಒಂದು ಆಡಳಿತಾತ್ಮಕ ಬ್ಲಾಕ್, ಒಂದು ಸುಸಜ್ಜಿತ ತರಗತಿ ಕೋಣೆ, ಒಂದು ಕಾನ್ಫರೆನ್ಸ್ ಹಾಲ್, ಒಂದು ಕಂಪ್ಯೂಟರ್ ಲ್ಯಾಬೋಲೇಟರಿ, ಪುರುಷರ ಹಾಗೂ ಮಹಿಳೆಯರ ಹಾಸ್ಟೆಲ್ ಗಳು, ಜಿಮ್, ಬಹುಪಯೋಗಿ ಕಟ್ಟಡ, ಒಳಾಂಗಣ ಆಟಗಳ ಹಾಲ್, ವಾಲಿಬಾಲ್ ಕೋರ್ಟ್ ಮತ್ತು ಮೆಸ್ ಒಳಗೊಂಡಿದೆ. ಈ ಕೇಂದ್ರವು 35 ಪರೀಕ್ಷಾರ್ಥಿಗಳ ಉಪ ವ.ಅ. ಕಮ್ ಮೋಜಣಿದಾರರ 1 ಬ್ಯಾಚ್, ಒಟ್ಟು 153 ಪರೀಕ್ಷಾರ್ಥಿಗಳ ಅರಣ್ಯ ರಕ್ಷಕರ 3 ಬ್ಯಾಚ್ ಗಳು, ಒಟ್ಟು 128 ಪರೀಕ್ಷಾರ್ಥಿಗಳ ಅರಣ್ಯ ವೀಕ್ಷಕರ 3 ಬ್ಯಾಚ್ ಗಳು, ಒಟ್ಟು 190 ಪರೀಕ್ಷಾರ್ಥಿಗಳು ಪ್ರಥಮ ದರ್ಜೆ ಸಹಾಯಕರ (ಎಫ್ಡಿಎ) 4 ಬ್ಯಾಚ್ ಗಳು ಮತ್ತು ಈವರೆಗೆ 102 ಪರೀಕ್ಷಾರ್ಥಿಗಳ ದ್ವಿತೀಯ ದರ್ಜೆ ಸಹಾಯಕರ (ಎಸ್ಡಿಎ) 2 ಬ್ಯಾಚ್ ಳಿಗೆ ತರಬೇತಿ ನೀಡಿದೆ. ಪ್ರಸ್ತುತ 35 ಪರೀಕ್ಷಾರ್ಥಿಗಳಿರುವ ಅರಣ್ಯ ರಕ್ಷಕರ 1 ಬ್ಯಾಚ್ ತಮ್ಮ ನೇಮಕಾತಿ ತರಬೇತಿಯ ಎರಡನೇ ಸೆಮಿಸ್ಟರ್ ಅಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ 1 ಉಪ ಅರಣ್ಯ ಸಂರಕ್ಷಕರು, 1 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, 3 ವಲಯ ಅರಣ್ಯ ಅಧಿಕಾರಿಗಳು, 2 ಉಪ ವಲಯ ಅರಣ್ಯಾಧಿಕಾರಿಗಳು, 2 ಅರಣ್ಯ ರಕ್ಷಕರು ಮತ್ತು 2 ಅರಣ್ಯ ವೀಕ್ಷಕರು ಮತ್ತು ಆಡಳಿತಾತ್ಮಕ ಸಚಿವಾಲಯ ಸಿಬ್ಬಂದಿ ಇದ್ದಾರೆ.

ಸೌಲಭ್ಯಗಳು

ಸ್ಥಳ

ಸಂಪರ್ಕ ವಿವರಗಳು
 • ಶ್ರೀಮತಿ. ನೇತ್ರಾವತಿ. ಬಿ  
  ವಲಯ ಅರಣ್ಯಾಧಿಕಾರಿಗಳು
 •   ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ತರಬೇತಿ ಕೇಂದ್ರ, ಕಾಡುಗೋಡಿ, ಬೆಂಗಳೂರು-562050
 •   dcfftati@gamail.com
 •   8048410194
 • ಶ್ರೀ. ಹರಿಕೀರನ್ ವಿ ಭಟ್  
  ವಲಯ ಅರಣ್ಯಾಧಿಕಾರಿಗಳು
 •   ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ತರಬೇತಿ ಕೇಂದ್ರ, ಕಾಡುಗೋಡಿ, ಬೆಂಗಳೂರು-562051
 •   dcfftati@gamail.com
 •   8048410195