ವಿಭಾಗದ ಮುಖ್ಯಸ್ಥರು

ಶ್ರೀ. ಕೆ. ಕಮಲ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ವಿಭಾಗ, ಮೈಸೂರು, ಆರಣ್ಯ ಭವನ, ಅಶೋಕ್ ಪುರಂ, 6 ನೇ ಕ್ರಾಸ್, ಮೈಸೂರು -570008
08212483853
dcfmdm@gmail.com

ವಿಭಾಗದ ಬಗ್ಗೆ

ಮೈಸೂರು ಅರಣ್ಯ ವಿಭಾಗ ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿದೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 16,037 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ವಿಸ್ತಾರದ (4,300 ಚಕಿಮೀ) ಸುಮಾರು 3.73 ರಷ್ಟಿದೆ. ಮೈಸೂರು ವಿಭಾಗದಲ್ಲಿ ಮೈಸೂರು ಮತ್ತು ಎಚ್‌.ಡಿ. ಕೋಟೆ ಈ ಎರಡು ಉಪ ವಿಭಾಗಗಳಿವೆ, ಮತ್ತು ಮೈಸೂರು, ಹಸಿರು ನಗರ ಪ್ರದೇಶ, ಟಿ. ನರಸೀಪುರ, ನಂಜನಗೂಡು, ಎಚ್‌.ಡಿ. ಕೋಟೆ ಮತ್ತು ಸರಗೂರು ಈ ಆರು ವಲಯಗಳಿವೆ. ಮೈಸೂರಿನಲ್ಲಿರುವ ಶ್ರೀಗಂಧ ಕೋಟಿ ಕೂಡ ಮೈಸೂರು ವಿಭಾಗಕ್ಕೆ ಸೇರಿದೆ. ಮೈಸೂರು ವಿಭಾಗದಲ್ಲಿರುವ ಕಾಡುಗಳು ಮುಖ್ಯವಾಗಿ ಒಣ ಎಲೆಯುದುರುವ ಮತ್ತು ಕುರುಚಲು ಕಾಡುಗಳಾಗಿವೆ. ವಿಭಾಗದ ಪಶ್ಚಿಮ ಭಾಗದ ಸೊಳ್ಳೆಪುರ, ಸಿದ್ದಾಪುರ, ಚಿಕ್ಕನಹಳ್ಳಿ ಮುಂತಾದೆಡೆ ಇರುವ ಕಾಡುಗಳು ಒಣ ಎಲೆಯುದುರುವ ಕಾಡುಗಳಾಗಿವೆ. ವಿಭಾಗದ ಉಳಿದ ಭಾಗದಲ್ಲಿರುವ ಬಹುತೇಕ ಕಾಡು ಕುರುಚಲು ಕಾಡುಗಳಾಗಿವೆ.

ಮೈಸೂರು ವಿಭಾಗದ ನಕ್ಷೆ

--%>

ಉಪ ವಿಭಾಗಗಳು