ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ-1976ರ ವಿಭಾಗ (8)ರ ನಿಯಮಗಳ ಅನುಸಾರ ಖಾಸಗಿ ಜಮೀನಿನಲ್ಲಿ ಮರ ಕಟಾವಣೆಗೆ ಅನುಮತಿಯನ್ನು ನೀಡಲಾಗಿದೆ. ಕಾಯ್ದೆಯ ಅನುಸಾರ ಮರ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಖಾಸಗಿ ಜಮೀನಿನಲ್ಲಿ ಮರ ಕಟಾವಣೆ ಅನುಮತಿ ಸಕಾಲದಡಿ ನಾಗರಿಕ ಸೇವೆ ಕೂಡ ಆಗಿದೆ. ಮರ ಕಟಾವಣೆ ಅನುಮತಿಗಾಗಿ ಆನ್‌ಲೈನ್‌ ಅರ್ಜಿ (ನಮೂನೆ -1ರಲ್ಲಿ) ಸಲ್ಲಿಕೆಗೆ, ಮತ್ತು ಆ ಅರ್ಜಿಯನ್ನು ಸಂಬಂಧಪಟ್ಟ ಮರ ಅಧಿಕಾರಿಗೆ ಸಲ್ಲಿಕೆಗೆ ಅನುಕೂಲ ಕಲ್ಪಿಸಲು, ಈ ಸಿಸ್ಟಮ್‌ ಮರ ಅಧಿಕಾರಿಯನ್ನು ಗುರುತಿಸುವ ಮತ್ತು ಆ ಅಧಿಕಾರಿಗೆ ಅರ್ಜಿ ವರ್ಗಾವಣೆ ಮಾಡುವಂಥ ಮುಂಚಿತವಾಗಿ ಅಳವಡಿಸಿದ ಬುದ್ಧಿಮತ್ತೆಯನ್ನು ಹೊಂದಿದೆ. ಮರ ಕಟಾವಣೆ ಅನುಮತಿಗೆ ಮುಂಚಿತವಾಗಿ ಸಲ್ಲಿಸಬೇಕಿರುವ ದಾಖಲೆಗಳನ್ನೂ ಸಹ ಅಪ್ಲಿಕೇಶನ್‌ ಸೂಚಿಸುತ್ತದೆ ಮತ್ತು ಈ ಮೂಲಕ ಅಗತ್ಯ ದಾಖಲೆಗಳನ್ನು ಕಂದಾಯ ಇಲಾಖೆಯಿಂದ ಪಡೆದುಕೊಳ್ಳಲು ಉಂಟಾಗುವ ವಿಳಂಬಗಳನ್ನು ಕಡಿಮೆ ಮಾಡುತ್ತದೆ. ಕಟಾವಣೆಗೆ ಪ್ರಸ್ತಾವನೆ ಮಾಡಿದ ಪ್ರತಿ ಮರ ಎತ್ತರ ಮತ್ತು ಸುತ್ತಳತೆ, ಅಂಥ ಅರ್ಜಿಯ ವಿಲೇವಾರಿಯವರೆಗಿನ ಪ್ರತಿ ಹಂತದಲ್ಲಿ ಮಾಡಿದ ಶಿಫಾರಸುಗಳ ಜೊತೆಗೆ ಭೂ-ನಿರ್ದೇಶಾಂಕಗಳನ್ನು ದಾಖಲಿಸಲು ಸಿಸ್ಟಮ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಟಾವಣೆ ಅನುಮತಿ ಅರ್ಜಿಯ ಸ್ಥಿತಿಗತಿ ತಿಳಿದುಕೊಳ್ಳಲು ಇರುವ ಇಂಟರ್‌ಫೇಸ್‌ ನಿಗಾ ಇಡಲೂ ಒದಗಿಸಲಾಗಿದೆ.


ಸಿಸ್ಟಮ್ ಅನ್ನು ಪ್ರವೇಶಿಸಲು ಮತ್ತು ಲಾಗಿನ್ ಮಾಡಲು, ಇನ್ನಷ್ಟು ತಿಳಿಯಿರಿ >>