ವನ್ಯ ಜೀವಿ ಅಭಯಾರಣ್ಯ

ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಉಪವಿಭಾಗ 18ರಿಂದ 26ಎ ವರೆಗಿನ ನಿಯಮಗಳ ಅಡಿಯಲ್ಲಿ, ಯಾವುದೇ ಮೀಸಲು ಅರಣ್ಯ ಅಥವಾ ಪ್ರಾದೇಶಿಕ ಜಲಮೂಲಗಳ ಪ್ರದೇಶದಿಂದ ಹೊರಗಿರುವ, ಪರಿಸರ, ಸಸ್ಯವರ್ಗ, ಹೂವು, ಭೂಸ್ವರೂಪ, ನಿಸರ್ಗ ಅಥವಾ ಜೈವಿಕ ದೃಷ್ಟಿಕೋನದಿಂದ ಸಾಕಷ್ಟು ಗಮನಾರ್ಹ ಎಂದು ಪರಿಗಣಿಸಲ್ಪಟ್ಟ ಯಾವುದೇ ಪ್ರದೇಶವನ್ನು, ವನ್ಯಜೀವಿ ಮತ್ತು ಅದರ ಪರಿಸರದ ಸಂರಕ್ಷಣೆ, ವರ್ಧನೆ ಮತ್ತು ಅಭಿವೃದ್ಧಿ ಮಾಡುವ ಸಲುವಾಗಿ, ಅಭಯಾರಣ್ಯ ಎಂದು ಅಧಿಸೂಚಿತಗೊಳಿಸಬಹುದು. ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಉಪವಿಭಾಗ 26ಎ ನಿಯಮದ ಅಡಿಯಲ್ಲಿ, ಯಾವುದೇ ಮೀಸಲು ಅರಣ್ಯ ಅಥವಾ ಪ್ರಾದೇಶಿಕ ಜಲಮೂಲಗಳ ಪ್ರದೇಶದಿಂದ ಹೊರಗಿರುವ, ಪರಿಸರ, ಸಸ್ಯವರ್ಗ, ಹೂವು, ಭೂಸ್ವರೂಪ, ನಿಸರ್ಗ ಅಥವಾ ಜೈವಿಕ ದೃಷ್ಟಿಕೋನದಿಂದ ಸಾಕಷ್ಟು ಗಮನಾರ್ಹ ಎಂದು ಪರಿಗಣಿಸಲ್ಪಟ್ಟ ಯಾವುದೇ ಪ್ರದೇಶವನ್ನು, ವನ್ಯಜೀವಿ ಮತ್ತು ಅದರ ಪರಿಸರದ ಸಂರಕ್ಷಣೆ, ವರ್ಧನೆ ಮತ್ತು ಅಭಿವೃದ್ಧಿ ಮಾಡುವ ಸಲುವಾಗಿ, ಅಭಯಾರಣ್ಯ ಎಂದು ಅಧಿಸೂಚಿತಗೊಳಿಸಬಹುದು.

ನಮ್ಮ ವನ್ಯಜೀವಿ ಅಭಯಾರಣ್ಯಗಳನ್ನು ಅನ್ವೇಷಿಸಿ

ಪರಿಚಯ
ಸ್ಥಳ ಮತ್ತು ವಿಸ್ತಾರ
ಮಹತ್ವ
ಭೂದೃಶ್ಯ
ಮೇಲುಕೋಟೆ ವನ್ಯಜೀವಿ ಅಭಯಾರಣ್ಯ

ಮೇಲುಕೋಟೆ ವನ್ಯಜೀವಿ ಅಭಯಾರಣ್ಯ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿದೆ ಮತ್ತು (1) ನಾರಾಯಣದುರ್ಗ ರಾಜ್ಯ ಅರಣ್ಯ ಮತ್ತು (2) ಮೂಡಿಬೆಟ್ಟ ರಾಜ್ಯ ಅರಣ್ಯ ಎಂಬ ಎರಡು ಮೀಸಲು ಅರಣ್ಯಗಳನ್ನು ಒಳಗೊಂಡಿದೆ.ತೋಳಗಳನ್ನು ಸಂರಕ್ಷಿಸಲು ಈ ಅಭಯಾರಣ್ಯದ ಘೋಷಣೆ ಮಾಡಲಾಗಿದೆ.ದಿನಾಂಕ 17.6.1974ರಂದು ಕರ್ನಾಟಕ ಸರ್ಕಾರದ ಸರ್ಕಾರಿ ಅಧಿಸೂಚನೆ ಸಂಖ್ಯೆ AFD-49-FWL-74 ಮೂಲಕ ಈ ಪ್ರದೇಶವನ್ನು ಅಭಯಾರಣ್ಯ ಎಂದು ಘೋಷಣೆ ಮಾಡಲಾಗಿದೆ.ಅಭಯಾರಣ್ಯದ ಅಂತಿಮ ಅಧಿಸೂಚನೆಯನ್ನು ದಿನಾಂಕ 9ನೇ ಮಾರ್ಚ್ 1998ರ ಸ.ಆ. ಸಂಖ್ಯೆ FEE 58 FWL 96ರ ಮೂಲಕ ಜಾರಿ ಮಾಡಲಾಗಿದೆ.

ಸ್ಥಳ ಮತ್ತು ವಿಸ್ತಾರ

ಮೇಲುಕೋಟೆ ವನ್ಯಜೀವಿ ಅಭಯಾರಣ್ಯ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿದೆ.ಅಭಯಾರಣ್ಯ ಪಾಂಡವಪುರ, ಕೆ.ಆರ್.ಪೇಟೆ ಮತ್ತು ನಾಗಮಂಗಲ ಈ ಮೂರು ತಾಲೂಕುಗಳಲ್ಲಿ ವ್ಯಾಪಿಸಿದೆ.ಅಭಯಾರಣ್ಯದ ಒಟ್ಟು ವಿಸ್ತೀರ್ಣ 49.82 ಚ.ಕಿ.ಮೀ. ಆಗಿದೆ.

ಮಹತ್ವ

ಏರುತಗ್ಗಿನ ಪ್ರದೇಶ, ಬಂಡೆ ಬೆಟ್ಟಗಳು ಮತ್ತು ಮಿಶ್ರ ಒಣ ಎಲೆಯುದುರುವ ಕಾಡುಗಳು ಅಳಿವಿನಂಚಿನಲ್ಲಿರುವ ತೋಳಕ್ಕೆ ಆದರ್ಶ ವಾಸಸ್ಥಳವಾಗಿದೆ.ತೋಳಗಳ ಸಂತತಿಯ ಅಂದಾಜನ್ನು ಈವರೆಗೆ ಮಾಡಿಲ್ಲವಾದರೂ ಅವು ಕಂಡುಬರುವುದು ವಿರಳವಾಗಿದೆ.ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ತಮ್ಮ ಕುರಿಗಳನ್ನು ಕಾಯ್ದುಕೊಳ್ಳಲು ಹಳ್ಳಿಗರು ತೋಳಗಳನ್ನು ಅಕ್ರಮವಾಗಿ ಬೇಟೆಯಾಡುವುದು ಹಿಂದಿನ ದಿನಗಳಲ್ಲಿ ಸಾಮಾನ್ಯವಾಗಿತ್ತು.ಅದಾಗ್ಯೂ, ಈ ಪ್ರದೇಶವನ್ನು ಅಭಯಾರಣ್ಯ ಎಂದು ಘೋಷಿಸಿದ ನಂತರ ಈ ಪದ್ಧತಿ ನಿಂತಿದೆ.ಈ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕೃಷ್ಣ ಮೃಗಗಳೂ ಕಂಡುಬರುತ್ತವೆ.

ಭೂದೃಶ್ಯ

ಈ ಪ್ರದೇಶ ಬೆಟ್ಟಗಳು ಮತ್ತು ಬಂಡೆಗಳಿಂದ ಕೂಡಿದೆ.ಎತ್ತರ 892 ಮೀ. ನಿಂದ 1127 ಮೀಟರ್‌ಗಳವರೆಗೆ ವ್ಯತ್ಯಾಸ ಹೊಂದಿದೆ, ಅತಿ ಎತ್ತರದ ಸ್ಥಳ ಗರಿಕಲ್ಲು ಬೆಟ್ಟ.ನಾರಾಯಣದುರ್ಗ ಬೆಟ್ಟ ಅದರ ಸ್ಥಳ ಮತ್ತು ವಿನ್ಯಾಸದಿಂದಾಗಿ ಆಕರ್ಷಕವಾಗಿದೆ.ಬಂಡೆ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಹಳೆಯ ಕೋಟೆ ಸ್ಥಳೀಯ ರಾಜನ ಆಡಳಿತದ ಕಾಲದಲ್ಲಿ ಪ್ರಸಿದ್ಧವಾಗಿತ್ತು.ಈ ಭಾಗಕ್ಕೆ ಪ್ರವೇಶಿಸುವುದು ಕಷ್ಟ ಏಕೆಂದರೆ ಇದು ಕಡಿದಾದ ಪ್ರದೇಶವಾಗಿದ್ದು, ಏಕೈಕ ಜಿಮ್ನೊಸ್ಪರ್ಮ್‌ ಆದ ಸೈಕಸ್‌ ಸಿರ್ಸಿನಾಲಿಸ್, ವಂದಾ ಸಪ್ತುಲತಾ (ಸೀತಾಳ ಗಿಡ), ಕೆಸರು ಮಣ್ಣಿನ ಜಾಗಗಳು ಮತ್ತು ಬಂಡೆಗಳ ಕೊರಕಲುಗಳುಗಳಲ್ಲಿ ಕಂಡುಬರುವ ಡ್ರೊಸೆರಾ ಬರ್ಮನಿಗಳಂಥ ವೈವಿಧ್ಯಮಯ ಪ್ರಭೇದಗಳು ಇವೆ, ಸಂಶೋಧನಾ ಚಟುವಟಿಕೆಗಳ ಮೂಲಕ ಪ್ರಭೇದಗಳನ್ನು ಅನ್ವೇಷಿಸಲು ವಿಸ್ತೃತವಾದ ಅಧ್ಯಯನದ ಅಗತ್ಯವಿದೆ. ಮೇಲುಕೋಟೆ ಅಭಯಾರಣ್ಯ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು ವಿಶಿಷ್ಟ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಆಶ್ರಯ ನೀಡಿದೆ. ಒಣ ಎಲೆಯುದುರುವ ಕಾಡುಗಳಲ್ಲಿ ಕಂಡುಬರುವ ಏಕೈಕ ಜಿಮ್ನೊಸ್ಪರ್ಮ್‌ (ಹಣ್ಣಿಲ್ಲದೆ ಬೀಜಗಳನ್ನು ಹೊಂದಿರುವ ಸಸ್ಯ) ಅಳಿವಿನಂಚಿನಲ್ಲಿರುವ ಸೈಕಸ್‌ ಸಿರ್ಸಿನಾಲಿಸ್‌, ಈ ಅಭಯಾರಣ್ಯಕ್ಕೆ ಸ್ಥಳೀಯವಾಗಿದೆ.ಈ ಅಭಯಾರಣ್ಯವನ್ನು ಮುಖ್ಯವಾಗಿ ತೋಳಗಳು ಮತ್ತು ಸೈಕಸ್‌ಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಪ್ರಭೇದಗಳಿಗೆ ಸಂರಕ್ಷಣೆ ಒದಗಿಸಲು ಘೋಷಣೆ ಮಾಡಲಾಗಿದ್ದು, ಅವುಗಳನ್ನು ಗರಿಷ್ಠ ಮಟ್ಟಕ್ಕೆ ಪ್ರಸರಣ ಮಾಡಲು ಮತ್ತು ಅಳಿವಿನಂಚಿನಿಂದ ಅವುಗಳನ್ನು ಪಾರು ಮಾಡಲು ಸಾಧ್ಯವಾಗುತ್ತದೆ.

ESZ.

ದಿನಾಂಕ 21-09-2017ರಂದು ಅಪ &ಹಬ ಸಚಿವಾಲಯ ESZ ಅಧಿಸೂಚನೆಯನ್ನು ಜಾರಿ ಮಾಡಿದೆ.

ವಿಸಿಟರ್ ಕಾರ್ನರ್

ಮಾಡಬೇಕಾದ ಕೆಲಸಗಳುನೋಡಿ

-

ತಲುಪುವುದು ಹೇಗೆನೋಡಿ

ಈ ಅಭಯಾರಣ್ಯವು ಮಂಡ್ಯ ಪಟ್ಟಣದಿಂದ 35 ಕಿ.ಮೀ ಮತ್ತು ಮೈಸೂರು ನಗರದಿಂದ 60 ಕಿ.ಮೀ ದೂರದಲ್ಲಿದೆ. ಹತ್ತಿರದ ಪಾಂಡವಪುರದ ರೈಲು ನಿಲ್ದಾಣವು ಅಭಯಾರಣ್ಯದಿಂದ 25 ಕಿ.ಮೀ ದೂರದಲ್ಲಿದೆ. ಅಭಯಾರಣ್ಯದಿಂದ ಸುಮಾರು 68 ಕಿ.ಮೀ ದೂರದಲ್ಲಿರುವ ಮೈಸೂರಿನಲ್ಲಿ ಹತ್ತಿರದ ವಿಮಾನ ನಿಲ್ದಾಣವಿದೆ.

ಭೇಟಿ ನೀಡಬಹುದಾದ ಸಮಯ ಮತ್ತು ಋತುಗಳುನೋಡಿ

ಅನ್ವಯಿಸುವುದಿಲ್ಲ

ಶುಲ್ಕಗಳು ಮತ್ತು ಅನುಮತಿಗಳುನೋಡಿ

ಅನ್ವಯಿಸುವುದಿಲ್ಲ

ಬುಕಿಂಗ್ / ಕಾಯ್ದಿರಿಸುವಿಕೆನೋಡಿ

ಅನ್ವಯಿಸುವುದಿಲ್ಲ

ಹವಾಮಾನನೋಡಿ

-

ಇಂಟರ್ನೆಟ್ ಮತ್ತು ಮೊಬೈಲ್ ಸಂಪರ್ಕನೋಡಿ

-

ಪದೇಪದೆ ಕೇಳಲಾಗುವ ಪ್ರಶ್ನೆಗಳುನೋಡಿ

-

ಶಿಷ್ಟಾಚಾರ ಪಾಲನೆ ಮತ್ತು ನಿಷಿದ್ಧ ಚಟುವಟಿಕೆಗಳು ನೋಡಿ

ಮಾಡಿರಿ

1. ಸ್ಥಳೀಯ ಸಿಬ್ಬಂದಿಯೊಂದಿಗೆ ಸಮಯವನ್ನು ಪರಿಶೀಲಿಸಿ ವೇಳಾಪಟ್ಟಿಯನ್ನು ಪಾಲಿಸಿ. ನಿಗದಿತ ಸಮಯವನ್ನು ಹೊರತುಪಡಿಸಿ ಯಾವುದೇ ಪ್ರವೇಶವನ್ನು ಸಂರಕ್ಷಿತ ಪ್ರದೇಶಗಳಲ್ಲಿ ಅತಿಕ್ರಮಣವೆಂದು ಪರಿಗಣಿಸಲಾಗುತ್ತದೆ. 2. ನಿಧಾನಗತಿಯಲ್ಲಿ ವಾಹನಗಳನ್ನು ಓಡಿಸಿ. 3. ಕಸದ ಬುಟ್ಟಿಯನ್ನು ಬಳಸಿ. 4. ಮಾಹಿತಿ ಕಿರುಪುಸ್ತಕಗಳಲ್ಲಿ, ಸಂಕೇತ ಫಲಕಗಳಲ್ಲಿ ಸೂಚಿಸಲಾದ ಸೂಚನೆಗಳನ್ನು ಪಾಲಿಸಬೇಕು. 5. ಬೈಯೋಡೀಗ್ರೇಡಬಲ್ ವಸ್ತುಗಳನ್ನು ಬಳಸಿ.

ಮಾಡಬೇಡಿರಿ

1. ಯಾವುದೇ ಪ್ಯಾಕೇಜಿಂಗ್, ಪ್ಲಾಸ್ಟಿಕ್ ಬಾಟಲಿಗಳು, ಯಾವುದೇ ಕಸವನ್ನು ಹೊರಾಂಗಣದಲ್ಲಿ ಎಲ್ಲಿಯೂ ಎಸೆಯಬೇಡಿ. 2. ಅರಣ್ಯ ಹಾದಿಗಳಲ್ಲಿ ಅನಗತ್ಯ ಮತ್ತು ಹೆಚ್ಚಿನ ಶಬ್ದ ಮಾಡುವುದನ್ನು ತಪ್ಪಿಸಿ. 3. ಯಾವುದೇ ವನ್ಯ ಜೀವಿಗಳಿಗೆ ಕಿರುಕುಳ ನೀಡಬೇಡಿ. 4. ಪಕ್ಷಿಗಳಿಗೆ ತೊಂದರೆ ಕೊಡಬೇಡಿ, ಕಲ್ಲುಗಳನ್ನು ಎಸೆಯಬೇಡಿ, ಛಾಯಾಚಿತ್ರಗಳಿಗಾಗಿ ಓಡಬೇಡಿ. 5.ನೀರಿನ ಮಾಲಿನ್ಯವನ್ನು ಮಾಡಬೇಡಿ. ಕಲುಷಿತ ನೀರು ಪಕ್ಷಿಗಳಿಗೆ ಹಾನಿಕಾರಕ. 6. ಅಭಯಾರಣ್ಯಕ್ಕೆ ನಿಮ್ಮ ಸಾಕುಪ್ರಾಣಿಗಳೊಂದಿಗೆ (ನಾಯಿಗಳು, ಬೆಕ್ಕು ಇತ್ಯಾದಿ) ಬರಬೇಡಿ. 7. ಅಭಯಾರಣ್ಯದಲ್ಲಿ ಹಣ್ಣುಗಳು, ಸಸ್ಯಗಳು ಮತ್ತು ಹೂವುಗಳನ್ನು ಕೀಳಬೇಡಿ (ಲೋಟಸ್ ಮತ್ತು ವಾಟರ್ ಲಿಲ್ಲಿಗಳು)