ವಿಭಾಗದ ಬಗ್ಗೆ
ಕಾರ್ಯ ಯೋಜನೆ ಎಂದರೆ ಅರಣ್ಯದ ವೈಜ್ಞಾನಿಕ ನಿರ್ವಹಣೆಗಾಗಿ ಸೂಚನೆಗಳನ್ನು ನೀಡುವ ಲಿಖಿತ ದಾಖಲೆ.ರಾಜ್ಯದ ಪ್ರತಿ ಅರಣ್ಯ ವಿಭಾಗಕ್ಕೆ 10 ವರ್ಷಗಳ ಅವಧಿಗೆ ಕಾರ್ಯ ಯೋಜನೆ (ಕಾಯೋ) ಸಿದ್ಧಪಡಿಸುವುದಕ್ಕೆ ಕಾರ್ಯ ಯೋಜನೆ ಘಟಕ ಜವಾಬ್ದಾರವಾಗಿದೆ.ವಿವಿಧ ವರ್ಗಗಳ ಭೂಮಿಯನ್ನು ಅರಣ್ಯಗಳು ಎಂದು ಅಧಿಸೂಚನೆ ಮಾಡಿದಾಗ ಅರಣ್ಯ ಪ್ರದೇಶಗಳ ಸರ್ವೇ ಮತ್ತು ಗಡಿ ಗುರುತಿಸುವಿಕೆ ಮಾಡಲು ಸಹ ಇದು ಜವಾಬ್ದಾರಿ ಹೊಂದಿದೆ.ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ಕರ್ನಾಟಕ ಅರಣ್ಯ ನಿಯಮ 1969ಗಳಡಿ ಇರುವ ಸಂಬಂಧಪಟ್ಟ ನಿಬಂಧನೆಗಳ ಅನುಸಾರ ಅರಣ್ಯಗಳನ್ನು ಮೀಸಲು ಅರಣ್ಯಗಳು, ಸಂರಕ್ಷಿತ ಅರಣ್ಯಗಳು, ಡೀಮ್ಡ್ ಅರಣ್ಯಗಳು, ಸಣ್ಣ ಅರಣ್ಯಗಳು ಮುಂತಾಗಿ ಅನುಸೂಚಿತಗೊಳಿಸಲು ಕೂಡ ಕಾರ್ಯ ಯೋಜನೆ ಘಟಕ ಜವಾಬ್ದಾರವಾಗಿದೆ.